Advertisement

ಪಾರಿವಾಳ ಗುಟ್ಟಕ್ಕೆ ಬೇಕಿದೆ ಕಾಯಕಲ್ಪ

09:01 PM Nov 24, 2019 | Lakshmi GovindaRaj |

ದೇವನಹಳ್ಳಿ: ಶತ ಶತಮಾನಗಳ ಪರಂಪರೆಯಿಂದ ತಾಲೂಕಿನ ಧಾರ್ಮಿಕ ಕೇಂದ್ರವಾಗಿ ಗುರುತಿಸಿ ಕೊಂಡಿರುವ ನಗರದ ಪಾರಿವಾಳ ಗುಟ್ಟದಲ್ಲಿನ ಆಂಜನೇಯಸ್ವಾಮಿ ದೇವಾಲಯ 64ನೇ ವರ್ಷದ ಕಡಲೇಕಾಯಿ ಪರಿಷೆಗೆ ಸಜ್ಜಾಗಿದೆ.ಈ ಐತಿಹಾಸಿಕ ಪರಿಷೆಯಲ್ಲಿ ಭಾಗವಹಿಸಿ, ರಾಮಭಕ್ತನ ಕೃಪೆಗೆ ಪಾತ್ರರಾಗಲು ತಾಲೂಕಿನ ಜನರು ಕಾತುರರಾಗಿದ್ದಾರೆ.

Advertisement

ದೇವಾಲಯ ಇತಿಹಾಸ: ಪಾರಿವಾಳ ಗುಟ್ಟದ ಜಾಗದ ವಿಸ್ತೀರ್ಣ 44.05 ಎಕರೆಯಾಗಿದ್ದು, ಈ ಭಾಗದ ಪ್ರಮುಖ ಧಾರ್ಮಿಕ ಸ್ಥಳವಾಗಿದೆ.ತಪೋಜ್ಞಾನಿಗಳ ಸಮಾಧಿಗಳು ಇಲ್ಲಿವೆ. ಎಂತಹ ಬರಗಾದಲ್ಲೂ ಚಿಕ್ಕ ದೊಣ್ಣೆಯಲ್ಲಿ ಸದಾ ನೀರು ತುಂಬಿರುತ್ತದೆ. ಈ ನೀರನ್ನು ಆಂಜನೇಯಸ್ವಾಮಿ ವಿಗ್ರಹ, ಗವಿ ವೀರಭದ್ರಸ್ವಾಮಿ ವಿಗ್ರಹ , ಭೀರಲಿಂಗೇಶ್ವ‌ರ ಸ್ವಾಮಿ, ಮತ್ತು ಗಣಪತಿ ಸ್ವಾಮಿ ಪೂಜಾ ಕೈಂಕರ್ಯ ಗಳಿಗೆ ಬಳಸಲಾಗುವುದು ಹಾಗೂ ದೇವಾಲಯದ ಶ‌ುಚಿತ್ವಕ್ಕೂ ಸಹ ಈ ನೀರನ್ನು ಬಳಕೆ ಮಾಡಲಾಗುತ್ತಿದೆ.

ಕಳೆದ 63 ವರ್ಷಗಳಿಂದ ಇಲ್ಲಿನ ಆಂಜನೇಯಸ್ವಾಮಿ ದೇವಾಲಯ ಸನ್ನಿಧಿಯಲ್ಲಿ ಕಡಲೇ ಕಾಯಿ ಪರಿಷೆ ನಡೆಸಿಕೊಂಡು ಬರಲಾಗುತ್ತಿದೆ. ಈ ಪರಿಷೆಯು ಐತಿಹಾಸಿಕ ಮಹತ್ವ ಪಡೆಉಕೊಂಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಾಗಿ ವಿಶ್ವದ ಗಮನ ಸೆಳೆದಿರುವ ದೇವನಹಳ್ಳಿಗೂ ಪಾರಿವಾಳ ಗುಟ್ಟಕ್ಕೂ ಅವಿನಾಭಾವ ಸಂಬಂಧವಿದೆ. ಈ ಧಾರ್ಮಿಕ ಸ್ಥಳವೂ ಹಲವು ವರ್ಷಗಳಿಂದ ವಾಯು ವಿಹಾರಿಗಳಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ನಗರದಿಂದ ಕೇವಲ ಎರಡು ಕಿ.ಮೀ ದೂರವಿರುವ ಈ ಗುಟ್ಟವು ಪ್ರಾಕೃತಿಕವಾಗಿಯೂ ಗಮನ ಸೆಳೆಯುತ್ತಿದೆ.

