Advertisement

ಬದುಕಿನಲ್ಲಿ ನೆಮ್ಮದಿಯೇ ಇಲ್ಲವೇ? ರೆಸ್ಟ್‌ ಮಾಡಿ!

01:10 AM Mar 21, 2021 | Team Udayavani |

ನಮ್ಮ ಮಾನಸಿಕ ನೆಮ್ಮದಿ ಹಾಳಾದ ಸಮಯದಲ್ಲಿ, ಅಂದರೆ ಮಾನಸಿಕ ಸ್ವಾಸ್ಥ್ಯಕ್ಕೆ ತೊಂದರೆಯಾದ ಸಮಯದಲ್ಲಿ ನಮಗೆ ಯೋಚನೆ ಮಾಡುವ ಶಕ್ತಿಯೇ ಹೋಗಿಬಿಡುತ್ತದೆ ಎಂದು ಹೇಳಿದರೆ ಅನೇಕರಿಗೆ ಅಚ್ಚರಿಯಾಗಬಹುದು ಅಥವಾ ಅವರು ಈ ಮಾತನ್ನು ನಂಬದೇ ಇರಬಹುದು. ಏಕೆಂದರೆ, ಇಂಥ ಸಮ ಯದಲ್ಲಿ ನಮ್ಮ ಮಿದುಳು ಒಂದು ಕ್ಷಣವೂ ಬಿಡುವಿಲ್ಲದಂತೆ ಕೆಲಸ ಮಾಡುತ್ತಿರುತ್ತದೆ.

Advertisement

ಬೆಳಗ್ಗೆ ಎದ್ದ ತತ್‌ಕ್ಷಣವೇ ನಮ್ಮ ಬಗ್ಗೆ ನಮಗೇ ಅಸಹ್ಯ ಮೂಡು ತ್ತಿರುತ್ತದೆ, ನಮ್ಮ ಮನಸ್ಸು ಹಿಂದೆ ನಡೆದ ಘಟನೆಗಳನ್ನು ಸ್ಕ್ಯಾನ್‌ ಮಾಡುತ್ತಾ ಅಯ್ಯೋ ನಾನು ತಪ್ಪು ಮಾಡಿಬಿಟ್ಟೆ ಎಂದು ಕೊರ ಗುವಂತೆ ಮಾಡುತ್ತದೆ. ಮುಂದೆ ಎದುರಾಗಬಹುದಾದ ಕೆಟ್ಟ ಘಳಿಗೆಗಳ ದೃಶ್ಯಗಳನ್ನು ಊಹಿಸಿಕೊಂಡು ತತ್ತರಿಸುವಂತೆ ಮಾಡು ತ್ತಿರುತ್ತದೆ. ನಾವು ಮಾಡಿದ ತಪ್ಪುಗಳ ಬಗ್ಗೆ, ಕೈಚೆಲ್ಲಿದ ಅವಕಾಶಗಳ ಬಗ್ಗೆ ನಮ್ಮನ್ನು ನಾವೇ ಪ್ರಶ್ನಿಸಿಕೊಂಡು, ದಂಡಿಸಿ ಕೊಂಡು ಕುಗ್ಗುತ್ತಲೇ ಇರುತ್ತೇವೆ. ನಮ್ಮ ತಲೆಯಲ್ಲಿ ಎಡೆಬಿಡದೇ ನೆಗೆಟಿವ್‌ ಧ್ವನಿಗಳು ಮಾರ್ದನಿಸುತ್ತಲೇ ಇರುತ್ತವೆ. ಇದು ಅತಿಯಾದಾಗ ಬದುಕೇ ಸಾಕು ಎನ್ನುವಷ್ಟರ ಮಟ್ಟಿಗೆ ತಲೆ ಚಿಟ್ಟು ಹಿಡಿಯುತ್ತದೆ. ರಾತ್ರಿ ನಿದ್ರೆಯೇ ಬರುವುದಿಲ್ಲ, ಸ್ವಲ್ಪ ಕಣ್ಣುಮುಚ್ಚಿದರೂ ಹಲವಾರು ಸಂಗತಿಗಳು ಮನದಲ್ಲಿ ಎದುರಾಗಿ ನಿದ್ದೆಯೇ ಬರದಂತೆ ಮಾಡುತ್ತವೆ. ಹಿಂದೆ ನಡೆದ ಘಟನೆಗಳು, ಮುಂದೆ ನಡೆಯಬಹುದಾದದ್ದರ ಬಗ್ಗೆ ಮನದಲ್ಲಿ ಕೆಟ್ಟ ಧ್ವನಿಗಳು ಮಾತ ನಾಡಲಾರಂಭಿಸುತ್ತವೆ.  ಆ ಧ್ವನಿಗಳಿಂದ ತಪ್ಪಿಸಿಕೊಳ್ಳಲು ಮೊಬೈಲ್‌ ಮೊರೆ ಹೋಗಿ, ತೀರಾ ಸುಸ್ತಾಗುವವರೆಗೂ ಮೊಬೈಲ್‌ ನೋಡಿ, ಆಮೇಲೆ ನಿದ್ದೆ ಮಾಡುತ್ತೇವೆ. ಬೆಳಗ್ಗೆ ಎಚ್ಚರವಾದಾಗ ಎದ್ದೇಳಲೂ ಮನಸ್ಸಾಗುವುದಿಲ್ಲ… ಒಟ್ಟಾರೆ ನೂರಾರು ಸಂಗತಿ­ಗಳು ಮನಸ್ಸಿನಲ್ಲಿ ಮ್ಯಾರಥಾನ್‌ ನಡೆಸಿರುತ್ತವೆ.

