Advertisement

ಧೂಳು, ಸಂಚಾರ ದಟ್ಟಣೆ ಸಮಸ್ಯೆಗೆ ಬೇಕಿದೆ ಪರಿಹಾರ

10:18 PM Dec 09, 2020 | mahesh |

ಮಹಾನಗರ: ಹಳೆ ಬಂದರು ಪ್ರದೇಶದ ರಸ್ತೆ ಅಭಿವೃದ್ಧಿ, ಒಳಚರಂಡಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗು ತ್ತಿವೆ ಎಂದು ಸ್ಥಳೀಯ ವ್ಯಾಪಾರಸ್ಥರು ದೂರಿದ್ದಾರೆ. 8 ತಿಂಗಳುಗಳಿಂದ ಇಲ್ಲಿನ ರಸ್ತೆ ಕಾಮ ಗಾರಿಯನ್ನು ನಡೆಸಲಾಗುತ್ತಿದೆ. ಆದರೆ ನಿರಂತರವಾಗಿ, ವೇಗವಾಗಿ ಕಾಮಗಾರಿ ನಡೆಯದ ಪರಿಣಾಮದಿಂದ ಹಲವಾರು ಸಮಸ್ಯೆಗಳು ತಲೆದೋರಿವೆ. ರಸ್ತೆಯನ್ನು ಅಗೆದು ಹಾಕಿರುವುದರಿಂದ ಇಲ್ಲಿ ಧೂಳು, ಪದೇ ಪದೇ ಸಂಚಾರ ಸ್ಥಗಿತದ ಸಮಸ್ಯೆ ಉಂಟಾಗಿದೆ ಎಂದು ವ್ಯಾಪಾರಸ್ಥರು ಅಹವಾಲು ತೋಡಿಕೊಂಡಿದ್ದಾರೆ. ಬಂದರು ಮುಖ್ಯ ರಸ್ತೆ, ಚೇಂಬರ್‌ ರಸ್ತೆ, ಇವುಗಳ ಸಂಪರ್ಕ ರಸ್ತೆಗಳಲ್ಲಿ ಬಹುತೇಕ ಕಡೆ ಒಳಚರಂಡಿ ಕಾಮಗಾರಿಗಳು, ಕೇಬಲ್‌ಗ‌ಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಕಾಂಕ್ರೀಟ್‌ ಕಾಮಗಾರಿ ನಡೆಯದೆ ಇರುವುದರಿಂದ ಸಮಸ್ಯೆಯಾಗಿದೆ.

Advertisement

ವ್ಯಾಪಾರ, ಆರೋಗ್ಯಕ್ಕೂ ಪೆಟ್ಟು
ಧೂಳಿನಿಂದಾಗಿ ಹಲವರಿಗೆ ಕೆಮ್ಮು, ಅಲರ್ಜಿಯ ಸಮಸ್ಯೆಗಳು ಉಂಟಾಗಿವೆ ಎಂದು ಕೆಲವು ಮಂದಿ ಸ್ಥಳೀಯ ವ್ಯಾಪಾರ ಸ್ಥರು ದೂರಿದ್ದಾರೆ. “ಹಳೆ ಬಂದರು ಪ್ರದೇಶ ದೊಡ್ಡ ರಖಂ ವ್ಯಾಪಾರ ಕೇಂದ್ರ. ಆದರೆ ಇಲ್ಲಿಗೆ ಅಗತ್ಯವಾದ ರಸ್ತೆ ಸಂಪರ್ಕವೇ ಸರಿಯಾಗಿಲ್ಲ. 7-8 ತಿಂಗಳುಗಳಿಂದ ರಸ್ತೆ ಅವ್ಯವಸ್ಥೆಯಿಂದಾಗಿ ಕೆಲವು ಮಂದಿ ಚಿಲ್ಲರೆ ವ್ಯಾಪಾರಸ್ಥರು ಇಲ್ಲಿಗೆ ಆಗಮಿಸದೆ ಬೇರೆ ಊರುಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ ವ್ಯಾಪಾರದ ಮೇಲೆಯೂ ದುಷ್ಪರಿಣಾಮ ಉಂಟಾಗಿದೆ’ ಎನ್ನುತ್ತಾರೆ ಸ್ಥಳೀಯ ವ್ಯಾಪಾರಸ್ಥ ಝಾಕಿರ್‌ ಅವರು.

ವಾಹನದಟ್ಟಣೆ ಹಿನ್ನೆಲೆಯಲ್ಲಿ ರಾತ್ರಿ ಕೆಲಸ
ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಹಳೆಬಂದರು ಪ್ರದೇಶದಲ್ಲಿ ಹಗಲು ವೇಳೆ ವಾಹನ ದಟ್ಟಣೆ ಹೆಚ್ಚು. ಇಲ್ಲಿನ ರಸ್ತೆಗಳನ್ನು ಬಂದ್‌ ಮಾಡುವುದು ಅಸಾಧ್ಯ. ಹಗಲು ವೇಳೆ ಇಲ್ಲಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಮಾತ್ರ ಕಾಮಗಾರಿ ಮಾಡಲಾಗುತ್ತಿದೆ. ಕಾಮಗಾರಿಯನ್ನು ವಿಳಂಬವಾಗಿ ಮಾಡುತ್ತಿಲ್ಲ.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

ಲಭ್ಯ ಜಾಗದಲ್ಲಿ ಶೀಘ್ರ ರಸ್ತೆ ನಿರ್ಮಿಸಿ
ಇಲ್ಲಿನ ರಸ್ತೆಗಳನ್ನು ವಿಸ್ತರಿಸಲು ಸ್ಥಳಾವಕಾಶವಿಲ್ಲ. ಹಾಗಾಗಿ ಲಭ್ಯ ಇರುವ ಜಾಗದಲ್ಲಿಯೇ ರಸ್ತೆ ನಿರ್ಮಿಸಬೇಕು. ಒಳಚರಂಡಿ ಕಾಮಗಾರಿ ಮುಗಿಸಿ ರಸ್ತೆ ನಿರ್ಮಿಸಿದರೆ ಸಾಕು. ಧೂಳಿನಿಂದಾಗಿ ಇಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿದೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. ಅಧಿಕಾರಿ, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು.
-ಮೋಹನದಾಸ ಪ್ರಭು, ಅಧ್ಯಕ್ಷರು, ಹಳೆಬಂದರು ರಖಂ ವ್ಯಾಪಾರಸ್ಥರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next