Advertisement

ಹಾರರ್‌ ವಜ್ರಮುಖಿ

04:44 AM Mar 29, 2019 | Team Udayavani |

ಇಲ್ಲಿಯವರೆಗೆ ಗ್ಲಾಮರಸ್‌ ಲುಕ್‌ನಲ್ಲಿ ಸಿನಿ ಪ್ರಿಯರ ಗಮನ ಸೆಳೆದಿದ್ದ ನಟಿ ನೀತೂ ಶೆಟ್ಟಿ ಈಗ ಹಾರರ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋದಕ್ಕೆ ರೆಡಿಯಾಗಿದ್ದಾರೆ. ಹೌದು, ನೀತೂ ಅಭಿನಯದ ಮುಂಬರುವ ಚಿತ್ರ “ವಜ್ರಮುಖಿ’ ತೆರೆಗೆ ಬರೋದಕ್ಕೆ ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ ಮತ್ತು ಟ್ರೇಲರ್‌ನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಮೋಷನ್‌ ಕಾರ್ಯಗಳಿಗೆ ಚಾಲನೆ ನೀಡಿದೆ.

Advertisement

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್‌.ಎ ಚಿನ್ನೇಗೌಡ, ಪದಾಧಿಕಾರಿಗಳಾದ ಕರಿಸುಬ್ಬು, ಶಿಲ್ಪಾ ಶ್ರೀನಿವಾಸ್‌, ಬಾ.ಮಾ ಹರೀಶ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು, “ವಜ್ರಮುಖೀ’ ಚಿತ್ರದ ಆಡಿಯೋವನ್ನು ಹೊರತಂದು ಚಿತ್ರತಂಡಕ್ಕೆ ಶುಭ ಕೋರಿದರು. “ವಜ್ರಮುಖೀ’ ಚಿತ್ರದ ಹಾಡುಗಳಿಗೆ ರಾಜ್‌ ಭಾಸ್ಕರ್‌ ಸಂಗೀತ ಸಂಯೋಜನೆಯಿದ್ದು, ಡಾ. ವಿ ನಾಗೇಂದ್ರ ಪ್ರಸಾದ್‌ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಪಿ.ಕೆ.ಹೆಚ್‌ ದಾಸ್‌ ಚಿತ್ರದ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. “ಶ್ರೀ ಸಿಗಂದೂರು ಚೌಡೇಶ್ವರಿ ಸಿನಿ ಕಂಬೈನ್ಸ್‌’ ಬ್ಯಾನರ್‌ನಲ್ಲಿ ಶಶಿಕುಮಾರ್‌ ಪಿ.ಎಂ ಕಥೆ, ಚಿತ್ರಕಥೆ ಬರೆದು ನಿರ್ಮಿಸಿರುವ “ವಜ್ರಮುಖೀ’ ಚಿತ್ರಕ್ಕೆ ಎನ್‌. ಆದಿತ್ಯ ಕುಣಿಗಲ್‌ ಅವರ ಸಂಕಲನ ಮತ್ತು ನಿರ್ದೇಶನವಿದೆ. “ವಜ್ರಮುಖೀ’ ಚಿತ್ರದಲ್ಲಿ ನೀತೂ ಶೆಟ್ಟಿ ಅವರೊಂದಿಗೆ ದಿಲೀಪ್‌ ಪೈ, ಸಂಜನಾ ಮೊದಲಾದ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ “ವಜ್ರಮುಖಿ’ ಚಿತ್ರದಲ್ಲಿ ಹಾರರ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ನೀತೂ, ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಾರೆ. ಸದ್ಯ ಪ್ರಚಾರ ಕಾರ್ಯಗಳನ್ನು ಆರಂಭಿಸಿರುವ ಚಿತ್ರತಂಡ, ಶೀಘ್ರದಲ್ಲಿಯೇ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next