Advertisement
ಐಬಿಪಿಎಸ್ ನಲ್ಲಿ 7275ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವ ಸೌಲಭ್ಯ, ಸ್ವಾತಂತ್ರ್ಯನಂತರ ಲಭಿಸಿತು. ಆದರೆ ಹಳ್ಳಿಗಳ ಜನರಿಗೂ ಈ ಸೌಲಭ್ಯ ತಲುಪುವಂತಾಗಿದ್ದು ಇತ್ತೀಚಿನ ಎರಡು ದಶಕಗಳಲ್ಲಿ. ಅದೂ ಜಿಲ್ಲಾ, ಗ್ರಾಮೀಣ ಬ್ಯಾಂಕುಗಳು ಆರಂಭವಾದ ಮೇಲೆ. ಸ್ವಾತಂತ್ರ್ಯ ಪೂರ್ವದಲ್ಲಿ ಶ್ರೀಮಂತರು ತಮ್ಮ ಆರ್ಥಿಕ ವ್ಯವಹಾರವನ್ನು ನಡೆಸಲು ಒಬ್ಬ ಗುಮಾಸ್ತನನ್ನು ಇರಿಸಿಕೊಳ್ಳುತ್ತಿದ್ದರು. ಆಧುನಿಕತೆ ಬೆಳೆದಂತೆ ಗುಮಾಸ್ತ ವೃತ್ತಿಯೂ ಬೇರೆ ಬೇರೆ ಹುದ್ದೆಗಳಿಗೆ ಸಂಬಂಧಿಯಾಗಿ ಸೇರಿಹೋಯಿತು. ಅಂದರೆ, ವಿವಿಧ ಕ್ಷೇತ್ರದ ಆರ್ಥಿಕತೆಯ ಭಾಗವಾಗಿ ಕ್ಲರಿಕಲ್ ಪೋಸ್ಟ್‌ಗಳು ಸೇರಿದವು. ಪ್ರಸ್ತುತ ಇನ್ಸ್‌ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್‌ನಿಂದ (ಐಬಿಪಿಎಸ್) ದೇಶವ್ಯಾಪಿ 7275 ಕ್ಲರ್ಕ್, ಗುಮಾಸ್ತ(ಸಿಆರ್‌ಪಿ- ಗಿMMM) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳನ್ನು ದೇಶವ್ಯಾಪಿ ಎಲ್ಲ ರಾಜ್ಯಗಳಿಗನುಗುಣವಾಗಿ ವಿಂಗಡನೆ ಮಾಡಲಾಗಿದೆ. ಕರ್ನಾಟಕಕ್ಕೆ 618 ಹುದ್ದೆಯನ್ನು ವಿಂಗಡಿಸಲಾಗಿದೆ.
ಆನ್‌ಲೈನ್ ಅಪ್ಲಿಕೇಷನ್ ಹಾಕಲು ಅವಕಾಶ – 18.09.2018- 10.10.2018
ಪೂರ್ವ ಪರೀಕ್ಷೆಗೆ ತರಬೇತಿ ಕಾಲ್‌ಲೆಟರ್ ಡೌನ್‌ಲೋಡ್ ಅವಧಿ- ನವೆಂಬರ್ 2018
ಪೂರ್ವ ಪರೀûಾ ತರಬೇತಿ- 26.11.2018- 1 ಡಿಸೆಂಬರ್ 2018
ಆನ್‌ಲೈನ್ ಪರೀಕ್ಷೆ ಕಾಲ್‌ಲೆಟರ್(ಪ್ರಿಲಿಮಿನರಿ) ಡೌನ್‌ಲೋಡ್ ದಿನಾಂಕ- ನವೆಂಬರ್ 2018
ಆನ್‌ಲೈನ್ ಎಕ್ಸಾಮಿನೇಷನ್- 08, 09, 15,16.12.2018
ಆನ್‌ಲೈನ್ ಪರೀಕ್ಷೆ ಫಲಿತಾಂಶ(ಪ್ರಿಲಿಮಿನರಿ)- ಡಿಸೆಂಬರ್/ ಜನವರಿ 2109
ಮೈನ್ ಪರೀಕ್ಷೆಯ ಕಾಲ್ ಲೆಟರ್ ಡೌನ್‌ಲೋಡ್ ಮಾಡುವ ಅವಕಾಶ- ಜನವರಿ 2019
ಮೈನ್ ಆನ್‌ಲೈನ್ ಪರೀಕ್ಷೆ – 20.09.2019
ಹುದ್ದೆಗಳ ನಿಯೋಜನೆ- ಏಪ್ರಿಲ್ 2019 ವಿದ್ಯಾರ್ಹತೆ, ವಯೋಮಿತಿ
ಕ್ಲರಿಕಲ್ ಹುದ್ದೆಯನ್ನು ಹೊಂದಲು ಅಂಗೀಕೃತ ವಿಶ್ವವಿದ್ಯಾಲಯಗಳಲ್ಲಿ ಹುದ್ದೆಗೆ ಸಂಬಂಧಿತ ಪದವಿ ಪಡೆದಿರಬೇಕು. ಜೊತೆಗೆ ಗಣಕ ಜ್ಞಾನ ಕಡ್ಡಾಯ. ಸೆ.1ಕ್ಕೆ ಅನುಗುಣವಾಗಿ ಅಭ್ಯರ್ಥಿಗೆ ಕನಿಷ್ಠ 20 ಮತ್ತು ಗರಿಷ್ಠ 28 ವರ್ಷ ಆಗಿರಬೇಕು. ಪರಿಶಿಷ್ಟರಿಗೆ 5 ವರ್ಷ, ಇತರೆ ಹಿಂದುಳಿದ ವ್ಯಕ್ತಿಗಳಿಗೆ ಮೂರು ವರ್ಷ ಮತ್ತು ಅಂಗವಿಕಲರಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ.
