ನವದೆಹಲಿ: ರಾಷ್ಟ್ರಮಟ್ಟದ ವೈದ್ಯ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್ ಪಿ.ಜಿ. ಪ್ರವೇಶ ಪ್ರಕ್ರಿಯೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲ್ಯೂಎಸ್) ಮೀಸಲಾತಿಯನ್ನು ಯಾವ ರೀತಿ ಜಾರಿ ಮಾಡಲಾಗುತ್ತದೆ ಎಂದು ಸ್ಪಷ್ಟನೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಜೊತೆಗೆ, “ನೀಟ್ ಪಿ.ಜಿ.ಗೆ ಎಂಟು ಲಕ್ಷ ರೂ.ವರೆಗಿನ ಆದಾಯ ಮಿತಿ, ಕೌನ್ಸೆಲಿಂಗ್ ಪ್ರಕ್ರಿಯೆಗೆ ಕೂಡ ಅನ್ವಯವಾಗುತ್ತದೆ. ಹೀಗಾಗಿ, ಈ ಅರ್ಜಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ” ಎಂದು ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಸೂರ್ಯಕಾಂತ್ ಅವರನ್ನು ಒಳಗೊಂಡ ನ್ಯಾಯಪೀಠ ಸೋಮವಾರ ಸ್ಪಷ್ಟಪಡಿಸಿದೆ.
ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ನ್ಯಾಯಪೀಠ ಇಡಬ್ಲೂéಎಸ್ ಕೋಟಾವನ್ನು ತಡೆಹಿಡಿದಿಲ್ಲ. ನಿಯಮ ಪ್ರಕಾರ ಕೋಟಾ ಯಾವ ರೀತಿ ಜಾರಿಯಾಗಲಿದೆಯೋ ಅದರಂತೆ ಅನುಷ್ಠಾನವಾಗಲಿದೆ. ಮುಂದಿನ ತಿಂಗಳು ಈ ಬಗ್ಗೆ ನ್ಯಾಯಪೀಠ ನಿರ್ಧರಿಸಲಿದೆ. ಮೀಸಲು ಪ್ರಕ್ರಿಯೆಯನ್ನು ನಿಲ್ಲಿಸಲು ಸಾಧ್ಯವಿಲ್ಲ.
ಇದನ್ನೂ ಓದಿ:ಹಿಜಾಬ್ ವಿವಾದ ; ಸಾಗರ ತಾಲೂಕಿನಾದ್ಯಂತ ಹಲವು ವಿದ್ಯಾರ್ಥಿನಿಯರು ಮನೆಗೆ
ನ್ಯಾಯಪೀಠ ಏನು ನಿರ್ಧರಿಸುತ್ತದೆಯೋ ಅದು ನೀಟ್ ಪಿ.ಜಿ.ಗೂ ಅನ್ವಯವಾಗಲಿದೆ’ ಎಂದು ಪೀಠ ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ವಾದಿಸಿದ್ದ ವಕೀಲ ಅರವಿಂದ ದಾತಾರ್, ಇಡಬ್ಲ್ಯೂಎಸ್ ಕೋಟಾ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೇಗೆ ಅನ್ವಯವಾಗುತ್ತದೆ ಎಂಬ ಬಗ್ಗೆ ಸ್ಪಷ್ಟನೆ ಬಯಸಿದ್ದಾರೆ ಎಂದು ಅರಿಕೆ ಮಾಡಿಕೊಂಡಿದ್ದರು.