Advertisement

ಜಯಂತಿ ಆಚರಣೆಗೆ ಅಧಿಕಾರಿಗಳ ನಿರ್ಲಕ್ಷ್ಯ: ಆಕ್ರೋಶ

01:13 PM Oct 18, 2018 | |

ಹರಪನಹಳ್ಳಿ; ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತವತಿಯಿಂದ ಕಿತ್ತೂರು ರಾಣಿ ಚನ್ನಮ್ಮ ಹಾಗೂ ವಾಲ್ಮೀಕಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಗೆ ತಹಶೀಲ್ದಾರ್‌ ಮಧು ಡಾ| ಎನ್‌.ಎನ್‌. ಮಧು ತಡವಾಗಿ ಬಂದಿದ್ದರಿಂದ ವಿವಿಧ ಸಮಾಜ ಮುಖಂಡರಿಂದ ಆಕ್ರೋಶ ವ್ಯಕ್ತವಾಯಿತು.

Advertisement

ಪೂರ್ವಭಾವಿ ಸಭೆ ವಿವಿಧ ಸಮಾಜಗಳ ಮುಖಂಡರು ಹಾಗೂ ಅಧಿಕಾರಿಗಳು ಆಗಮಿಸಿದ್ದರು. ತಹಶೀಲ್ದಾರ್‌ ಅವರು ಮಧ್ಯಾಹ್ನ 12.30 ಸಮಯವಾದರೂ ಆಗಮಿಸಲಿಲ್ಲ. ಅಧಿಕಾರಿಗಳ ವರ್ತನೆಯಿಂದ ರೋಸಿಹೋದ ಮುಖಂಡರಾದ ನಿಚ್ಚವ್ವನಹಳ್ಳಿ ಭೀಮಪ್ಪ, ಎಚ್‌.ಟಿ. ಗಿರೀಶಪ್ಪ, ತಲವಾಗಲು ಮಲ್ಲಿಕಾರ್ಜುನ್‌, ಬೇಲೂರು ಅಂಜಪ್ಪ ಅವರು ಬೇಸರ ವ್ಯಕ್ತಪಡಿಸಿದರು. 

ಸಭೆಗೆ ಬೆರಣಿಕೆಯಷ್ಟು ಅಧಿಕಾರಿಗಳು ಮಾತ್ರ ಆಗಮಿಸಿದ್ದಾರೆ. ಕೆಲವರು ಕಚೇರಿ ಸಿಬ್ಬಂದಿ ಕಳುಹಿಸಿದ್ದಾರೆ. ಪ್ರತಿ ಬಾರಿಯೂ ಅಧಿಕಾರಿಗಳಿಗೆ ನೋಟಿಸ್‌ ಕೊಡುವುದಾಗಿ ಹೇಳುತ್ತೀರಿ. ಯಾರು ನಿಮ್ಮ ನೊಟೀಸ್‌ಗೆ ಹೆದರಿಕೊಂಡು ಸಭೆಗೆ ಬರುತ್ತಿದ್ದಾರೆ ಹೇಳಿ ಎಂದು ಸಮಾಜಕಲ್ಯಾಣ ಅಕಾರಿ ಆನಂದ ಡೊಳ್ಳಿನ್‌ ಅವರನ್ನು ಮುಖಂಡರು ಪ್ರಶ್ನಿಸಿದರು.

ಸಮಾಜದ ಮುಖಂಡರು ಮತ್ತು ಸಂಘ, ಸಂಸ್ಥೆಗಳ ಪದಾಧಿಕಾರಿಗಳನ್ನು ಅಧಿಕಾರಿಗಳು ಒಂದೂವರೆ ತಾಸು ಕಾಯಿಸುತ್ತಿದ್ದಾರೆ. ಬೇಕಿದ್ದರೆ ಮತ್ತೂಂದು ದಿನ ಸಭೆ ನಡೆಸಲಿ, ಸಭೆ ಬಹಿಷ್ಕರಿಸಿ ಹೊರ ನಡೆಯೋಣ ಎಂದು ಉಪನ್ಯಾಸಕ ಎಚ್‌. ಮಲ್ಲಿಕಾರ್ಜುನ್‌ ಸಲಹೆ ನೀಡಿದಾಗ ಬೇಲೂರು ಅಂಜಪ್ಪ, ಎಚ್‌.ಟಿ. ಗಿರೀಶಪ್ಪ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು. 