ಪ್ರಕೃತಿಯ ಮಡಿಲಿನಲ್ಲಿರುವ ಈ ಗುಟ್ಟದಲ್ಲಿ ವಿವಿಧ ರೀತಿಯ ವಿಸ್ಮಯಕಾರಿ ಕಲ್ಲು ಬಂಡೆಗಳಿವೆ. ರಾಷ್ಟ್ರೀಯ ಹೆದ್ದಾರಿ 7 ರ ಬೆ„ಪಾಸ್‌ ರಸ್ತೆಗೆ ಹೊಂದಿಕೊಂಡಿರುವ ಈ ಗುಟ್ಟ ಮೇಲೆ ಮಂಡೂಕದಂತಿರುವ ಕಲ್ಲು ಬಂಡೆ ಪ್ರವಾಸಿಗರ ಗಮನ ಸೆಳೆಯುತ್ತದೆ. ಗುಟ್ಟದ ಮುಂಭಾಗದಿಂದ ವಿಸ್ಮಯ ಕಲ್ಲಿನ ಬಂಡೆಗಳ ಕಾವಲು ಬೆರಗೊಳಿಸುತ್ತದೆ. ಗುಟ್ಟದ ಪಶ್ಚಿಮದಿಂದ ಆಮೆಯ ತಲೆಮೇಲೆ ಬೀಳಲು ತೆವಳುತ್ತಿರುವಂತೆ ನೋಡುಗರಿಗೆ ಭಾಸವಾಗುತ್ತದೆ. ಉತ್ತರದಿಂದ ನೋಡಿದಾಗ ಉದ್ಬವ ಶಿವ ಲಿಂಗ ದಂತೆ ಕಾಣುವುದು. ಹತ್ತಿರ ನೋಡಿದಾಗ ಆಂಜನೇಯ ಸ್ವಾಮಿ ದರ್ಶನವಾಗುವುದು.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಈ ದೇವಾಲಯ, ಗುಟ್ಟದ ವ್ಯಾಪ್ತಿಯಲ್ಲಿರುವ ಹೆಚ್ಚುವರಿ ಸರ್ಕಾರಿ ಜಾಗವನ್ನು ಭವಿಷ್ಯದ ದೃಷ್ಠಿಯಿಂದ ಸಂರಕ್ಷಿಸಬೇಕಾಗಿದೆ.ತಾಲೂಕಾಡಳಿತ, ಜನಪ್ರತಿನಿಧಿಗಳು ನಿರ್ಲಕ್ಷ್ಯದ ಪರಿಣಾಮ ಖಾಸಗಿ ವ್ಯಕ್ತಿಗಳು 99 ವರ್ಷಕ್ಕೆ ಈ ಜಾಗ ಗುತ್ತಿಗೆ ಪಡೆಯುವಂತೆ ಆಗಿದೆ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ಬೇಸರ ವ್ಯಕ್ತ ಪಡಿಸುತ್ತಾರೆ. ಪರಿಸರ ಪ್ರೇಮಿಗಳ ನೆರವಿನಿಂದ ಈ ಗುಟrದಲ್ಲಿ 40 ಕ್ಕೂ ಹೆಚ್ಚಿನ ವಿವಿಧ ರೀತಿಯ ಆರ್ಯುವೇಧ ಜೌಷಧ ಸಸಿಗಳನ್ನು ಬೆಳಸಲಾಗುತ್ತಿದೆ. ಬೆಳೆದು ನಿಂತ ಮರಗಳು ಬೇಸಿಗೆಯಲ್ಲಿ ಸುಟ್ಟು ಕರಕಲಾಗುತ್ತಿತ್ತು. ಕಳೆದ ಕೆಲ ವರ್ಷಗಳಿಂದ ಪರಿಸರ ಪ್ರೇಮಿಗಳ ಕಾಳಜಿಯಿಂದ ಇದಕ್ಕೆಲ್ಲಾ ಕಡಿವಾಣ ಬಿದ್ದಿದೆ

