Advertisement

ಹುಣಸೂರು ಸರ್ಕಾರಿ ಆಸ್ಪತ್ರೆಗೆ ಅಗತ್ಯ ಸೌಲಭ್ಯ: ನಿತೀಶ್‌ ಭರವಸೆ

12:06 PM Nov 17, 2017 | Team Udayavani |

ಹುಣಸೂರು: ಇನ್ನು ಮುಂದೆ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಪರಿಕರ ಹಾಗೂ ಔಷಧ ಮತ್ತಿತರ ಖರೀದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಟೆಂಡರ್‌ ಮೂಲಕ ಖರೀದಿ ಪ್ರಕ್ರಿಯೆ ನಡೆಸಬೇಕೆಂದು ಉಪ ವಿಭಾಗಾಧಿಕಾರಿ ಕೆ.ನಿತೀಶ್‌ ಆಸ್ಪತ್ರೆ ಆಡಳಿತಾಧಿಕಾರಿಗೆ ತಾಕೀತು ಮಾಡಿದರು.

Advertisement

ಉಪವಿಭಾಗಾಧಿಕಾರಿ ಕೆ.ನಿತೀಶ್‌ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಲೆಕ್ಕಪತ್ರ ಪರಿಶೀಲಿಸಿ ಮಾತನಾಡಿದರು. ನಂತರ ರಕ್ಷಾ ಸಮಿತಿ ಸದಸ್ಯರಿಂದ ಬಂದ ದೂರು- ಸಲಹೆ ಆಲಿಸಿ, ಇನ್ನು ಮುಂದೆ ಆಸ್ಪತ್ರೆ ಶುಚಿತ್ವ ಸೇರಿದಂತೆ ಚಿಕಿತ್ಸೆ ಎಲ್ಲವೂ ಸಾರ್ವಜನಿಕರಿಗೆ ಅಭ್ಯವಾಗಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದರು.

ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರು ಮಾಹಿತಿ ನೀಡಿ  ಆಸ್ಪತ್ರೆ ವಾರ್ಡ್‌ಗಳಲ್ಲಿ ಶೌಚಾಲಯಗಳು ಗಬ್ಬೆದ್ದು ನಾರುತ್ತಿದೆ, ಒಳಚರಂಡಿ ವ್ಯವಸ್ಥೆ ಸಂಪೂರ್ಣ ದುಸ್ತಿತಿಯಲ್ಲಿದ್ದು, ಅಶುಚಿತ್ವಕ್ಕೆ ಕಾರಣವಾಗಿದ್ದು ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಡಿ-ಗ್ರೂಪ್‌ ನೌಕರರ ಕೊರತೆ ಕಾಡುತ್ತಿದೆ. ಸಿಬ್ಬಂದಿಗಳು ನಿರ್ದಿಷ್ಟ ಸಮಯಕ್ಕೆ ಬರುವಂತಾಗಲು ಬಯೋಮೆಟ್ರಿಕ್‌ ಅಳವಡಿಸಬೇಕೆಂದು ಒತ್ತಾಯಿಸಿದರು.

ಸದಸ್ಯರ ಅಭಿಪ್ರಾಯಗಳು ಮತ್ತು ಸಲಹೆ ಆಲಿಸಿದ ಉಪವಿಭಾಗಾಧಿಕಾರಿ, ಆಸ್ಪತ್ರೆಯಲ್ಲಿ ಒಳಚರಂಡಿ ವ್ಯವಸ್ಥೆ ದುರಸ್ತಿಗೊಳಿಸುವ ಕಾರ್ಯ ಶೀಘ್ರ ಕೈಗೊಳ್ಳಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್‌ ಪೂರೈಕೆಯಲ್ಲಿ ಕೆಲ ತೊಂದರೆಗಳಿದ್ದು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಡಳಿತಾಧಿಕಾರಿ ಡಾ.ಕೃಷ್ಣಹಾಂಡ, ಆಸ್ಪತ್ರೆ ಆವರಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಬಳಿ ಜನರಿಕ್‌ ಔಷಧಿ ಮಳಿಗೆ ತೆರೆಯಲು ನಿರ್ಧರಿಸಲಾಗಿದೆ. ರಾಜ್ಯ ಗ್ರಾಮೀಣ ಆರೋಗ್ಯ ಅಭಿವೃದ್ಧಿ ಬೋರ್ಡ್‌ನ ಎಇಇ ಶ್ರೀನಿವಾಸ್‌ ಸ್ಥಳ ಪರಿಶೀಲನೆ ನಡೆಸಿದ್ದಾರೆಂದರು.

Advertisement

ರಾತ್ರಿಯಾಗುತ್ತಿದ್ದಂತೆ ಆಸ್ಪತ್ರೆ ಆವರಣದಲ್ಲಿ ಕಳ್ಳರ ಹಾವಳಿ ಹೆಚ್ಚುತ್ತಿದ್ದು, ಕಿಟಕಿಗಳಿಂದ ಕೈಹಾಕಿ ಮಲಗಿರುವ ರೋಗಿಗಳ ಕಾಲುಚೈನು ಕಸಿಯುತ್ತಿದ್ದಾರೆ. ಈ ಬಗ್ಗೆಯೂ ಕ್ರಮ ವಾಗಬೇಕೆಂದು ರಕ್ಷಾ ಸಮಿತಿ ನಿಲುವಾಗಿಲು ಪ್ರಭಾಕರ್‌ ಮನವಿ ಮಾಡಿದರು. ಸಭೆಯಲ್ಲಿ ತಹಶೀಲ್ದಾರ್‌ ಎಸ್‌.ಪಿ.ಮೋಹನ್‌, ಸಹಾಯಕ ಆಡಳಿತಾಧಿಕಾರಿ ಚಂದ್ರಶೇಖರ್‌, ವೈದ್ಯರು, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರವಿಸಾಲಿಯಾನ, ಸಂಜಯ್‌, ಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next