Advertisement

ಬ್ಯಾಂಕ್‌-ಪೊಲೀಸರ ಮಧ್ಯೆ ಸಮನ್ವಯತೆ ಅಗತ್ಯ: ಎಸ್ಪಿ ರಾಧಿಕಾ

06:10 PM Oct 06, 2020 | Suhan S |

ಚಿತ್ರದುರ್ಗ: ಸೈಬರ್‌ ವಂಚನೆ, ಆರ್ಥಿಕ ಅಪರಾಧ ಪತ್ತೆಗೆ ಪೊಲೀಸರು ಹಾಗೂ ಬ್ಯಾಂಕುಗಳ ನಡುವೆ ಸಮನ್ವಯತೆಯ ಅಗತ್ಯವಿದೆ ಎಂದು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿ ಕಾ ಹೇಳಿದರು.

Advertisement

ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಸಹಯೋಗದಲ್ಲಿ ಆಯೋಜಿಸಿದ್ದ ಬ್ಯಾಂಕುಗಳ ಭದ್ರತಾ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತ  ನಾಡಿದರು. ಬ್ಯಾಂಕಿಂಗ್‌ ವಂಚನೆಗೆ ಸಂಬಂಧಿಸಿದಂತೆ ಖಾತೆದಾರರು ಪೊಲೀಸರ ಬಳಿ ಬಂದು ದೂರು ದಾಖಲಿಸುತ್ತಾರೆ. ಅದಕ್ಕೆ ಅಗತ್ಯ ಮಾಹಿತಿ, ಪೂರಕ ಸಾಕ್ಷ್ಯ ಗಳನ್ನು ಬ್ಯಾಂಕುಗಳು ಒದಗಿಸಬೇಕು. ದಾಖಲಾಗಿರುವ ಅನೇಕ ಪ್ರಕರಣಗಳಲ್ಲಿ ಬ್ಯಾಂಕುಗಳು ಸಮಯಕ್ಕೆ ಸರಿಯಾಗಿ ಅಗತ್ಯ ಮಾಹಿತಿಒದಗಿಸುತ್ತಿಲ್ಲ. ಇದರಿಂದಾಗಿ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳನ್ನು ಪತ್ತೆ ಮಾಡುವುದು ವಿಳಂಬವಾಗುತ್ತಿದೆ. ಈ ಬಗ್ಗೆ ಗೃಹ ಸಚಿವರ ಗಮನಕ್ಕೂ ತರಲಾಗಿದೆ ಎಂದರು.

ಸೈಬರ್‌ ಠಾಣೆಯಲ್ಲಿ ದಾಖಲಾದ ಶೇ. 60ರಷ್ಟು ಪ್ರಕರಣಗಳ ತನಿಖೆಗೆ ಹಿನ್ನಡೆಯಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೂಪಿಸಿದ ನಿಯಮಗಳನ್ನು ಬ್ಯಾಂಕುಗಳು ಪಾಲನೆ ಮಾಡಬೇಕು. ಆಗ ಮಾತ್ರ ಆರ್ಥಿಕ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ. ಎಟಿಎಂ ವಂಚನೆ ಪ್ರಕರಣಗಳಲ್ಲಿ ತನಿಖೆ ನಡೆಸುವಾಗ ಎಟಿಎಂಗಳಿಗೆ ಭೇಟಿ ನೀಡಿದರೆ ಪೂರಕ ಸಾಕ್ಷ್ಯಗಳೇ ಸಿಗುವುದಿಲ್ಲ. ಸಿಸಿ ಟಿವಿ ಸುಸ್ಥಿತಿಯಲ್ಲಿರುವುದಿಲ್ಲ. ಒಂದು ವೇಳೆ ಚೆನ್ನಾಗಿದ್ದರೂ ಹೆಚ್ಚು ದಿನಗಳ ಮೆಮೊರಿ ಸಂಗ್ರಹಿಸುವ ಸಾಮರ್ಥ್ಯ ಇರುವುದಿಲ್ಲ. ಭದ್ರತಾ ಸುರಕ್ಷತೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದಾಗ ಮಾತ್ರ ಬ್ಯಾಂಕಿಂಗ್‌ ಕ್ಷೇತ್ರ ಸುರಕ್ಷಿತವಾಗಿರಲು ಸಾಧ್ಯ. ಎಲ್ಲಾ ಎಟಿಎಂಗಳಿಗೆ ಕಡ್ಡಾಯವಾಗಿ ಭದ್ರತಾ ಸಿಬ್ಬಂದಿ ನೇಮಕ ಮಾಡಬೇಕು. ಆದರೂ ಕೆಲ ಎಟಿಎಂ ಗಳಲ್ಲಿ ಭದ್ರತಾ ಸಿಬ್ಬಂದಿ ಕಾಣಿಸುವುದಿಲ್ಲ. ಹಿರಿಯ ನಾಗರಿಕರನ್ನು ಎಟಿಎಂ ಭದ್ರತೆಗೆ ನಿಯೋಜಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್‌ಎಫ್‌) ಸಿಬ್ಬಂದಿಯನ್ನು ನಿಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇದಕ್ಕೆ ಬ್ಯಾಂಕುಗಳು ಒಪ್ಪಿಗೆ ಸೂಚಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿ ಕಾರಿ ಎಂ.ಬಿ. ನಂದಗಾವಿ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕ ಸಿ.ಬಿ. ಹಿರೇಮಠ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಯ್ಯ ಭಾಗವಹಿಸಿದ್ದರು.

 

Advertisement

ಸಿಸಿ ಟಿವಿ ಬದಲು ಪೆನ್‌ ಕ್ಯಾಮೆರಾ ಅಳವಡಿಸಿ :  ಒಟಿಪಿ, ಪಾಸ್‌ವರ್ಡ್‌ ಸೇರಿ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬ ಎಚ್ಚರಿಕೆ ನೀಡಿದರೂ, ಖಾತೆದಾರರಲ್ಲಿ ಅರಿವು ಮೂಡಿಲ್ಲ. ಹೊಸದುರ್ಗದ ರಾಷ್ಟ್ರೀಕೃತ ಬ್ಯಾಂಕಿನ ಎಟಿಎಂಗಳಲ್ಲಿ ಸ್ಕಿಮ್ಮಿಂಗ್‌ ಯಂತ್ರ ಇಟ್ಟು ಖಾತೆದಾರರ ಕಾರ್ಡ್‌ ವಿವರಗಳನ್ನು ಕಳವು ಮಾಡಲಾಗುತ್ತಿದೆ. ಎಟಿಎಂನಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳಿಗೆ ಟವೆಲ್‌ ಹಾಕಿ ಕೃತ್ಯ ಎಸಗಿದ ಪ್ರಕರಣಗಳೂ ವರದಿಯಾಗಿವೆ. ಹಾಗಾಗಿ ಸಿಸಿ ಟಿವಿ ಬದಲು ಪೆನ್‌ ಕ್ಯಾಮೆರಾ ಅಳವಡಿಸುವುದು ಸೂಕ್ತ ಎಂದು ಎಸ್ಪಿ ರಾಧಿಕಾ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next