ಹಾಗಿದ್ದರೆ ಇವುಗಳೆಲ್ಲ ಯೋಚನೆಗಳಲ್ಲವೇ? ಹೌದು, ಅವು ಯೋಚನೆಗಳೇ ಸರಿ. ಆದರೆ, ನಾನು ಹೇಳುತ್ತಿರುವುದು ಆ ಸಂಕಷ್ಟದಿಂದ ನಮ್ಮನ್ನು ಪಾರು ಮಾಡುವಂಥ ಸರಿಯಾದ ಯೋಚನೆಗಳು ಅವಲ್ಲ ಎಂದು.

ಇಲ್ಲ ಸಂಕಷ್ಟದಿಂದ ಹೊರಬರಲು ನಮ್ಮ ಮನಸ್ಸು ದಾರಿಯನ್ನು ಹುಡುಕುತ್ತಿರುತ್ತದೆ ಎಂದು ಹೇಳಬಹುದು. ಆದರೆ ಒಂದು ವಿಷಯ ಅರ್ಥಮಾಡಿಕೊಳ್ಳಿ. ತೀರಾ ಗೊಂದಲಮಯವಾದ, ಹತಾಶ ಸ್ಥಿತಿಯಲ್ಲಿರುವ ಮನಸ್ಸಿನಿಂದ ಬಹುತೇಕ ಬಾರಿ ಗೊಂದಲ ಮಯ ನಿರ್ಧಾರಗಳೇ ಹೊರಬರುತ್ತವೆ.

ಗಮನಾರ್ಹ ಸಂಗತಿಯೆಂದರೆ, ಮಾನಸಿಕ ಅಸ್ವಸ್ಥತೆ ಎಂದಾ ಕ್ಷಣ ನಮ್ಮಲ್ಲಿ ಅನೇಕರು, ನನಗೇನಾಗಿದೆ? ನಾನು ಸರಿಯಾಗಿಯೇ ಇದ್ದೇನೆ ಎಂದು ವಾದಿಸುತ್ತಾರೆ. ಆದರೆ ಹೇಗೆ ನಮ್ಮ ದೇಹಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಆಗಾಗ ಸಮಸ್ಯೆಗಳು ಕಾಣಿಸಿ­ಕೊಳ್ಳು ತ್ತವೋ,  ಹಾಗೆಯೇ ಮನಸ್ಸಿಗೂ ಅಸ್ವಸ್ಥತೆ ಎದುರಾಗುತ್ತದೆ.