Advertisement

ಹಿರಿಯರು ಕಳೆದ ಆರು ದಶಕಗಳಿಂದ ಕಡಲೇ ಕಾಯಿ ಪರಿಷೆ ನಡೆಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಒಂದು ದಿನ ನಡೆಯುತ್ತಿದ್ದ ಪರಿಷೆ ಈ ವರ್ಷ 2 ದಿನಗಳ ಕಾಲ ನಡೆಸಲಾಗುತ್ತಿದೆ.ಪಾರಿವಾಳ ಗುಟ್ಟ ಧಾರ್ಮಿಕ ಕೇಂದ್ರದ ಜೊತೆಗೆ ಚಾರಣಕ್ಕೂ ಉತ್ತಮ ತಾಣವಾಗಿದೆ. ಈ ಜಾಗವನ್ನು ಸಂಬಂಧ ಪಟ್ಟ ಇಲಾಖೆಯು ಅಭಿವೃದ್ಧಿ ಪಡಿಸದಲ್ಲಿ, ಮುಂದಿನ ಪೀಳಿಗೆಗೆ ಉತ್ತಮ ತಾಣವಾಗುವುದು.ಈಗಾಗಲೇ ಗುಟ್ಟದಲ್ಲಿ 40 ಕ್ಕೂ ಹೆಚ್ಚಿನ ಆರ್ಯುವೇಧ ಸಸಿಗಳನ್ನು ನೆಡಲಾಗಿದೆ. ಉದ್ಯಾನವನದ ಜೊತೆಗೆ ರಾಶಿವನ , ನಕ್ಷತ್ರವನ ವನ್ನು ಅಭಿವೃದ್ಧಿ ಪಡಿಸಿ ವಾಕಿಂಗ್‌ ಟ್ರಾಕ್‌ ನಿರ್ಮಿಸುವ ಗುರಿ ಇದೆ.
-ಶಿವನಾಪುರ ಎಸ್‌ ಸಿ ರಮೇಶ್‌, ಜೈ ಮಾರುತಿ ಭಕ್ತ ಮಂಡಳಿ ಸೇವಾ ಸಮಿತಿ ಅಧ್ಯಕ್ಷ

ಸರ್ಕಾರ ಜೈನ ಮಂದಿರ ನಿರ್ಮಾಣಕ್ಕೆ 99 ವರ್ಷಕ್ಕೆ ಗುತ್ತಿಗೆ ನೀಡಿ, ಉಳಿದಿರುವ ಆಂಜನೇಯಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿರುವ ಸರ್ಕಾರಿ 1.35 ಎಕರೆ ಜಾಗವನ್ನು ಸ್ಥಳೀಯ ಸಾರ್ವಜನಿಕರ ಹಿತ ದೃಷ್ಠಿಯಿಂದ ದೇವಾಲಯವನ್ನು ವಶಕ್ಕೆ ನೀಡಬೇಕು.
-ಬಿಕೆ ಶಿವಪ್ಪ, ಜೈ ಮಾರುತಿ ಭಕ್ತ ಮಂಡಳಿ ಸೇವಾ ಸಮಿತಿ ಉಪಾಧ್ಯಕ್ಷ

* ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next