Advertisement

ಕೋವಿಡ್ 19 ಬಿಕ್ಕಟ್ಟನ್ನು “ಟರ್ನಿಂಗ್ ಪಾಯಿಂಟ್”ಮಾಡಿಕೊಳ್ಳಬೇಕು: ಪ್ರಧಾನಿ ಮೋದಿ

05:14 PM Jun 11, 2020 | Nagendra Trasi |

ನವದೆಹಲಿ:ಕೋವಿಡ್ 19 ವೈರಸ್ ಬಿಕ್ಕಟ್ಟನ್ನು ದೇಶದ ಏಳಿಗೆಗಾಗಿ ಆತ್ಮನಿರ್ಭರ ಭಾರತವನ್ನಾಗಿ ಪರಿವರ್ತಿಸುವ ಅವಕಾಶವನ್ನಾಗಿ ಬದಲಾಯಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

Advertisement

ಅವರು ಗುರುವಾರ ಕೋಲ್ಕತಾದಲ್ಲಿ ನಡೆಯುತ್ತಿರುವ ಭಾರತೀಯ ವಾಣಿಜ್ಯ ಸಂಸ್ಥೆಯ 95ನೇ ಸಮಾವೇಶದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುತ್ತ, ನಾವು ಒಗ್ಗಟ್ಟಾಗಿ ದುಡಿಯುವ ಮೂಲಕ ಈ ಬಿಕ್ಕಟ್ಟಿನಿಂದ ಹೊರಬರಬೇಕಾಗಿದೆ ಎಂದರು.

ನಮ್ಮ ದೇಶ ಪ್ರಸ್ತುತ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ನಾವು ಕೋವಿಡ್ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಅದರ ಜತೆಗೆ ಪ್ರವಾಹ, ಮಿಡತೆ ಹಾವಳಿ, ತೈಲಾಗಾರದಲ್ಲಿ ಬೆಂಕಿ, ಭೂಕಂಪಗಳು ಮತ್ತು ಚಂಡಮಾರುತದಂತಹ ಇತರ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಮೋದಿ ಹೇಳಿದರು.

ನಾವು ಈ ಎಲ್ಲಾ ಬಿಕ್ಕಟ್ಟನ್ನು ಅವಕಾಶವನ್ನಾಗಿ ಬದಲಾಯಿಸಿಕೊಳ್ಳಬೇಕಾಗಿದೆ. ಇದನ್ನೇ ಟರ್ನಿಂಗ್ ಪಾಯಿಂಟ್ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕೋವಿಡ್ 19 ವೈರಸ್ ಭಾರತವನ್ನು ಸ್ವಾವಲಂಬಿಯನ್ನಾಗಿ ಬದಲಾಯಿಸುವ ಅವಕಾಶವನ್ನು ಒದಗಿಸಿಕೊಟ್ಟಿದೆ ಎಂದು ವಿಶ್ಲೇಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next