ಕರಾವಳಿಯ ಜನಸಂಸ್ಕೃತಿಯಲ್ಲಿ ಬೆರೆತ ಭಾಷೆ ತುಳು. ಮಾತನಾಡಲು ಸುಂದರವಾದ ಈ ಭಾಷೆಯಲ್ಲಿ ಬರೆಯಬಹುದೇ? ಇದು ಅನೇಕರಿಗೆ ಗೊತ್ತಿಲ್ಲ. ಹೌದು, ತುಳು ಭಾಷೆಗೂ ಲಿಪಿ ಇದೆ. ತುಳು ಲಿಪಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ತುಳು ಭಾಷಾಭಿಮಾನಿಗಳು “ತುಳು ಲಿಪಿ ಕಲಿಕಾ ಕಾರ್ಯಾಗಾರ’ವನ್ನು ಹಮ್ಮಿಕೊಂಡಿದ್ದಾರೆ. ತುಳು ಲಿಪಿಯಲ್ಲಿ ಆಗಿರುವ ತಂತ್ರಜ್ಞಾನದ ಬೆಳವಣಿಗೆ, ತುಳು ಕಂಪ್ಯೂಟರ್ ಫಾಂಟ್, ಕೀಬೋರ್ಡ್‌ನ ಪ್ರಾಯೋಗಿಕ ಪರಿಚಯವನ್ನು ಇಲ್ಲಿ ಮಾಡಿಕೊಡಲಾಗುತ್ತದೆ.
ಹೋದರೆ, ಏನು ಲಾಭ?
-ತುಳು ಲಿಪಿಯಲ್ಲಿ ಬರೆಯಲು ಕಲಿಯಬಹುದು.
-ತುಳು ಲಿಪಿಯ ಬರವಣಿಗೆಯನ್ನು ಓದಲು ಕಲಿಯಬಹುದು.
-ಲಿಪಿಯನ್ನು ಸುಲಭದಲ್ಲಿ ನೆನಪಿಟ್ಟುಕೊಳ್ಳುವ ವಿಧಾನವನ್ನು ತಿಳಿಯಬಹುದು.
-ತುಳು ಅಕ್ಷರಗಳನ್ನು ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್‌ನಲ್ಲಿ ಟೈಪ್ ಮಾಡಲು ಕಲಿಯಬಹುದು.
-ನಾಮಫಲಕ, ಬ್ಯಾನರ್, ಡಿಸೈನ್‌ನಲ್ಲಿ ತುಳು ಲಿಪಿಯನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಬಹುದು.
-ಬೇರೆ ಭಾಷೆಯ ಲಿಪಿಯಲ್ಲಿ ಇರುವ ಲೇಖನ, ಪುಸ್ತಕಗಳನ್ನೂ ತುಳು ಲಿಪಿಗೆ ಸುಲಭವಾಗಿ ಲಿಪ್ಯಾಂತರ ಮಾಡುವುದನ್ನು ಕಲಿಯಬಹುದು.
ಆಸಕ್ತರಿಗೆ ತುಳು ಲಿಪಿಯ ಕೀಬೋರ್ಡ್ ಅನ್ನು ಖರೀದಿಸುವ ಅವಕಾಶ ಇರುತ್ತದೆ.
ಯಾವಾಗ?: ನ.3, ಭಾನುವಾರ, ಮಧ್ಯಾಹ್ನ 2ರಿಂದ ಸಂಜೆ 6.30ರ ವರೆಗೆ
ಎಲ್ಲಿ?: ವಾಸವಿ ವಿದ್ಯಾನಿಕೇತನ ಹೈಸ್ಕೂಲ್, ನ್ಯಾಷನಲ್ ಕಾಲೇಜು ಹತ್ತಿರ, ವಿವಿಪುರ