Advertisement

2 ಡೋಸ್‌ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ

04:05 PM Sep 17, 2021 | Team Udayavani |

ಗುಂಡ್ಲುಪೇಟೆ: ತಾಲೂಕಿನ ತಮಿಳುನಾಡು ಗಡಿಭಾಗ ಕೆಕ್ಕನಹಳ್ಳಿ ಚೆಕ್‌ಪೋಸ್ಟ್‌ಗೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಭೇಟಿ ನೀಡಿ ನಿಫಾ ಹಾಗೂ
ಕೋವಿಡ್‌ ತಪಾಸಣೆ ಕುರಿತು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ. ಆರ್‌.ರವಿ, ತಮಿಳುನಾಡಿನಲ್ಲಿ ಪ್ರವಾಸಿ ತಾಣಗಳಿಗೆ ಅವಕಾಶ ನೀಡಿರುವ ಹಿನ್ನೆಲೆ ಬಂಡೀಪುರದ ಕೆಕ್ಕನಹಳ್ಳ ಮಾರ್ಗವಾಗಿ ಸಂಚಾರ ದಟ್ಟಣೆ ಹೆಚ್ಚಿದೆ.

Advertisement

ನಿತ್ಯ ಸಾವಿರಾರು ಮಂದಿ ಬೆಂಗಳೂರು, ಮೈಸೂರು ಸೇರಿದಂತೆ ಇತರೆಡೆಯಿಂದ ಊಟಿಗೆ ತೆರಳಲು ಆಗಮಿಸುತ್ತಿದ್ದಾರೆ. ದ್ವಿಚಕ್ರ ವಾಹನ ಸವಾರರು ಹೆಚ್ಚಿರುವ ಹಿನ್ನೆಲೆ ಪ್ರತಿಯೊಬ್ಬರನ್ನು ಥರ್ಮಲ್‌ ಸ್ಕ್ಯಾನಿಂಗ್ ಮಾಡಬೇಕು. ಜ್ವರ, ನೆಗಡಿ ಇನ್ನಿತರ ಯಾವುದೇ ಸಮಸ್ಯೆ ಇದ್ದರೂ ರಾಜ್ಯಕ್ಕೆ ಪ್ರವೇಶ ನೀಡದೆ ವಾಪಸ್‌ ಕಳುಹಿಸಬೇಕು ಎಂದರು.

ಆರ್‌ಟಿಪಿಸಿಆರ್‌ ವರದಿ ಇಲ್ಲದಿದ್ದರೂ ಎರಡು ಲಸಿಕೆ, ಇ-ಪಾಸ್‌ ತೋರಿಸಿದರೆ ತಮಿಳುನಾಡು ರಾಜ್ಯ ಪ್ರವೇಶ ನೀಡುತ್ತಿದೆ. ಆದರೆ, ಕೆಕ್ಕನಹಳ್ಳ ಚೆಕ್‌ ಪೋಸ್ಟ್‌ ಮೂಲಕ ನಮ್ಮ ತಾಲೂಕಿಗೆ ಪ್ರವೇಶಿಸುವವರು ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ತರಬೇಕು ಎಂದು ಸೂಚಿಸಿದರು.

ಇದನ್ನೂ ಓದಿ:ಸರ್ಕಾರಿ ಪಿಯು ಕಾಲೇಜು ಪ್ರವೇಶಕ್ಕೆ ದುಬಾರಿ ಶುಲ್ಕ ವಸೂಲಿ ಸರಿನಾ?

ತಹಶೀಲ್ದಾರ್‌ ಸಿ.ಜಿ.ರವಿಶಂಕರ್‌ ಮಾತನಾಡಿ, ಗಡಿ ಮೂಲಕ ಅಂತರಾಜ್ಯ ಸಂಚಾರ ಮಾಡುವ ಶೇ.80ರಷ್ಟು ಪ್ರವಾಸಿಗರು ನೆಗೆಟಿವ್‌ ವರದಿ
ತರುತ್ತಿದ್ದಾರೆ. ಮಾಹಿತಿ ಇಲ್ಲದ ಕೆಲವೇ ಮಂದಿ ಮಾತ್ರ ಹಾಗೇ ಬರುತ್ತಿದ್ದಾರೆ. ಇಂತವರನ್ನು ವಾಪಸ್‌ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದರು.

Advertisement

ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ವೆಂಕಟಸ್ವಾಮಿ, ತಾಪಂ ಇಒ ಶ್ರೀಕಂಠರಾಜೇ ಅರಸು ಸೇರಿದಂತೆ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next