Advertisement

ಹೆಬ್ರಿ: ಅಭಿವೃದ್ಧಿ ಕಾಣದ ನೀರಾಣಿ -ಕುಚ್ಚಾರು ಮುಖ್ಯ ರಸ್ತೆ

02:50 AM Jul 04, 2018 | Karthik A |

ಹೆಬ್ರಿ: ಕಬ್ಬಿನಾಲೆ ಗ್ರಾಮದ ನೀರಾಣಿ -ಕುಚ್ಚಾರು ಮುಖ್ಯ ರಸ್ತೆಯು ಹಲವಾರು ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರ ದುರಸ್ತಿಗೊಳಿಸುವಂತೆ ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ. ರಸ್ತೆಗೆ ಹಾಕಿದ್ದ ಜಲ್ಲಿ ಮಣ್ಣು ಮಳೆಯ ನೀರಿನಲ್ಲಿ ಕೊಚ್ಚಿಹೋಗಿದ್ದು ನಡೆದುಕೊಂಡು ಹೋಗುವುದು ಕೂಡ ಕಷ್ಟಕರವಾಗಿದೆ. ತೀರ ಹದಗೆಟ್ಟ ರಸ್ತೆಯನ್ನು ಗ್ರಾ.ಪಂ. ಹಾಗೂ ಗ್ರಾಮಸ್ಥರ ಸಹಕಾರದಿಂದ ಕಳೆದ ಬೇಸಿಗೆಯಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗಿತ್ತು. ಆದರೆ ಮಳೆಗೆ ಈ ಬಾರಿ ರಸ್ತೆ ಮತ್ತೆ ಕೊಚ್ಚಿಹೋಗಿದೆ.

Advertisement

ಸಂಪರ್ಕ ಕಡಿತಗೊಳ್ಳುವ ಭೀತಿ 
ರಸ್ತೆಯ ಬದಿಯಲ್ಲಿ ಒಂದೆಡೆ ರಸ್ತೆಗೆ ವಾಲಿರುವ ಅಪಾಯಕಾರಿ ಮರಗಳಿದ್ದು ಯಾವುದೇ ಸಂದರ್ಭ ಬೀಳಬಹುದಾಗಿದೆ. ಅಲ್ಲದೆ ವಿಪರೀತ ಮಳೆಗೆ ಗುಡ್ಡಗಳು ಕುಸಿಯುತ್ತಿದ್ದು ಸಂಪರ್ಕ ಕಡಿತಗೊಳ್ಳುವ ಭೀತಿಯಲ್ಲಿ ಈ ಭಾಗದ ಜನರಿದ್ದಾರೆ.

ಕಾಂಕ್ರೀಟ್‌ ಒಂದೇ ಪರಿಹಾರ 
ಈ ಭಾಗದ ಪ್ರದೇಶ ಗುಡ್ಡ – ಕಾಡುಗಳಿಂದ ಆವೃತವಾಗಿದ್ದು ವಿಪರೀತ ಮಳೆ ಸುರಿಯುವ ಪರಿಣಾಮ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ರಸ್ತೆ ಕಾಂಕ್ರೀಟೀಕರಣಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಪೂರ್ಣ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಕನಿಷ್ಠ 2ರಿಂದ 3 ಕೋಟಿ ರೂ. ಅನುದಾನದ ಆವಶ್ಯಕತೆ ಇದೆ.

ಎರಡು ಗ್ರಾಮಗಳ ಅಭಿವೃದ್ಧಿ 
ಈ ರಸ್ತೆಯು ಗ್ರಾಮದ ಮುಖ್ಯ ರಸ್ತೆಯಾಗಿದ್ದು ದುರಸ್ತಿಗೊಂಡಲ್ಲಿ ಇದಕ್ಕೆ ಹೊಂದಿಕೊಂಡಿರುವ  ಹಲವಾರು ಕೂಡುರಸ್ತೆಗಳ ಸಂಪರ್ಕವಾಗಿ ಆ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನಾಡಾ³ಲು ಗ್ರಾಮಕ್ಕೆ ಇದೇ ಸಂಪರ್ಕ ರಸ್ತೆಯಾದ್ದರಿಂದ ರಸ್ತೆ ಅಭಿವೃದ್ಧಿಯಾದಲ್ಲಿ ನಾಡ್ಪಾಲು ಹಾಗೂ ಕಬ್ಬಿನಾಲೆ ಎರಡೂ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಆ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಸೇರಿದಂತೆ ಮಲೆಕುಡಿಯರು ಹೆಚ್ಚಾಗಿ ವಾಸವಿದ್ದು ಶಾಸಕರು ತಮ್ಮ ಶಾಸನಬದ್ಧ  ಅನುದಾನ /ಸರಕಾರದ ವಿಶೇಷ  ಅನುದಾನ /ಪ್ರಾಕೃತಿಕ ವಿಕೋಪ ಅನುದಾನ ಆಥವಾ ಲೋಕಸಭಾ ಸದಸ್ಯರ ಅನುದಾನ ಅಥವಾ ಲೋಕಸಭಾ ಸದಸ್ಯರ ಅನುದಾನ ಮೂಲಕವಾದರೂ ಅನುದಾನವನ್ನು ಬಿಡುಗಡೆಗೊಳಿಸಿ ಈ ಭಾಗದ ಹಲವು ವರ್ಷಗಳ ಬೇಡಿಕೆಯಾದ ರಸ್ತೆ ದುರಸ್ತಿಯನ್ನು ಶೀಘ್ರಗೊಳಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕೆಂದು ಪಂಚಾಯತ್‌ ಸದಸ್ಯ ಸಂತೋಷ್‌ ಕುಮಾರ್‌ ಶೆಟ್ಟಿ ವಿನಂತಿಸಿದ್ದಾರೆ.

Advertisement

ಪ್ರಸ್ತಾವನೆ ಸಲ್ಲಿಸಲಾಗಿದೆ
ಈ ಭಾಗದ ರಸ್ತೆಯ ಡಾಮರೀಕರಣಗೊಳಿಸಲು ಈಗಾಗಲೇ ಶಾಸಕರು 25ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸುವಂತೆ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ. ಅನುದಾನ ಬಿಡುಗಡೆಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದೆ.
– ಜ್ಯೋತಿ ಹರೀಶ್‌, ಜಿ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next