Advertisement

ಪಾಲಕರಿಂದ ಮಕ್ಕಳ ಆರೋಗ್ಯ ಕಾಳಜಿ ಅವಶ್ಯ: ಶರಣಬಸಪ್ಪ

12:38 PM Jan 24, 2022 | Team Udayavani |

ಅಫಜಲಪುರ: ಬಾಳಿ ಬದುಕಬೇಕಾದ ಮಕ್ಕಳು, ಆಡಿ-ನಲಿಯುವ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾದರೆ ಹೆತ್ತವರಿಗೆ ಆಗುವ ನೋವು ಹೇಳತೀರದು ಎಂದು ಭಾರತೀಯ ಅಂಚೆ ಇಲಾಖೆ ಸಿಬ್ಬಂದಿ ಶರಣಬಸಪ್ಪ ಸಿಂಗೆ ಹೇಳಿದರು.

Advertisement

ತಾಲೂಕಿನ ಆನೂರ ಗ್ರಾಮದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮಗ ದಿ. ಶರದ್‌ ಸಿಂಗೆ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಿ ಅವರು ತಮ್ಮ ನೋವು ತೋಡಿಕೊಂಡರು. ನನ್ನ ಮಗ ಓದಿನಲ್ಲಿ ಬುದ್ಧಿವಂತನಾಗಿದ್ದ. ಸದಾ ಕ್ರಿಯಾಶೀಲನಾಗಿ, ಚಟುವಟಿಕೆಯಲ್ಲಿದ್ದ. ಆದರೆ ಅನಾರೋಗ್ಯದಿಂದ ನಮ್ಮನ್ನೆಲ್ಲ ಅಗಲಿದ್ದಾನೆ. ಅದು ಶ್ರೀ ಶಿವಕುಮಾರ ಸ್ವಾಮೀಜಿ ದೈವಾಧಿನರಾದ ದಿವವೇ ನನ್ನ ಮಗನೂ ಇಹಲೋಕ ತ್ಯಜಿಸಿದ್ದಾನೆ. ಹೀಗಾಗಿ ಅಂದು ಕೈಲಾದ ಮಟ್ಟಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿ ಪ್ರತಿವರ್ಷ ಸೇವಾ ಕಾರ್ಯ ಮಾಡುತ್ತಿದ್ದೇನೆ ಎಂದರು.

ಶಿಕ್ಷಕರಾದ ಜ್ಯೋತಿ ಆರ್‌. ಗೌಂಡಿ, ಯಲ್ಲಮ್ಮ ಸಿ. ಸಿಂಗೆ, ಭೌರಮ್ಮ ಎಸ್‌. ಸುತಾರ, ಜೈಮಾಲಾ ಎ. ಪಾಟೀಲ, ರೂಪಾ ಸಿ. ಪಾಟೀಲ, ಸಿದ್ಧಣ್ಣ ಪಿ. ಸಿಂಗೆ ಬಡದಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next