ಹೊಸದಿಲ್ಲಿ: 2021ನೇ ಸಾಲಿನ ನೀಟ್ ಪಿಜಿ ಕೌನ್ಸೆಲಿಂಗ್‌ನಲ್ಲಿ 1,456 ಸೀಟುಗಳನ್ನು ಖಾಲಿ ಬಿಟ್ಟ ವಿಚಾರದಲ್ಲಿ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ)ಯನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಖಾಲಿ ಇರುವ ಸೀಟುಗಳನ್ನು ಸ್ಟ್ರೇ ಸುತ್ತಿನಲ್ಲಿ ಹಂಚಿಕೆ ಮಾಡಬೇಕೆಂದು ಕೋರಿ ಕೆಲವು ನೀಟ್ ಅಭ್ಯರ್ಥಿಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ರಜಾಕಾಲದ ನ್ಯಾಯಪೀಠ ದಲ್ಲಿರುವ ನ್ಯಾ| ಎಂ.ಆರ್. ಶಾ, ನ್ಯಾ| ಅನಿರುದ್ಧ್ ಬೋಸ್ ಅವರುಳ್ಳ ನ್ಯಾಯಪೀಠ ವಿಚಾರಣೆ ನಡೆಸಿ, ಸರಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದೆ.
“ಎಂಸಿಸಿಯ ಈ ಕ್ರಮದಿಂದಾಗಿ ಅಭ್ಯರ್ಥಿಗಳಿಗೆ ತೊಂದರೆಯಾಗುವುದಷ್ಟೆ ಅಲ್ಲದೆ, ದೇಶದಲ್ಲಿ ವೈದ್ಯರ ಕೊರತೆ ಉಂಟಾಗಲಿದೆ. ಒಂದೇ ಒಂದು ಸೀಟನ್ನು ಖಾಲಿ ಉಳಿಯದಂತೆ ನೋಡಿಕೊಳ್ಳುವುದು ಎಂಸಿಸಿ ಜವಾಬ್ದಾರಿ. ಆದರೆ ಪ್ರತೀ ಸುತ್ತಿನ ಕೌನ್ಸೆಲಿಂಗ್‌ನಲ್ಲೂ ಇದೇ ರೀತಿಯಾಗುತ್ತಿದೆ’ ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿ ಸಿದೆ. ಹಾಗೆಯೇ 24 ಗಂಟೆಗಳೊಳಗಾಗಿ ಖಾಲಿ ಇರುವ ಸೀಟುಗಳ ಸಂಪೂರ್ಣ ಮಾಹಿತಿ ನೀಡಬೇಕು ಹಾಗೂ ಸೀಟುಗಳನ್ನು ಭರ್ತಿ ಮಾಡದೇ ಇರುವುದಕ್ಕೆ ಇರುವ ಸೂಕ್ತ ಕಾರಣಗಳನ್ನು ಪಟ್ಟಿ ಮಾಡಿ ಕೊಡಬೇಕು ಎಂದು ಕೇಂದ್ರ ಸರಕಾರ ಹಾಗೂ ಎಂಸಿಸಿಗೆ ನ್ಯಾಯಪೀಠ ಸೂಚನೆ ನೀಡಿದೆ.
ಸೀಟು ಹಂಚಿಕೆಯ ಎಲ್ಲಾ ಸುತ್ತುಗಳು ಮುಗಿದು, ಅನಂತರ ಉಳಿಯುವ ಸೀಟು ಗಳಿಗೆ ಮಾಪ್-ಅಪ್ ಸುತ್ತಿನ ಕೌನ್ಸೆಲಿಂಗ್ ಮೂಲಕ ಸೀಟು ವಿತರಣೆ ಮಾಡಲಾಗು ತ್ತದೆ. ಅದರಲ್ಲಿಯೂ ಮಿಕ್ಕುವ ಸೀಟು ಗಳನ್ನು ಸ್ಟ್ರೇ ಸುತ್ತಿನ ಕೌನ್ಸೆಲಿಂಗ್ ಮೂಲಕ ನೀಡ ಬೇಕೆಂದು ಅಭ್ಯರ್ಥಿಗಳ ಆಗ್ರಹವಾಗಿದೆ.
ಪರಿಹಾರಕ್ಕೆ ಆದೇಶಿಸುತ್ತೇವೆ ಹುಷಾರ್: ವಿದ್ಯಾರ್ಥಿಗಳಿಗೆ ಬಾಕಿ ಉಳಿದಿರುವ ಸೀಟನ್ನು ಹಂಚಿಕೆ ಮಾಡದಿದ್ದರೆ, ಸೀಟುಗ ಳನ್ನು ಹಂಚಿಕೆ ಕಡ್ಡಾಯವಾಗಿ ಮಾಡ ಲೇಬೇಕು ಹಾಗೂ ವಿದ್ಯಾರ್ಥಿಗಳಿಗೆ ಆರ್ಥಿಕ ಪರಿಹಾರ ನೀಡಬೇಕೆಂದು ತಾನೇ ಆದೇಶ ನೀಡುವುದಾಗಿ ನ್ಯಾಯಪೀಠ ತಿಳಿಸಿದೆ. “ಒಂದೇ ಒಂದು ಸೀಟು ಖಾಲಿ ಬಿಡಕೂ ಡದು. ಹಾಗೆ ಖಾಲಿ ಬಿಡದಂತೆ ನೋಡಿಕೊ ಳ್ಳುವುದು ನಿಮ್ಮ ಜವಾಬ್ದಾರಿ’ ಎಂದಿದೆ.