Advertisement

37 ಜನರಿಗೆ ನೆಗೆಟೀವ್‌: ಸಮಾಧಾನದ ನಿಟ್ಟುಸಿರು

10:43 AM Apr 03, 2020 | Suhan S |

ಚಿಕ್ಕಬಳ್ಳಾಪುರ: ಮಾರ್ಚ್‌ 11ರಿಂದ 18ರ ವರೆಗೆ ದೆಹಲಿಯ ನಿಜಾಮುದ್ದೀನ್‌ ಧಾರ್ಮಿಕ ಸಮಾವೇಶದಲ್ಲಿ ಜಿಲ್ಲೆಯಿಂದ ಒಟ್ಟು 37 ಮಂದಿ ಪಾಲ್ಗೊಂಡಿದ್ದು, ಅದರಲ್ಲಿ ಸಿಆರ್‌ ಪಿಎಫ್ ಯೋಧರೊಬ್ಬರು ಪಾಲ್ಗೊಂಡಿದ್ದಾಗಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಆರ್‌.ಲತಾ, ವಾಪಸು ಬಂದಿರುವವರ ಪೈಕಿ ಯಾರಿಗೂ ಕೋವಿಡ್ 19 ಸೋಂಕು ದೃಢಪಟ್ಟಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

Advertisement

ಜಿಪಂ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ. 37 ಮಂದಿ ಪೈಕಿ 31 ಮಂದಿ ಐವತ್ತು ದಿನ ಈಗಾಗಲೇ ಪೂರೈ ಸಿದ್ದು,ಅವರಲ್ಲಿ ಕೋವಿಡ್ 19 ಲಕ್ಷಣಗಳು ಕಂಡುಬಂದಿರುವುದಿಲ್ಲ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೂಲಗಳ ಪ್ರಕಾರ ಜಿಲ್ಲೆಯಿಂದ ದೆಹಲಿಯ ಜಮಾತ್‌ ಮಸೀದಿ ತೆರಳಿದವರು ಹಾಗೂ ಜಮಾತ್‌ ಮಸೀದಿಗೆ ಭೇಟಿ ನೀಡದೆ ಇತರೆ ಕಾರಣಗಳಿಗೆ ತೆರಳಿದ್ದವರು ಒಟ್ಟು 37 ಜನರು. ಇವರಲ್ಲಿ 31 ಜನರು ಈಗಾಗಲೇ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಿರುತ್ತಾರೆ. ಇದರಲ್ಲಿ ಚಿಕ್ಕಬಳ್ಳಾಪುರದಿಂದ 2 ಜನ, ಗೌರಿಬಿದನೂರು 25 ಜನ, ಬಾಗೇಪಲ್ಲಿ 1, ಶಿಡ್ಲಘಟ್ಟ 2 ಜನ, ಚಿಂತಾಮಣಿ 7 ಜನ ಒಟ್ಟು 37 ಜನರು ಕಂಡುಬಂದಿದ್ದಾರೆ. ಜಮಾತ್‌ಗೆ ಹೋಗಿರುವವರಲ್ಲದೆ ದೆಹಲಿಗೆ ಯಾರೇ ಪ್ರಯಾಣಿಸಿದ್ದರೂ ಅವರನ್ನು ಸಹ ತನಿಖೆ ಮಾಡ ಲಾಗುತ್ತಿದೆ ಎಂದರು.

31 ಜನರು 50 ದಿನ ಪೂರೈಸಿದ್ದು, ಇಬ್ಬರು 14 ದಿನದ ಹೋಂ ಕೋರಂಟೈನ್‌ ಮುಗಿಸಿದ್ದಾರೆ. ಓರ್ವ ವಿದ್ಯಾರ್ಥಿ ದೆಹಲಿಗೆ ಶಿಕ್ಷಣಕ್ಕೆಂದು ಹೋಗಿರುವುದಾಗಿ ಕಂಡುಬಂದಿದೆ. ಉಳಿದ ಮೂವರು ಪ್ರವಾಸಿಗರಾಗಿ ಹೋಗಿದ್ದಾರೆ. ಹೊರೆತು ಜಮಾತ್‌ ಮಸೀದಿಗೆ ಹೋಗಿಲ್ಲ.

ಜಿಲ್ಲೆಯ ಗೌರಿಬಿದನೂರಿನಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿರುವುದರಿಂದ ಅಲ್ಲಿನ ಹಿರೇಬಿದನೂರಿನಲ್ಲಿ ಕೊರೊನಾ ಶಂಕಿತರು ಇರುವ ಸ್ಥಳದಲ್ಲಿ 800 ಜನಕ್ಕೆ ಸ್ಟಾಂಪಿಂಗ್‌ ಹಾಕಲಾಗಿದೆ ಹಾಗೂ ಅವರ ಮನೆಯ ಮುಂದೆ ಪೋಸ್ಟರ್‌ ಕೂಡ ಹಾಕಲಾಗಿದೆ. ಅವರು ಯಾವುದೇ ಕಾರಣಕ್ಕೂ ಹೊರಗೆ ಬಾರದಂತೆ ಸೂಚಿಸಿದ್ದೇವೆ.  –ಆರ್‌.ಲತಾ, ಜಿಲ್ಲಾಧಿಕಾರಿ

Advertisement

ಜಿಲ್ಲೆಗೆ ವಿದೇಶಗಳಿಂದ 200 ಮಂದಿ ಆಗಮನ: ಜಿಲ್ಲೆಗೆ ಇದುವರೆಗೂ ವಿದೇಶಗಳಿಂದ 200 ಮಂದಿ ಆಗಮಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 10 ಪಾಸಿಟೀವ್‌ ಪ್ರಕರಣ ವರದಿಯಾಗಿದೆ. ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಕೋವಿಡ್ 19 ಸೋಂಕಿನಿಂದಾಗಿ ಮೃತಪಟ್ಟಿರು ತ್ತಾರೆ. ಪಾಸಿಟೀವ್‌ ಪ್ರಕರಣಗಳ ಜೊತೆ ನೇರವಾಗಿ ಸಂಪರ್ಕದಲ್ಲಿದ್ದ 99 ಜನರನ್ನು ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸ ಲಾಗಿದೆ. ಹೈರಿಸ್ಕ್ನಲ್ಲಿದ್ದ 18 ಜನರನ್ನು ಕೊರೊನಾ ಸೋಂಕು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ 18 ಜನರ ವರದಿ ನೆಗೆಟೀವ್‌ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next