Advertisement

ಪ್ರತಿಯೊಬ್ಬ ವ್ಯಕ್ತಿಯೂ ಮೇಲೆ ಹೇಳಲಾದ ಲಕ್ಷಣಗಳನ್ನು ಎದುರಿಸಿಯೇ ಇರುತ್ತಾನೆ. ಕೆಲವರು, ಈ ಸಂಕಷ್ಟದಿಂದ ಬಹು ಬೇಗನೇ ಹೊರಬಂದು ಚೇತರಿಸಿಕೊಳ್ಳುತ್ತಾರೆ. ಆದರೆ  ದುರದೃಷ್ಟವಶಾತ್‌, ಅನೇಕರು ಇಂಥ ಸಮಸ್ಯೆಯನ್ನು ನಿತ್ಯ ಎದುರಿಸುತ್ತಲೇ ಇರುತ್ತಾರೆ. ಅದರಿಂದ ಅವರು ಹೊರಬರಲಾ­ಗದೇ ಸಂತೋಷ, ನೆಮ್ಮದಿ ಎನ್ನುವುದು ಹೇಗಿರುತ್ತದೆ ಎನ್ನುವು ದನ್ನೇ ಮರೆತುಬಿಟ್ಟಿರುತ್ತಾರೆ.

ಮಾನಸಿಕ ಅಸ್ವಸ್ಥತೆ ಎಂದರೆ, ನಿರಂತರವಾಗಿ ಗೊಂದಲ, ಆತಂಕ, ಕೀಳರಿಮೆ, ಸ್ವನಿಂದನೆ ಮತ್ತು ವೇದನೆಯ ಅಲೆಯು ಬಂದಪ್ಪಳಿಸುತ್ತಲೇ ಇರುವಂಥ ಸ್ಥಿತಿ. ಇಂಥ ಸ್ಥಿತಿಯಲ್ಲಿ ಮನುಷ್ಯ ಅಪಾಯದ ಮಟ್ಟವನ್ನು ಸರಿಯಾಗಿ ಅಳೆಯಲು ವಿಫಲನಾಗು­ತ್ತಾನೆ, ತರ್ಕಬದ್ಧವಾಗಿ ಯೋಚಿಸಲು, ಮಾತನಾಡಲು ಕಷ್ಟಪಡು ತ್ತಾನೆ, ಭವಿಷ್ಯದ ಬಗ್ಗೆ ಪ್ರಾಕ್ಟಿಕಲ್‌ ಆಗಿ ಯೋಜನೆಗಳನ್ನು ರೂಪಿಸಿ ಕೊಳ್ಳಲು, ಅವಕಾಶಗಳನ್ನು ಹುಡುಕಿಕೊಳ್ಳಲು ಮತ್ತು ಮುಖ್ಯ ವಾಗಿ ತನ್ನ ಬಗ್ಗೆ ತಾನು ಕಾಳಜಿ ಮಾಡಿಕೊಳ್ಳಲು ಸೋಲುತ್ತಾನೆ.

ಇಂಥ ಸ್ಥಿತಿಯಲ್ಲಿ ಇದ್ದಾಗಲೂ ನಾವು ನಮ್ಮ ಮನಸ್ಸಿನ ಸ್ಥಿತಿಯನ್ನು ಪ್ರಾಕ್ಟಿಕಲ್‌ ಆಗಿ ಅರಿಯಲು ವಿಫಲರಾಗುತ್ತೇವೆ. ಎಲ್ಲವೂ ಸರಿಯಾಗಿಯೇ ಇದೆ, ನಾನು ಸರಿಯಾಗಿಯೇ ಇದ್ದೇನೆ ಎಂದು ಭಾವಿಸುತ್ತೇವೆ. ಆದರೆ ಸತ್ಯವೇನೆಂದರೆ, ನಮ್ಮ ಮನಸ್ಸಿನ ಮೇಲಿನ ಮುಕ್ಕಾಲು ಪ್ರತಿಶತ ನಿಯಂತ್ರಣವನ್ನು ನಾವು ಕಳೆದು ಕೊಂಡುಬಿಟ್ಟಿರುತ್ತೇವೆ. ಮನಸ್ಸು ಹುಚ್ಚು ಕುದುರೆಯಂತೆ ಓಡು ತ್ತಲೇ ಇರುತ್ತದೆ. ನಾವೇ ಆ ಕುದುರೆಯನ್ನು ನಿಯಂತ್ರಿಸುತ್ತಿದ್ದೇವೆ ಎಂಬ ಭ್ರಮೆಯಲ್ಲಿ ನಾವು ಇರುತ್ತೇವೆ. ಆದರೆ ನಿಯಂತ್ರಣ ಕಳೆದುಕೊಂಡ ಚಾಲಕ ಸರಿಯಾಗಿ ಗಮ್ಯದತ್ತ ಚಲಿಸುವ ಸಾಧ್ಯತೆ ಕಡಿಮೆಯೇ ಅಲ್ಲವೇ? ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವೇನು?

