Advertisement

605 ಚೀಲ ಬೇವು ಲೇಪಿತ ಯೂರಿಯಾ ಹೊರ ರಾಜ್ಯಕ್ಕೆ!: ಪೊಲೀಸರ ದಾಳಿ

05:45 PM Feb 09, 2024 | Team Udayavani |

ಕುಣಿಗಲ್ : ಹುಲಿಯೂರುದುರ್ಗದಲ್ಲಿ ಅಕ್ರಮವಾಗಿ ಹೊರ ರಾಜ್ಯ ಕೇರಳಕ್ಕೆ ಬೇವು ಲೇಪಿತ ಯೂರಿಯಾ ರಸಗೊಬ್ಬರ ಸಾಗಿಸುತ್ತಿದ್ದ ಲಾರಿಯನ್ನು ತಡೆದ ಪೊಲೀಸರು 16.75 ಲಕ್ಷ ರೂ ಮೌಲ್ಯದ 605 ಚೀಲ ರಸಗೊಬ್ಬರ ವಶಕ್ಕೆ ಪಡೆದು ಲಾರಿ ಚಾಲಕನನ್ನು ಬಂಧಿಸಿದ್ದಾರೆ.

Advertisement

ಕೇರಳ ರಾಜ್ಯ, ಪಾಲಕ್ಕಾಡ್ ಜಿಲ್ಲೆ, ಚಿತ್ತೂರು ತಾಲೂಕು ಮುದಲಮಡ ಗ್ರಾಮದ ಲಾರಿ ಚಾಲಕ ಪೈಜಲ್ (40) ಬಂಧಿತ ಆರೋಪಿ. ಹುಲಿಯೂರುದುರ್ಗ ಪಿಎಸ್‌ಐ ಜಯಕುಮಾರ್ ಅವರು ಹುಲಿಯೂರುದುರ್ಗ ಟೌನ್‌ನಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ಈ ಮಾರ್ಗದಲ್ಲಿ ಬಂದ ಲಾರಿ ಮೇಲೆ ಅನುಮಾನ ಬಂದು ಚಾಲಕನನ್ನು ವಿಚಾರಿಸಿದ್ದಾರೆ, ಹುಲಿಯೂರುದುರ್ಗ ಮಾರುತಿ ಎಂಟರ್ ಪ್ರೈಸಸ್ಸ್ ಅವರ ಮಳಿಗೆಯಿಂದ ಯೂರಿಯ ರಸಗೊಬ್ಬರ ತುಂಬಿಕೊಂಡು ಬೆಳಗಾವಿ ಜಿಲ್ಲೆಯ ಇನ್ ವಾಯ್ಸ್ ಮೂಲಕ ಕೇರಳ ರಾಜ್ಯಕ್ಕೆ ಸಾಗಿಸುತ್ತಿರುವುದ್ದಾಗಿ ಚಾಲಕ ತಿಳಿಸಿದ್ದಾನೆ.

ಇದಕ್ಕೆ ಸಂಬಂಧ ಪಟಂತೆ ದಾಖಲೆ ನೀಡುವಂತೆ ಪೊಲೀಸರು ಕೇಳಿದ್ದಾರೆ ಬಳಿಕ ಮಾರುತಿ ಎಂಟರ್ ಪ್ರೈಸಸ್ಸ್ ಅವರು ಸಲ್ಲಿಸಿದ ಬಿಲ್‌ಗಳನ್ನು ಪರಿಶೀಲನೆಗಾಗಿ ಕೃಷಿ ಇಲಾಖೆಯ ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಪುಟ್ಟರಂಗಪ್ಪ ಅವರಿಗೆ ತಿಳಿಸಿದ್ದಾರೆ ಇದು ಅಕ್ರಮ ಸಾಗಾಣಿಕೆ ಮತ್ತು ಬೇರೆ ರಾಜ್ಯಕ್ಕೆ ಸಾಗಾಣಿಕೆ ನಿಷೇದವಿರುವ ಬಗ್ಗೆ ಪೊಲೀಸರಿಗೆ ಕೃಷಿ ನಿರ್ದೇಶಕ ತಿಳಿಸಿದ್ದಾರೆ, ಲಾರಿ ಬಿಲ್ ಮತ್ತು ರಸಗೊಬ್ಬರ ಪರಿಶೀಲಿಸಲಾಗಿ ಕೃಷಿ ಬಳಕೆಗೆ ಮೀಸಲಾದ ಯೂರಿಯ ರಸ ಗೊಬ್ಬರವನ್ನು ಬೇರೆ ರಾಜ್ಯಕ್ಕೆ ಕೈಗಾರಿಕೆ ಉದ್ದೇಶಕ್ಕೆ ಬಳಸುವ ಉದ್ದೇಶ ಮತ್ತು ಸರ್ಕಾರಕ್ಕೆ 16.75 ಲಕ್ಷ ಮೋಸ ಮಾಡಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ, ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.

ರಸಗೊಬ್ಬರ ಮಾದರಿಯನ್ನು ವಿಶ್ಲೇಷಣೆಗೆ ಕಳುಹಿಸಿಕೊಡಲಾಗಿದೆ, ವರದಿ ಬಂದ ನಂತರ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) ಪುಟ್ಟರಂಗಪ್ಪ ತಿಳಿಸಿದ್ದಾರೆ, ದಾಳಿಯಲ್ಲಿ ಹುಲಿಯೂರುದುರ್ಗ ಕೃಷಿ ಅಧಿಕಾರಿ ಬಸವರಾಜಕುಮಾರ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next