Advertisement
ಈ ರಸ್ತೆ ಬೆಳ್ತಂಗಡಿ-ಬಂಟ್ವಾಳ ತಾಲೂಕನ್ನು ಸಂಪರ್ಕಿಸುವ ಜತೆಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಭಾಗದ ಜನತೆಗೂ ಅನುಕೂಲ ರಸ್ತೆಯಾಗಿದೆ. ಬೆಳ್ತಂಗಡಿಯ ಪೆದಮಲೆಯಿಂದ ಸರಳೀಕಟ್ಟೆ – ಬಜಾರದ ಮೂಲಕ ಸಾಗಿದರೆ ರಸ್ತೆಯು ಬಂಟ್ವಾಳದ ಅಜಿಲಮೊಗರನ್ನು ಸಂಪರ್ಕಿಸುತ್ತದೆ. ಹೀಗಾಗಿ ಇದು ಗ್ರಾಮೀಣ ಭಾಗದ ಸಂಪರ್ಕ ಕೊಂಡಿ ಎನಿಸಿಕೊಂಡಿದೆ. ರಸ್ತೆಗೆ ಹಲವು ವರ್ಷಗಳ ಇತಿಹಾಸ ವಿದ್ದರೂ ತೇಪೆ ಕಾರ್ಯ ನಡೆಯದೆ ರಸ್ತೆ ಶಿಥಿಲಾವಸ್ಥೆಗೆ ತಲುಪಿದೆ.
Related Articles
ಈ ರಸ್ತೆಯು ಪೆದಮಲೆಯಿಂದ ಸಾಗಿ ಬೆಳ್ತಂಗಡಿಯ ಗಡಿಯ ಭಾಗಕ್ಕೆ ಅಂತ್ಯಗೊಳ್ಳುತ್ತಿತ್ತು. ಅಂದರೆ ರಸ್ತೆಗೆ ಅಡ್ಡಲಾಗಿ ಅಜಿಲಮೊಗರಿನ ಸಮೀಪ ನೇತ್ರಾವತಿಯ ಉಪನದಿ ಹಾದು ಹೋಗುವುದರಿಂದ ಬಂಟ್ವಾಳ ತಾಲೂಕಿನ ಸಂಪರ್ಕ ಅಸಾಧ್ಯವಾಗಿತ್ತು. ಕೆಲವು ವರ್ಷಗಳ ಹಿಂದೆ ಉದಯವಾಣಿ ನಡೆಸಿದ ಕಂಡೇವಾ ಸೇತುವೆ ಅಭಿಯಾನದಲ್ಲೂ ಇದು ಪ್ರಸ್ತಾವವಾಗಿತ್ತು. ಗ್ರಾಮಸ್ಥರಿಂದ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿಯ ಅಂದಿನ ಶಾಸಕ ಕೆ. ವಸಂತ ಬಂಗೇರ ಅವರ ಪ್ರಸ್ತಾವನೆ ಮೇರೆಗೆ ಸೇತುವೆಗೆ ಅನುದಾನ ಮಂಜೂರಾಗಿ ಸೇತುವೆ ನಿರ್ಮಾಣಗೊಂಡಿದೆ.
Advertisement
ಸೇತುವೆಗಳೂ ಶಿಥಿಲ ಈ ರಸ್ತೆಯಲ್ಲಿ ಮೂರ್ನಾಲ್ಕು ಸೇತುವೆಗಳಿದ್ದು, ಹೆಚ್ಚಿನವು ಶಿಥಿಲಾವಸ್ಥೆಗೆ ತಲುಪಿವೆ. ಅದರಲ್ಲೂ ಬನ್ನೆಂಗಳ ಸೇತುವೆ ಅಪಾಯಕಾರಿಯಾಗಿದ್ದು, ಈಗಾಗಲೇ ಸಾಕಷ್ಟು ವಾಹನಗಳು ಸೇತುವೆಯ ಕೆಳಗೆ ಬಿದ್ದ ಘಟನೆಗಳು ನಡೆದಿವೆ. ಹೀಗಾಗಿ ಸೇತುವೆಗೂ ಕಾಯಕಲ್ಪ ನಡೆಯಬೇಕಿದೆ. ಕಳೆದ ವರ್ಷ
ತೇಪೆ ಕಾರ್ಯ
ಪೆದಮಲೆ-ಸರಳೀಕಟ್ಟೆ ರಸ್ತೆಯು ತೀರಾ ಹದಗೆಟ್ಟ ಪರಿಣಾಮ ಅನುದಾನ ಇಲ್ಲದಿದ್ದರೂ ಜನರಿಗೆ ತೊಂದರೆಯಾಗದಂತೆ ರಸ್ತೆಗೆ ತೇಪೆ ಕಾರ್ಯ ನಡೆದಿತ್ತು. ಹೀಗಾಗಿ ಈಗ ಮತ್ತೆ ತೇಪೆ ಕಾರ್ಯ ಅಸಾಧ್ಯ. ಮುಂದೆ ಶಾಸಕರ ಜತೆ ಚರ್ಚಿಸಿ ಅನುದಾನಕ್ಕೆ ಪ್ರಯತ್ನಿಸಲಾಗುವುದು.
- ಚೆನ್ನಪ್ಪ ಮೊಲಿ
ಎಇಇ, ಪಂಚಾಯತ್ ರಾಜ್ ಇಲಾಖೆ, ಬೆಳ್ತಂಗಡಿ