Advertisement
ಆನ್‌ಲೈನ್‌ನಲ್ಲಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಫೋಟೋ ಹಾಗೂ ಸಹಿ ಸ್ಪಷ್ಟವಾಗಿ ಕಾಣುತ್ತಿಲ್ಲ ಎಂಬ ಬಗ್ಗೆ ಹಲವು ದೂರು ಸಿಬಿಎಸ್‌ಇಗೆ ಬಂದಿದೆ. ಈ ಹಿನ್ನೆಲೆಯಲ್ಲಿ, ನೀಟ್ ಬರೆಯುವ ಅಭ್ಯರ್ಥಿಗಳು ಪ್ರವೇಶ ಪತ್ರದ ಜತೆಗೆ ಆಧಾರ್ ಕಾರ್ಡ್ ಅಥವಾ ಫೋಟೋ ಹೊಂದಿರುವ ಸರ್ಕಾರದ ಯಾವುದೇ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗುವಂತೆ ಸಿಬಿಎಸ್‌ಇ ಸುತ್ತೋಲೆಯಲ್ಲಿ ತಿಳಿಸಿದೆ.
ದೇಶಾದ್ಯಂತ ಏಕರೂಪ ಪರೀಕ್ಷಾ ವಿಧಾನ ಅಳವಡಿಸಿರುವುದರಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಇದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳ ಗಮನಕ್ಕೆ: ಮೇ 7ರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರ ತನಕ ನೀಟ್ ನಡೆಯಲಿದ್ದು, ಕ್ಯಾಲ್ಕುಲೇಟರ್, ಮೊಬೈಲ್, ಈಯರ್‌ಫೋನ್, ಮೈಕ್ರೋ ಫೋನ್ ಇತ್ಯಾದಿ ಯಾವುದೇ ಪರಿಕರವನ್ನು ಪರೀಕ್ಷಾ ಕೇಂದ್ರದ ಒಳಗೆ ಕೊಂಡೊಯ್ಯುವಂತಿಲ್ಲ. ಪರೀಕ್ಷಾ ಸಮಯಕ್ಕೂ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರ ತಲುಪಿರಬೇಕು. ಹೇರ್ ಪಿನ್, ಹೇರ್ ಬ್ಯಾಂಡ್ ಧರಿಸುವಂತಿಲ್ಲ, ಬ್ಲೂ ಅಥವಾ ಬ್ಲಾಕ್ ಬಾಲ್ ಪೆನ್ ಬಳಸುವಂತೆ ಸಿಬಿಎಸ್‌ಇ ಸೂಚನೆ ನೀಡಿದೆ.