ಬೆಂಗಳೂರು: ರಾಜ್ಯದಲ್ಲಿ ಪ್ರಥಮ ಬಾರಿಗೆ ಖಾಕಿ ಪಡೆಗೆ ಮಹಿಳಾ “ದಂಡ ನಾಯಕಿ’ಯನ್ನು ಕಾಣುವ ಯೋಗ ಒದಗಿ ಬಂದಿದ್ದು, ಪೊಲೀಸ್ ಪಡೆಯ ಸಾರಥಿಯನ್ನಾಗಿ ನೀಲಮಣಿ.ಎನ್.ರಾಜು ಅವರನ್ನು ಸರ್ಕಾರ ನೇಮಕ ಮಾಡಿದೆ.
ಹಿರಿಯ ಐಪಿಎಸ್ ಅಧಿಕಾರಿಣಿಯಾಗಿರುವ ಉತ್ತರಾಖಂಡದ ರೂರ್‌ಕಿ ಮೂಲದ ನೀಲಮಣಿ ಅವರಿಗೆ ಸೇವಾ ಹಿರಿತನದ ಆಧಾರದ ಮೇರೆಗೆ ರಾಜ್ಯ ಪೊಲೀಸ್ ಮುಖ್ಯಸ್ಥ ಸ್ಥಾನ (ಡಿಜಿ ಐಜಿ) ಒಲಿದು ಬಂದಿದೆ. ಈವರೆಗೆ ಯಾವೊಬ್ಬ ಮಹಿಳಾ ಐಪಿಎಸ್ ಅಧಿಕಾರಿಯೂ ಪೊಲೀಸ್ ಪಡೆಯ ಅತ್ಯುನ್ನತ ಪದವಿ ಗೇರಲು (ಡಿಜಿ ಐಜಿ) ಕಾಲ ಕೂಡಿ ಬಂದಿರಲಿಲ್ಲ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಸಿ.ಎಚ್.ಕಿಶೋರ್ ಚಂದ್ರ, ಎಂ.ಎನ್. ರೆಡ್ಡಿ ಅವರ ಹೆಸರೂ ಹುದ್ದೆಗೆ ಕೇಳಿ ಬಂದಿತ್ತು.
ರಾಜ್ಯ ಮುಖ್ಯ ಕಾರ್ಯದರ್ಶಿ ಹುದ್ದೆ ಮಹಿಳಾ ಅಧಿಕಾರಿಯ ಕೈ ತಪ್ಪಿದ ಬಳಿಕ ಇದೀ ಗಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಲೆಕ್ಕಾಚಾರ ಬದಿಗೊತ್ತಿ ಎಚ್ಚರಿಕೆಯ ನಡೆ ತೋರಿದ್ದು ಮಹಿಳೆಯನ್ನು ಆಯ್ಕೆ ಮಾಡಿದ್ದಾರೆ. ನೀಲಮಣಿ ಅವರು ರಾಜ್ಯದಲ್ಲಿ ಕೇವಲ 3 ವರ್ಷ ಮಾತ್ರ ಸೇವೆ ಸಲ್ಲಿಸಿದ್ದುಹಿರಿತನದ ಆಧಾರದಲ್ಲೇ ಅವರಿಗೆ ಹುದ್ದೆ ನೀಡಲಾಗಿದೆ.
1983ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ನೀಲಮಣಿ ಅವರು ಕಳೆದ 23 ವರ್ಷಗಳಿಂದ ಕೇಂದ್ರದ ಆಂತರಿಕ ಭದ್ರತಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ರಾಜ್ಯಕ್ಕೆ ವಾಪಸ್ ಆಗಿದ್ದರು.