Advertisement

ನಾಳೆ ನೀಟ್‌ ಪರೀಕ್ಷೆ: ವಿದ್ಯಾರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

10:27 PM Jul 16, 2022 | Team Udayavani |

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ನಡೆಸುವ ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಯು ಜು.17ರಂದು ರಾಷ್ಟ್ರವ್ಯಾಪಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ಈಗಾಗಲೇ ಯುಜಿಸಿ ಅಧಿಕೃತ ವೆಬ್‌ಸೈಟ್‌ ಮೂಲಕ ಪರೀಕ್ಷೆಯ ಪ್ರವೇಶ ಪರೀಕ್ಷೆಗಳನ್ನು ನೀಡಲಾಗಿದೆ.

Advertisement

ಈ ವರ್ಷ ಒಟ್ಟು 18 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕೊರೊನಾ ಸಂಬಂಧಿಸಿದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಪಾಲಿಸಲಾಗುವುದು ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಮೊಬೈಲ್‌, ಬ್ಲೂ ಟೂತ್‌, ಮೈಕ್ರೋಫೋನ್‌, ಕ್ಯಾಲ್ಕುಲೇಟರ್‌, ಸ್ಮಾರ್ಟ್‌ ವಾಚ್‌ಗಳು ಮುಂತಾದ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತರುವಂತಿಲ್ಲ, ಪ್ರವೇಶ ಪತ್ರದ ಹೊರತಾಗಿ ಯಾವುದೇ ಮುದ್ರಿತ ಕಾಗದಗಳನ್ನು ತರುವಂತಿಲ್ಲ. ತಿನ್ನುವ ಪದಾರ್ಥಗಳು, ಆಭರಣಗಳು ಹಾಗೂ ಬೆಲೆ ಬಾಳುವ ಯಾವುದೇ ಸಾಮಗ್ರಿಗಳನ್ನು ತರುವಂತಿಲ್ಲ ಎಂದು ಎನ್‌ಟಿಎ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next