Advertisement

ಮೊನಾಕೊ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಿಸಲಿರುವ ನೀರಜ್‌ ಚೋಪ್ರಾ

05:45 AM Jul 20, 2017 | Team Udayavani |

ಹೊಸದಿಲ್ಲಿ: ಭಾರತದ ಅಗ್ರ ರ್‍ಯಾಂಕಿನ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಶುಕ್ರವಾರ ನಡೆಯಲಿರುವ ಮೊನಾಕೊ ಡೈಮಂಡ್‌ ಲೀಗ್‌ ಆ್ಯತ್ಲೆಟಿಕ್‌ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಇದು ಅವರು ಸ್ಪರ್ಧಿಸಲಿರುವ ಎರಡನೇ ಡೈಮಂಡ್‌ ಲೀಗ್‌ ಸ್ಪರ್ಧೆಯಾಗಲಿದೆ.

Advertisement

ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಪೂರ್ಣ ರೀತಿಯಲ್ಲಿ ಸಿದ್ಧಗೊಳ್ಳಲು ದೃಷ್ಟಿಯಿಂದ ನೀರಜ್‌ ಮೊನಾಕೊ ಡೈಮಂಡ್‌ ಲೀಗ್‌ನಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪ್ಯಾರಿಸ್‌ ಲೀಗ್‌ನಲ್ಲಿ 84.67 ಮೀ. ದೂರ ಎಸೆದು ಐದನೇ ಸ್ಥಾನ ಪಡೆದಿದ್ದ 19ರ ಹರೆಯದ ನೀರಜ್‌ ಭುವನೇಶ್ವರದಲ್ಲಿ ನಡೆದ ಏಶ್ಯನ್‌ ಆ್ಯತ್ಲೆಟಿಕ್‌ ಕೂಟದಲ್ಲಿ 85.63 ಮೀ. ದೂರ ಎಸೆದು ಚಿನ್ನ ಜಯಿಸಿದ್ದರು. ಇದು ಈ ಋತುವಿನಲ್ಲಿ ಅವರ ಶ್ರೇಷ್ಠ ನಿರ್ವಹಣೆಯಾಗಿತ್ತು. ಈ ನಿರ್ವಹಣೆಯಿಂದಾಗಿ ಅವರಿಗೆ ಐಎಎಎಫ್ 12ನೇ ರ್‍ಯಾಂಕ್‌ ನೀಡಿದೆ.

ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆ 86.48 ಮೀ. ಇದನ್ನು ಕಳೆದ ವರ್ಷ ಜೂನಿಯರ್‌ ವಿಭಾಗದಲ್ಲಿ ವಿಶ್ವದಾಖಲೆಗೈದಾಗ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next