ನವದೆಹಲಿ: ವೈದ್ಯ ಸ್ನಾತಕೋತ್ತರ ಪದವಿಗಾಗಿ ಕೌನ್ಸೆಲಿಂಗ್ ಪ್ರಕ್ರಿಯೆ ಬುಧವಾರ (ಜ.12)ದಿಂದ ಶುರುವಾಗಲಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಭಾನುವಾರ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಸುಪ್ರೀಂಕೋರ್ಟ್ ಎಂಬಿಬಿಎಸ್, ವೈದ್ಯ ಸ್ನಾತಕೋತ್ತರ ಪದವಿಗಳಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಶೇ.10, ಇತರ ಹಿಂದುಳಿದ ವರ್ಗದವರಿಗೆ ಶೇ.27 ಮೀಸಲು ವ್ಯವಸ್ಥೆಯ ಜತೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟು, ತೀರ್ಪು ನೀಡಿತ್ತು.
ಪ್ರಕ್ರಿಯೆ ಬಗ್ಗೆ ಟ್ವೀಟ್ ಮಾಡಿದ ಕೇಂದ್ರ ಸಚಿವ ಮಾಂಡವಿಯಾ “ನಿವಾಸಿ ವೈದ್ಯರಿಗೆ ಕೇಂದ್ರ ಸರ್ಕಾರ ಭರವಸೆ ಕೊಟ್ಟಂತೆ ಮತ್ತು ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ನೀಟ್- ಪಿ.ಜಿ. ಕೌನ್ಸೆಲಿಂಗ್ ಜ.12ರಿಂದ ಶುರುವಾಗಲಿದೆ.
ಇದನ್ನೂ ಓದಿ:ಸಾಲ ನೀಡದ ಸಿಟ್ಟಿಗೆ ಪೆಟ್ರೋಲ್ ಸುರಿದು ಬ್ಯಾಂಕ್ ಗೆ ಬೆಂಕಿ ಇಟ್ಟ ಭೂಪ
ಈ ಕ್ರಮ ಕೊರೊನಾ ವಿರುದ್ಧದ ನಮ್ಮ ಹೋರಾಟಕ್ಕೆ ಹೆಚ್ಚಿನ ಬಲ ತಂದು ಕೊಡಲಿದೆ’ ಎಂದು ಬರೆದುಕೊಂಡಿದ್ದಾರೆ.