Advertisement

ಪ್ರಶ್ನೆಪತ್ರಿಕೆ ಸೋರಿಕೆಗೆ ಬುಲ್ಡೋಜರ್‌ ಕ್ರಮ? ತಪ್ಪಿತಸ್ಥರಿಗೆ ಭಾರೀ ದಂಡ

01:28 AM Jun 22, 2024 | Team Udayavani |

ಪಟ್ನಾ: ನೀಟ್‌, ಯುಜಿಸಿ ನೆಟ್‌ ಪರೀಕ್ಷೆಯ ಅಕ್ರಮಗಳು ಬಯಲಾದ ಬೆನ್ನಲ್ಲೇ ಉತ್ತರ ಪ್ರದೇಶ ಸರಕಾರವು ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಹಾಗೂ “ಸಾಲ್ವರ್‌ ಗ್ಯಾಂಗ್‌’ (ಪ್ರಶ್ನೆಪತ್ರಿಕೆ ಉತ್ತರಿಸಲು ಸಹಾಯ ಮಾಡುವವರು) ಮಟ್ಟ ಹಾಕಲು ಹೊಸ ಕಾನೂನು ಜಾರಿ ಮಾಡುವುದಕ್ಕೆ ಮುಂದಾಗಿದೆ.

Advertisement

ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪ್ರಶ್ನೆಪತ್ರಿಕೆ ಉತ್ತರಿಸಲು ಸಹಾಯ ಮಾಡು ವವರ ವಿರುದ್ಧ ಅತ್ಯಂತ ಕಠಿನ ಕ್ರಮ ಗಳನ್ನು ಕೈಗೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ತಪ್ಪಿತಸ್ಥರಿಗೆ ಭಾರೀ ಮೊತ್ತದ ದಂಡ, ಬುಲ್ಡೋಜರ್‌ ಕ್ರಮ ಹಾಗೂ ಜೈಲು ಶಿಕ್ಷೆ ವಿಧಿಸುವ ವಿಧಿಗಳನ್ನು ಈ ಕಾನೂನು ಹೊಂದಿರಲಿದೆ.

ಹೊಸ ನೀತಿ
ಅಲ್ಲದೆ ಪೇಪರ್‌ ಎಣಿಕೆಯನ್ನು ನಿಲ್ಲಿಸಲು ಸರಕಾರ ಹೊಸ ನೀತಿ ಯನ್ನು ಪ್ರಕಟಿಸಿದೆ. ಪ್ರತೀ ಪರೀಕ್ಷೆಯ ಪಾಳಿ ಕನಿಷ್ಠ ಎರಡು ವಿಭಿನ್ನ ಸೆಟ್‌ ಪ್ರಶ್ನೆಪತ್ರಿಕೆಗಳನ್ನು ಹೊಂದಿರುತ್ತದೆ ಮತ್ತು ಪ್ರತ್ಯೇಕ ಸಂಸ್ಥೆಗಳಿಂದ ಮುದ್ರಿಸ
ಲ್ಪಟ್ಟಿರುತ್ತದೆ. ಜತೆಗೆ ಪೇಪರ್‌ ಕೋಡಿಂಗ್‌ ಕಾರ್ಯ ವಿಧಾನ ಗಳನ್ನು ಹೆಚ್ಚು ವ್ಯವಸ್ಥಿತವಾಗಿ ಮಾಡ ಲಾಗಿರುತ್ತದೆ.

ಸರಕಾರಿ ಹೈಸ್ಕೂಲ್‌ಗ‌ಳು, ಪದವಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಪಾಲಿಟೆಕ್ನಿಕ್‌, ಎಂಜಿನಿಯರಿಂಗ್‌ ಕಾಲೇಜುಗಳ ಜತೆಗೆ ಯಾವುದೇ ಕಳಂಕವಿಲ್ಲದ ಮತ್ತು ಹೆಸರುವಾಸಿ ಶೈಕ್ಷಣಿಕ ಸಂಸ್ಥೆಗಳ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈ ಎಲ್ಲ ಕೇಂದ್ರಗಳಲ್ಲಿ ಸಿಸಿಟಿವಿ ಕಡ್ಡಾಯವಾಗಿರಬೇಕು.

ಹೆಚ್ಚು ಅಭ್ಯರ್ಥಿಗಳಿದ್ದರೆ 2 ಹಂತದಲ್ಲಿ ಪರೀಕ್ಷೆ
ಅಭ್ಯರ್ಥಿಗಳು ತಾವು ವಾಸವಿರುವ ವಿಭಾಗ ಪ್ರದೇಶ ವ್ಯಾಪ್ತಿಯಿಂದ ಹೊರಗೆ ಹೋಗಿ ಪರೀಕ್ಷೆ ಬರೆಯಬೇಕು. ಆದರೆ ಈ ನಿಯಮವು ಮಹಿಳೆಯರು ಮತ್ತು ದಿವ್ಯಾಂಗ ಅಭ್ಯರ್ಥಿಗಳಿಗೆ ಅನ್ವಯ ವಾಗುವುದಿಲ್ಲ. ಒಂದು ವೇಳೆ 4 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿದ್ದರೆ 2 ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

Advertisement

ಪ್ರಶ್ನೆಪತ್ರಿಕೆಗಳು ವಿಶಿಷ್ಟ ಬಾರ್‌ಕೋಡ್‌, ಕ್ಯುರ್‌ಆರ್‌ ಕೋಡ್‌ ಮತ್ತು ಪ್ರತೀ ಪುಟದಲ್ಲಿ ಅನುಕ್ರಮ ಸಂಖ್ಯೆಗಳಂಥ ಸುರಕ್ಷೆಯ ಕ್ರಮಗಳು ಹಾಗೂ ರಹಸ್ಯ ಕೋಡ್‌ಗಳನ್ನು ಹೊಂದಿರಲಿವೆ. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆ ಅಸಾಧ್ಯವಾಗುತ್ತದೆ. ಜತೆಗೆ ಪ್ರಶ್ನೆಪತ್ರಿಕೆಗಳ ರವಾನೆಯಲ್ಲೂ ಬಹುಹಂತದ ಪ್ಯಾಕೇಜಿಂಗ್‌ ಸಹಿತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪ್ರಶ್ನೆಪತ್ರಿಕೆ ಮುದ್ರಾಣಾಲಯಗಳಲ್ಲಿ ಸ್ಮಾರ್ಟ್‌ಫೋನ್‌ ಮತ್ತು ಕ್ಯಾಮರಾಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಪರೀಕ್ಷಾ ನಿಯಂತ್ರಕರು ನಿರಂತರವಾಗಿ ಈ ಮುದ್ರಾಣಾಲಯಗಳನ್ನು ಮೇಲ್ವಿಚಾರಣೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next