Advertisement

ನೀಟ್‌: ಗ್ರಾಮೀಣರಿಗೆ ಕಡಿಮೆ ಸೀಟು ಹಂಚಿಕೆ

01:19 AM Mar 19, 2022 | Team Udayavani |

ಬೆಂಗಳೂರು: ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌)ಯಲ್ಲಿ  ಈ ಬಾರಿ ರಾಜ್ಯದ ಗ್ರಾಮೀಣ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಸೀಟುಗಳು ಲಭ್ಯವಾಗಿವೆ.

Advertisement

ನೀಟ್‌-2021ರಲ್ಲಿ ರಾಜ್ಯದಲ್ಲಿ ಒಟ್ಟಾರೆ 7,411 ಸೀಟುಗಳು ಲಭ್ಯವಿದ್ದು, ಈ ಪೈಕಿ ಕೇವಲ 1,051 ಸೀಟುಗಳಷ್ಟೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ದೊರೆತಿವೆ.

ಗ್ರಾಮೀಣ ಭಾಗದಲ್ಲಿ ನೀಟ್‌ ಸಂಬಂಧಿಸಿದ ತರಬೇತಿ ಹಾಗೂ ಪರೀಕ್ಷೆಯ ರೂಪುರೇಷೆ, ಪ್ರಶ್ನೆಪತ್ರಿಕೆ ಮಾದರಿ ಸಹಿತ ಹೆಚ್ಚಿನ  ಜ್ಞಾನ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ನೀಟ್‌ನಲ್ಲಿ ವಿಫ‌ಲ ರಾಗುತ್ತಿದ್ದಾರೆ. ಅವರನ್ನು

ನೀಟ್‌ಗೆ ಸಿದ್ಧಗೊಳಿಸಲು ಅಗತ್ಯ ವಿರುವ ಪರಿಣಿತರೂ ಕಡಿಮೆ ಇರುವುದು ಮತ್ತೂಂದು  ಕಾರಣ ಎಂಬುದು ತಜ್ಞರ ಅಭಿಪ್ರಾಯ ವಾಗಿದೆ.

ಏನು ಮಾಡಬಹುದು? :

Advertisement

ಗ್ರಾಮೀಣ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸಲು ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಬೇಕು ಎಂದು ಪಿಇಎಸ್‌ ವಿವಿ ಕುಲಾಧಿಪತಿ ಡಾ| ಎಂ.ಆರ್‌. ದೊರೆಸ್ವಾಮಿ ಹೇಳಿದ್ದಾರೆ.

ನೀಟ್‌ ಅಗತ್ಯ :

ಕೆಲವು ಕಾರಣಗಳಿಂದ ರಾಜ್ಯದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಕುಸಿಯುತ್ತಿದೆ. ನೀಟ್‌ ರ್‍ಯಾಂಕ್‌ ವಿದ್ಯಾರ್ಥಿ ಮತ್ತು ಪಿಯುಸಿ ತೇರ್ಗಡೆ ಆಗಿರುವ ವಿದ್ಯಾರ್ಥಿಯ ಭೌತಿಕ ಮಟ್ಟ ಭಿನ್ನವಾಗಿರುತ್ತದೆ. ಆದ್ದರಿಂದ ಸ್ಪರ್ಧಾತ್ಮಕ ಜಗತ್ತಿನ ಸವಾಲು ಎದುರಿಸಲು  ನೀಟ್‌ ಅಗತ್ಯ. ಆದರೆ, ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೈಗೆಟಕುವಂತೆ ಮಾಡಬೇಕು ಎನ್ನುತ್ತಾರೆ  ಡಾ| ದೊರೆಸ್ವಾಮಿ.

ಹಂಚಿಕೆಯಾದ ನೀಟ್‌ ಸೀಟುಗಳ ವಿವರ :

ಕೋರ್ಸ್‌         ಒಟ್ಟು ಗ್ರಾಮೀಣ       ನಗರ   ಹೊರ ರಾಜ್ಯ  ಹಂಚಿಕೆ

ವೈದ್ಯಕೀಯ    7,411/  1,051/  4,809   876/     6,736

ಡೆಂಟಲ್‌         2,849   /258/   1,367   235/     1,860

 

 -ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next