Advertisement
ನಾಂದೇಡ್‌ನ ಸಂಜಯ್ ತುಕಾರಾಮ್ ಜಾಧವ್ ಮತ್ತು ಜಲೀಲ್ ಉಮರ್‌ಖಾನ್ ಪಠಾಣ್ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ನೀಟ್ ಯುಜಿ ಅಕ್ರಮ ಕುರಿತು ತನಿಖೆ ಆರಂಭಿಸಿರುವ ಸಿಬಿಐಯು ರವಿವಾರ ಎಫ್ಐಆರ್ ದಾಖಲಿಸಿದೆ. ಈ ವಿಷಯಕ್ಕೆ ಸಂಬಂಧಿಸಿ ಇತರ ರಾಜ್ಯಗಳಲ್ಲೂ ಸಿಬಿಐ ತನಿಖೆ ನಡೆಸಲಿದೆ. ಹೆಚ್ಚಿನ ತನಿಖೆಗಾಗಿ ಸಿಬಿಐ ತಂಡಗಳು ಬಿಹಾರ ಮತ್ತು ಗುಜರಾತ್‌ಗೂ ಭೇಟಿ ನೀಡಲಿದೆ. ನೀಟ್ ಹಗರಣ ದಲ್ಲಿ ಮೋದಿ ಸರ ಕಾರದ ಉನ್ನತ ಅಧಿಕಾರಿಗಳ ಮನೆ ಬಾಗಿಲಿಗೆ ಹಣ ಬಂದು ನಿಲ್ಲುತ್ತದೆ. ಸಮಸ್ಯೆಗೆ ಅಧಿಕಾರಿ ಗಳನ್ನು ಹೊಣೆಗಾರರನ್ನಾಗಿಸುವುದರ ಬದಲು ಅಧಿಕಾರದಲ್ಲಿರುವ ದೊಡ್ಡ ವರೇ ಹೊಣೆ ಹೊರಲಿ. -ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