ರೆÓr… ಮಾಡುವುದು/ವಿಶ್ರಾಂತಿ ತೆಗೆದುಕೊಳ್ಳುವುದು! ಹೌದು, ಮಾನಸಿಕ ನೆಮ್ಮದಿ ಹಾಳಾದ ಸಮಯದಲ್ಲಿ ನಾವು ಅದಕ್ಕೆ ಕೂಡಲೇ ಪರಿಹಾರ ಹುಡುಕಿಕೊಳ್ಳುವುದಕ್ಕಾಗಿ ಭವಿಷ್ಯದ ವಿಚಾರ ದಲ್ಲಿ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳ­ಲಾರಂಭಿಸುತ್ತೇವೆ. ಆದರೆ, ಹಾಗೆ ಮಾಡುವ ಬದಲು ಕೆಲವು ದಿನ ವಿಶ್ರಾಂತಿ ತೆಗೆದು ಕೊಳ್ಳಿ.  ಸಂಗೀತ ಕೇಳಿ, ನಿಮಗೆ ಇಷ್ಟವಾಗುತ್ತಿದ್ದ ಚಟುವ ಟಿಕೆಗಳಲ್ಲಿ ತೊಡಗಿ,  ಸುತ್ತಾಡಿ ಬನ್ನಿ,  ನಿಮ್ಮ ಜೀವನಶೈಲಿಯನ್ನು ಕೆಲ ದಿನಗಳವರೆಗೆ ಆರಾಮ­ದಾಯಕವಾಗಿಸಿಕೊಳ್ಳಿ.

ಇನ್ನು ಮನಸ್ಸಿಗೆ ಮದ್ದು ಹಚ್ಚುವ ವಿಚಾರ, ಸಾಧ್ಯವಾದರೆ ನಿಮ್ಮನ್ನು ಬಾಧಿಸುತ್ತಿರುವ ಅಂಶವನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳಿ. ಇನ್ನೂ ಬೆಸ್ಟ್‌ ಅಂದರೆ ಮನೋಚಿಕಿತ್ಸಕರೊಂದಿಗೆ ಮಾತನಾಡಿ (ಇದರಲ್ಲಿ ತಪ್ಪೇನೂ ಇಲ್ಲ).

ಆದರೆ ಮುಖ್ಯವಾಗಿ ವಿಶ್ರಾಂತಿ ಪಡೆಯುವುದನ್ನು ಮರೆಯದಿರಿ. ನಮ್ಮ ಸಮಸ್ಯೆಯೇನೆಂದರೆ, ನಿರಂತರವಾಗಿ ಯೋಚಿಸುತ್ತಾ ಇದ್ದರೆ, ಪರಿಹಾರಗಳು ಸಿಗುತ್ತವೆ, ನೆಮ್ಮದಿ ಸಿಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಮಾನಸಿಕ ಅಸ್ವಸ್ಥತೆ ಎನ್ನುವುದು ನಮ್ಮ ಮನಸ್ಸು ಎಷ್ಟು ಜಟಿಲವಾದದ್ದು,ಅದರ ಮೇಲೆ ಒತ್ತಡ ಹೆಚ್ಚಾದಷ್ಟೂ ಅದು ವಾಸ್ತವದಿಂದ ನಮ್ಮನ್ನು ದೂರ ಮಾಡಿ, ನೆಮ್ಮದಿ ಹಾಳಾಗುವಂತೆ ಮಾಡಿಬಿಡುತ್ತದೆ ಎನ್ನುವುದನ್ನು ಕಲಿಸಿ ಕೊಡುತ್ತದೆ. ಈ ಕಾರಣಕ್ಕಾಗಿಯೇ ಮನೋ ನೆಮ್ಮದಿ ಹಾಳಾಗಿದ್ದರೆ, ಕೂಡಲೇ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು. ರೆಸ್ಟ… ಮಾಡಿ. ಸಮಯಕ್ಕೆ ಬಹುತೇಕ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿಯಿದೆ. ಟೇಕ್‌ ಕೇರ್‌.

 

– ಅಲೆನ್‌ ಡೆ ಬಾಟಂ, ತತ್ತ್ವ ಶಾಸ್ತ್ರಜ್ಞ

Advertisement

Udayavani is now on Telegram. Click here to join our channel and stay updated with the latest news.

Next