Advertisement

Sandalwood: ʼನೀ ನಂಗೆ ಅಲ್ಲವಾ’ ಚಿತ್ರಕ್ಕೆ ಮುರಳಿ ಸಾಥ್

03:45 PM Dec 16, 2024 | Team Udayavani |

“ನೀ ನಂಗೆ ಅಲ್ಲವಾ’ ಎಂಬ ಸಿನಿಮಾವೊಂದು ಆರಂಭವಾಗುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಟೈಟಲ್‌ ಅನ್ನು ನಟ ಶ್ರೀಮುರಳಿ ಅನಾವರಣಗೊಳಿಸಿದರು.

Advertisement

ಎಸ್‌ ಪಾರ್ವತಿ ಗೌಡ, ಪವನ್‌ ಪರಮಶಿವಂ ಹಾಗೂ ಮನೋಹರ್‌ ಕಾಂಪಲ್ಲಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಮನೋಜ್‌ ಪಿ ನಡಲುಮನೆ ನಿರ್ದೇಶಿಸುತ್ತಿದ್ದಾರೆ.

ರಾಹುಲ್‌ ಅರ್ಕಾಟ್‌ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಹಿಂದೆ ಆನಾ ಹಾಗೂ ಮೇರಿ ಚಿತ್ರಗಳನ್ನು ನಿರ್ದೇಶಿಸಿದ್ದ ಮನೋಜ್‌ ಪಿ ನಡಲುಮನೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಮನೋಜ್‌ ಅವರೆ ಬರೆದಿದ್ದಾರೆ.

ಸೂರಜ್‌ ಜೋಯಿಸ್‌ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಸಂಕಲನಕಾರ ನಾಗೇಂದ್ರ ಉಜ್ಜನಿ ಅವರ ಸಂಕಲನ ಈ ಚಿತ್ರಕ್ಕಿದೆ. ನಟ ಶ್ರೀಮುರಳಿ ಹಾಗೂ ವಿದ್ಯಾ ಶ್ರೀಮುರಳಿ ಅವರು ಅರ್ಪಿಸುತ್ತಿರುವ ಮೊದಲ ಚಿತ್ರ ನೀ ನಂಗೆ ಅಲ್ಲವಾ  ಸಂಕ್ರಾಂತಿ ನಂತರ ಚಿತ್ರೀಕರಣ ಆರಂಭವಾಗಲಿದೆ

Advertisement

Udayavani is now on Telegram. Click here to join our channel and stay updated with the latest news.

Next