Advertisement

ಅಕ್ರಮ “ನೀಟ್‌’ಜಾಲವನ್ನು ಭೇದಿಸಿದ ಸಿಬಿಐ

10:51 PM Jul 19, 2022 | Team Udayavani |

ನವದೆಹಲಿ: ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ (ನೀಟ್‌) ಅಸಲಿ ನೀಟ್‌ ಅಭ್ಯರ್ಥಿಗಳ ಬದಲಿಗೆ ಪರೀಕ್ಷೆ ಬರೆಯುತ್ತಿದ್ದ ಅಂತರರಾಜ್ಯ ಜಾಲವೊಂದನ್ನು ಸಿಬಿಐ ಭೇದಿಸಿದೆ.

Advertisement

ಈ ಜಾಲದ “ಮಾಸ್ಟರ್‌ ಮೈಂಡ್‌’ ಎನ್ನಲಾಗಿರುವ ಸುಶೀಲ್‌ ರಂಜನ್‌ ಎಂಬಾತನನ್ನನು ದೆಹಲಿಯ ಸಫ್ತಾರ್‌ಗಂಜ್‌ ಪ್ರಾಂತ್ಯದಲ್ಲಿ ಬಂಧಿಸಲಾಗಿದೆ.

ಈತ, ನೀಟ್‌ ಪರೀಕ್ಷೆಯಲ್ಲಿ ಅತ್ಯುತ್ತಮವಾಗಿ ಉತ್ತರಿಸಬಲ್ಲ ಚಾಣಾಕ್ಷರ ಪಡೆಯೊಂದನ್ನು ಕಟ್ಟಿ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ತನ್ನ ಕಳ್ಳಾಟ ನಡೆಸಿದ್ದ. ಒಂದು ನೀಟ್‌ ಸೀಟ್‌ಗೆ 20 ಲಕ್ಷ ರೂ.ಗಳನ್ನು ನಿಗದಿ ಮಾಡಲಾಗುತ್ತಿತ್ತು.

ಅಭ್ಯರ್ಥಿಗಳಿಗೆ ನೀಡಲಾಗುವ ನೀಟ್‌ ಐಟಿಯಲ್ಲಿರುವ ಅಭ್ಯರ್ಥಿಗಳ ಫೋಟೋವನ್ನು ಮಾಫ್ ಮಾಡಿ ನಕಲಿ ಅಭ್ಯರ್ಥಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ.

 

Advertisement

 

 

 

 

Advertisement

Udayavani is now on Telegram. Click here to join our channel and stay updated with the latest news.

Next