Advertisement

ಇಂದು NEET ಪರೀಕ್ಷೆ : ಕಿವಿಯೋಲೆ, ಮೂಗುತಿ, ಪೂರ್ಣ ತೋಳಿನ ಶರ್ಟ್ ಧರಿಸುವಂತಿಲ್ಲ

09:31 AM Sep 12, 2021 | Team Udayavani |

ನವದೆಹಲಿ : ದೇಶಾದ್ಯಂತ ಇಂದು 2020-21ನೇ ಸಾಲಿನ ನೀಟ್ ಪರೀಕ್ಷೆ ನಡೆಯಲಿದ್ದು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸುಗಳಿಗೆ ಪರೀಕ್ಷೆ ಮಾಡಲಾಗುತ್ತಿದೆ.

Advertisement

ಮಧ್ಯಾಹ್ನ 2 ಗಂಟೆಯಿಂದ ಸಂಜೆ 5ರವರೆಗೆ ಪರೀಕ್ಷೆಯನ್ನು ಮಾಡಲಾಗುತ್ತದೆ. ದೇಶದ 201 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಇನ್ನು ಕರ್ನಾಟಕದಲ್ಲಿಯೂ ಪರೀಕ್ಷೆ ನಡೆಯಲಿದ್ದು,  ಒಟ್ಟು 9 ನಗರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ.

ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಹುಬ್ಬಳ್ಳಿ, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿಯಲ್ಲಿ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆಯಲ್ಲಿ ಒಟ್ಟು 180 ಪ್ರಶ್ನೆಗಳಿದ್ದು, ಪ್ರತೀ ಪ್ರಶ್ನೆಗೆ 4 ಅಂಕಗಳಂತೆ, ಒಟ್ಟು 720 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ತಪ್ಪು ಉತ್ತರಕ್ಕೆ ಒಂದು ನೆಗೆಟಿವ್ ಅಂಕ ಕಡಿತವಾಗಲಿದೆ.

ನೀಟ್ 2021 : ಹುಡುಗಿಯರಿಗೆ ಡ್ರೆಸ್ ಕೋಡ್ :

ಕಡಿಮೆ ಹೀಲ್ಸ್ ಚಪ್ಪಲಿಗಳನ್ನು ಅನುಮತಿಸಲಾಗಿದೆ. ಬೂಟುಗಳನ್ನು ಅನುಮತಿಸಲಾಗುವುದಿಲ್ಲಇನ್ನು ಕಿವಿಯೋಲೆಗಳು, ಮೂಗುತಿಗಳು, ಉಂಗುರಗಳು, ಪದಕಗಳು, ನೆಕ್ಲೇಸ್ ಗಳು, ಬ್ರೇಸ್ ಲೆಟ್ ಗಳು ಮತ್ತು ಕಾಲ್ಗೆಜ್ಜೆಗಳಂತಹ ಯಾವುದೇ ರೀತಿಯ ಆಭರಣಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

Advertisement

ನೀಟ್ 2021 : ಹುಡುಗರಿಗೆ ಡ್ರೆಸ್ ಕೋಡ್ :

ಪುರುಷ ಅಭ್ಯರ್ಥಿಗಳಿಗೆ ಅರ್ಧ ತೋಳಿನ ಶರ್ಟ್ ಗಳು, ಟಿ-ಶರ್ಟ್ ಗಳು, ಪ್ಯಾಂಟ್ ಗಳು ಮತ್ತು ಸರಳ ಪ್ಯಾಂಟ್ ಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಪೂರ್ಣ ತೋಳಿನ ಶರ್ಟ್ ಗಳಿಗೆ ಅನುಮತಿ ಇಲ್ಲ. ಜಿಪ್ ಪಾಕೆಟ್ ಗಳು, ದೊಡ್ಡ ಬಟನ್ ಗಳು ಮತ್ತು ವಿಸ್ತಾರವಾದ ಕಸೂತಿ ಹೊಂದಿರುವ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next