ಯಾದಗಿರಿ: ವಿಳಂಬವಾಗಿಯಾದರೂ ವಿಭಿನ್ನ ವಿನೂತನವಾಗಿ ಜಿಲ್ಲಾ ನ್ಯಾಯಾಲಯಸಂಕೀರ್ಣ ತಲೆ ಎತ್ತಲಿದ್ದು, ರಾಜ್ಯಕ್ಕೆಮಾದರಿಯಾಗಿ ನಿಲ್ಲಲಿದೆ. ನೀಲನಕ್ಷೆಯಂತೆನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ವಕೀಲರು, ನ್ಯಾಯಾಂಗ ಇಲಾಖೆ ಜತೆಗೆ ಸರ್ವರೂಸಹಾಯ ಅವಶ್ಯ ಎಂದು ಕರ್ನಾಟಕ ಉತ್ಛನ್ಯಾಯಾಲಯ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕಾ ಹೇಳಿದರು.
ನಗರದ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ, ಜಿಲ್ಲಾನ್ಯಾಯವಾದಿಗಳ ಸಂಘದ ಆಶ್ರಯದಲ್ಲಿನಗರದ ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿ ಜಿಲ್ಲಾ ನ್ಯಾಯಾಲಯ ಶಂಕುಸ್ಥಾಪನೆ ಸಮಾರಂಭಬೆಂಗಳೂರಿನಿಂದಲೇ ವರ್ಚುಯಲ್ ಮೂಲಕಉದ್ಘಾಟಿಸಿ ಮಾತನಾಡಿದರು. ಯಾದಗಿರಿ ಜಿಲ್ಲೆಯಲ್ಲಿ ಕಾರಣಾಂತರಗಳಿಂದಾಗಿ 10 ವರ್ಷಗಳಷ್ಟ ದೀರ್ಘ ಕಾಲದ ನಂತರ ಜಿಲ್ಲಾನ್ಯಾಯಾಲಯಕ್ಕೆ ಕಾಲ ಒದಗಿ ಬಂದಿದ್ದು, ಇನ್ನು ಮುಂದೆ ನ್ಯಾಯದಾನದಲ್ಲಿ ಯಾವುದೇವಿಳಂಬವಾಗಲಾರದು. ನ್ಯಾಯಾಂಗ ಇಲಾಖೆಒಟ್ಟು 25 ಎಕರೆ ಜಾಗವನ್ನು ಸದ್ಯ ಸರ್ಕಾರಜಿಲ್ಲಾಡಳಿತ 10 ಎಕರೆ ಜಾಗ ನೀಡಿದ್ದುಇನ್ನುಳಿದ ಜಾಗ ಶೀಘ್ರ ಲಭಿಸಿ ಪರಿಪೂರ್ಣ ಜಿಲ್ಲಾ ನ್ಯಾಯಾಲಯ ಸಂಕೀರ್ಣವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಜಿಲ್ಲಾ ಆಡಳಿತಾತ್ಮಕ ನ್ಯಾಯಾಧಿಧೀಶ ನಟರಾಜ ರಂಗಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಹಿರಿಯ-ಕಿರಿಯ ಮತ್ತು ಹಕ್ಕೊತ್ತಾಯದ ಪ್ರತಿಫಲವಾಗಿನ್ಯಾಯಾಲಯ ಕಾರ್ಯ ಆರಂಭಗೊಂಡಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಆಡಳಿತಾತ್ಮಕನ್ಯಾಯಾಧಿಧೀಶರಿಗೆ ಸನ್ಮಾನಿಸಲಾಯಿತು.ಈ ವೇಳೆ ಉತ್ಛ ನ್ಯಾಯಾಲಯದ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರ,ನ್ಯಾಯಮೂರ್ತಿ ಅಶೋಕ ಕಿಣಗಿ ಅಂತರ್ಜಾಲಸಭೆ ಮೂಲಕ ಕಾರ್ಯಕ್ರಮದಲ್ಲಿಭಾಗವಹಿಸಿದ್ದರು. ವೇದಿಕೆ ಮೇಲೆ ಡಿಸಿ ಡಾ| ರಾಗಪ್ರಿಯ ಆರ್ ಇದ್ದರು.
ಹಿರಿಯ ನ್ಯಾಯವಾದಿ ನರಸಿಂಗರಾವ್‌ಕುಲಕರ್ಣಿ ಪರಿಚಯ ಭಾಷಣ ಮಾಡಿದರು.ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾ ಧೀಶ ಎಸ್. ಶ್ರೀಧರ ಸ್ವಾಗತಿಸಿದರು. ಪ್ರಧಾನ ಸಿವಿಲ್ ನ್ಯಾಯಾ ಧೀಶ ಮಲ್ಲಿಕಾರ್ಜುನ ಮಾಡ್ವಾಳ ನಿರೂಪಿಸಿದರು.