ಬಜಪೆ: ಗ್ರಾಮೀಣ ಸರ ಕಾರಿ ಶಾಲೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ನಿಟ್ಟಿನಲ್ಲಿ ಹಿರಿಯ ರಾದ ಕೃಷ್ಣ ಡಿ. ಶೆಟ್ಟಿಯವರು ಉಚಿತ ಪುಸ್ತಕಗಳನ್ನು ಕಳೆದ 20 ವರ್ಷಗಳಿಂದ ನೀಡುತ್ತಿದ್ದಾರೆ.
ವಿದ್ಯೆಗೆ ನೀಡುವ ಪ್ರೋತ್ಸಾಹ ಮತ್ತು ವಿದ್ಯಾದಾನ ಮಕ್ಕಳ ಬದುಕನ್ನು ರೂಪಿಸುತ್ತದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಬಡಗ ಎಕ್ಕಾರಿನ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಡೆದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಈ ಸಂದರ್ಭ ಸುಮಾರು 35 ಸಾವಿರ ರೂಪಾಯಿ ಮೌಲ್ಯದ ಬರೆಯುವ ಪುಸ್ತಕಗಳನ್ನು ದಾನಿಗಳಾದ ಕೃಷ್ಣ ಡಿ.ಶೆಟ್ಟಿ ಅವರು ಶಾಲಾ ಎಲ್ಲ ಮಕ್ಕಳಿಗೆ ವಿತರಿಸಿದರು.
ಉದ್ಯಮಿ ಭುಜಂಗ ಶೆಟ್ಟಿ, ಎಕ್ಕಾರು ಗ್ರಾ.ಪಂ. ಉಪಾಧ್ಯಕ್ಷೆ ಸುಜಾತಾ, ಎಸ್‌ಡಿ ಎಂಸಿ ಅಧ್ಯಕ್ಷ ಸುರೇಶ್ ಸಫ ಲಿಗ, ಉಪಾಧ್ಯಕ್ಷೆ ಉಮಾವತಿ, ಶಿಕ್ಷಕಿ ಯರಾದ ವಿಜಯಲಕ್ಷ್ಮೀ, ಚಂದ್ರಾ ವತಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶಶಿಪ್ರಭಾ ಸ್ವಾಗತಿಸಿದರು. ಶಿಕ್ಷಕಿ ಜಯಂತಿ ಕಾರ್ಯ ಕ್ರಮ ನಿರೂಪಿಸಿದರು. ಶಿಕ್ಷಕಿ ನಳಿನಿ ವಂದಿಸಿದರು.