ಬಳಿಕ ಸಭೆಯಿಂದ ಹೊರ ನಡೆಯಲು ಮುಂದಾದಾಗ ತಹಶೀಲ್ದಾರ್‌ ಡಾ| ಎನ್‌.ಎನ್‌. ಮಧು ಅವರು ಆಗಮಿಸಿದರು. ಆರಸೀಕೆರೆಯಿಂದ ಬರುವಾಗ ವಾಹನ ಪಂಚರ್‌ ಆಗಿತ್ತು. ಹಾಗಾಗಿ ಕ್ಷಮಿಸಿ ಎಂದು ವಿವಿಧ ಸಮಾಜದ ಮುಖಂಡರನ್ನು ಕೋರಿದರು.

Advertisement

ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಗೆ ಆಗಮಿಸಿಲ್ಲ. ದಾರ್ಶನಿಕರ ಜಯಂತಿಗಳ ಆಚರಣೆಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನೀವು ಸಭೆ ನಡೆಸಿದರದೂ ಏನೂ ಪ್ರಯೋಜನವಿಲ್ಲ. ಸಭೆ ಮಂದೂಡಿ ಎಂದು ಹಲವು ಮುಖಂಡರು ತಹಶೀಲ್ದಾರ್‌ ಅವರನ್ನು ಒತ್ತಾಯಿಸಿದರು.

 ದಸರಾ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳಿವೆ. ನಂತರ ಸಭೆ ನಡೆಸುವುದು ಕಷ್ಟವಾಗುತ್ತಿದೆ. ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗುವುದು. ಕಡ್ಡಾಯವಾಗಿ ಎಲ್ಲ ಜಯಂತಿ ಹಾಗೂ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಭಾಗವಹಿಸಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಅ. 23ರಂದು ಪಟ್ಟಣದ ನಟರಾಜ ಕಲಾಭವನದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಹಾಗೂ ಅ. 24ರಂದು ಜ್ಯೂನಿಯರ್‌
ಕಾಲೇಜ್‌ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಯಿತು. ಪಟ್ಟಣದ ಐಬಿ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಮೆರವಣಿಗೆ ಹಾಗೂ ಆಯಾ ಸಮಾಜದ ಪ್ರತಿಭಾವಂತ  ವಿದ್ಯಾ ಕಾರಿಗಳಿಗೆ ಪ್ರತಿಭಾ ಪುರಸ್ಕಾರ
ನೀಡಲು ನಿರ್ಧರಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳಿಗೆ ಕಾರ್ಯಕ್ರಮದ ಜವಾಬ್ದಾರಿ ವಹಿಸಲಾಯಿತು.

ಸಿಪಿಐ ಡಿ. ದುರುಗಪ್ಪ, ವಿವಿಧ ಸಮಾಜದ ಮುಖಂಡರಾದ ನಿಚ್ಚವ್ವನಹಳ್ಳಿ ಪರುಶುರಾಮಪ್ಪ, ಪಾಟೀಲ್‌ ಬೆಟ್ಟನಗೌಡ, ಶಿರಹಟ್ಟಿ ದಂಡೆಪ್ಪ, ಅರಸೀಕೆರೆ ಸುರೇಶ್‌, ರವಿ ಅಧಿಕಾರ್‌, ನೀಲಗುಂದ ಮನೋಜ್‌, ಲೀಲಾ ಲಿಂಗರಾಜ್‌, ನಾಗರಾಜ್‌, ಸೋಮನಾಥ್‌, ಸಿ.ಲೋಕ್ಯನಾಯ್ಕ, ನಾಗರಾಜ್‌, ಕಬ್ಬಳ್ಳಿ ಮೈಲಪ್ಪ, ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next