Advertisement

ಮಂಗಳೂರು: ರಿಕ್ಷಾ ಚಾಲಕನ ಮೇಲೆ ತಂಡದಿಂದ ಹಲ್ಲೆ

06:43 PM Oct 17, 2019 | Team Udayavani |

ಮಂಗಳೂರು: ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೀರುಮಾರ್ಗ ಸಮೀಪದ ಬಿತ್ತುಪಾದೆ ಎಂಬಲ್ಲಿ ರಿಕ್ಷಾ ಚಾಲಕನ ಮೇಲೆ ದುಷ್ಕರ್ಮಿಗಳ ತಂಡ ಗುರುವಾರ ಸಂಜೆ ದಾಳಿ ನಡೆಸಿದ ಬಗ್ಗೆ ವರದಿಯಾಗಿದೆ.

Advertisement

ದಾಳಿಗೆ ಒಳಗಾದ ವ್ಯಕ್ತಿಯನ್ನು ಬಿತ್ತುಪಾದೆ ನಿವಾಸಿ ಸಂತೋಷ್ (35) ಎಂದು ಗುರುತಿಸಲಾಗಿದ್ದು, ಇತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತಂತೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next