Related Articles
ಕ್ಲರ್ಕ್ ಹುದ್ದೆಗೆ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ಮತ್ತು ಮೈನ್ಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Advertisement
ಪ್ರಾಥಮಿಕ ಅಥವಾ ಪ್ರಿಲಿಮಿನರಿ ಎಕ್ಸಾಮಿನೇಷನ್ ಇಂಗ್ಲಿಷ್(30 ಅಂಕ), ನ್ಯೂಮರಿಕಲ್ ಎಬಿಲಿಟಿ(35) ಹೀಗೆ, ರೀಸನಿಂಗ್ ಎಬಿಲಿಟಿ(35) ಒಟ್ಟು ನೂರು ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ ಇದರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಖ್ಯ ಅಥವಾ ಮೈನ್ಸ್ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಮೈನ್ಸ್ ಪರೀಕ್ಷೆಯಲ್ಲಿ ಜನರಲ್/ಫೈನಾನ್ಷಿಯಲ್ ಅವೇರ್‌ನೆಸ್(50 ಅಂಕ), ಜನರಲ್ ಇಂಗ್ಲಿಷ್(40), ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಟಿಟ್ಯೂಡ್(50), ಕ್ಯಾಂಟಿಟೇಟೀವ್ ಆಪ್ಟಿಟ್ಯೂಡ್(50) ಒಟ್ಟು 20 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಬಳಿಕ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?ಕ್ಲಕ್ ಹುದ್ದೆ ಪಡೆಯಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಅಗತ್ಯವಾದ ದಾಖಲೆ ಸಾಫ್ಟ್ಕಾಪಿ, ಸಹಿ, ಭಾವಚಿತ್ರವನ್ನು ಮುಂಚಿತವಾಗಿ ಒಂದು ಫೋಲ್ಡರ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಒಳಿತು. ಬಳಿಕ goo.gl/LofnEY ಜಾಲತಾಣದ ಮೂಲಕ ಜನ್ಮದಿನಾಂಕ, ತಂದೆ, ತಾಯಿ ಹೆಸರು ಇತ್ಯಾದಿ ಮಾಹಿತಿಯನ್ನು ತುಂಬಿ ರಿಜಿಸ್ಟರ್ ಆಗಬೇಕು. ರಿಜಿಸ್ಟರ್ ಒಟಿಪಿ ಪಡೆದು ಪಾಸ್‌ವರ್ಡ್ ಬಳಸಿ ಮತ್ತೆ ಒಳಪ್ರವೇಶಿಸಿ ಅಗತ್ಯ ದಾಖಲೆ, ಭಾವಚಿತ್ರ, ಸಹಿ ಇತ್ಯಾದಿ ತುಂಬಿ ಚಲನ್ ಪಡೆಯಬೇಕು. ನಂತರದ 48 ಗಂಟೆಗಳಲ್ಲಿ ಅಂಚೆಕಚೇರಿಯಲ್ಲಿ ಶುಲ್ಕ ಪಾವತಿ ಮಾಡಿ, ಅಲ್ಲಿ ನೀಡುವ ಪಾವತಿ ನಂಬರನ್ನು ಜಾಲತಾಣದಲ್ಲಿ ನಮೂದಿಸಬೇಕು. ಅರ್ಜಿ ಸಲ್ಲಿಕೆಗೆ ಅಕ್ಟೋಬರ್10 ಕೊನೆಯ ದಿನ. ಸಾಮಾನ್ಯ ಅಭ್ಯರ್ಥಿಗೆ 600ರೂ. ಮತ್ತು ಪರಿಶಿಷ್ಟ ಅಭ್ಯರ್ಥಿಗೆ 100 ರೂ. ಶುಲ್ಕ ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ goo.gl/AMRvAW ಸಂಪರ್ಕಿಸಿ. – ಎನ್. ಅನಂತನಾಗ್