Advertisement

ಬಸ್‌ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ

05:30 PM Oct 25, 2020 | Suhan S |

ಬೇಲೂರು: ವಿಶ್ವ ವಿಖ್ಯಾತ ಬೇಲೂರು ಪಟ್ಟಣದಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣ ಹತ್ತಾರು ಸಮಸ್ಯೆಗಳ ಆಗರವಾಗಿದೆ.

Advertisement

ಈ ಹಿನ್ನೆಲೆಯಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರಿಯ ಸಂಚಾಲನಾ ಅಧಿಕಾರಿ ವಿಶ್ವನಾಥ್‌ ಶನಿವಾರ ಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಪ್ರಯಾಣಿಕರು ಸಾಕಷ್ಟು ಸಮಸ್ಯೆಗಳನ್ನು ಹೇಳಿಕೊಂಡರು. ನಂತರ ಬಸ್‌ ನಿಲ್ದಾಣಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಬದ್ಧವಾಗಿರುವುದಾಗಿ ವಿಶ್ವನಾಥ್‌ ಭರವಸೆ ನೀಡಿದರು.

ನಿಲ್ದಾಣ ಅಭಿವೃದ್ಧಿ ಪಡಿಸಲು ಸಂಸ್ಥೆ ಬದ್ಧ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರು ಶಿಲ್ಪಕಲೆಗಳ ತವರೂರು. ಈ ಮೂಲಕ ಕಲೆ, ಸಂಸ್ಕೃತಿ, ನೃತ್ಯ ಪ್ರಕಾರಗಳನ್ನು ನಾಡಿಗೆ ನೀಡಿದ ಹೆಗ್ಗಳನ್ನುಹೊಂದಿದೆ. ಇಂತಹ ಪ್ರವಾಸಿ ತಾಣಕ್ಕೆ ತಕ್ಕಂತೆ ಬಸ್‌ ನಿಲ್ದಾಣವನ್ನು ಶೀಘ್ರವೇ ವಿಸ್ತರಣೆ ಮಾಡಬೇಕು ಎಂದು ಸಾರ್ವಜನಿಕರು ಇಲ್ಲಿನಸಂಘಟನೆಗಳು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಿವೆ. ಅಂತೆಯೇ ವಿಸ್ತರಣೆಗೆ ಸಂಬಂಧಪಟ್ಟ ಮಂತ್ರಿಗಳಲ್ಲಿ ಮಾತನಾಡಿ, ಪ್ರವಾಸಿ ತಾಣ ಬೇಲೂರಿನ ಬಸ್‌ ನಿಲ್ದಾಣದ ವಿಸ್ತರಣೆ ಮಾಡಿ, ಅಭಿವೃದ್ಧಿ ಪಡಿಸಲು ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದರು.

ಸೋರುತ್ತಿರುವ ಚಾವಣಿ ದುರಸ್ತಿ: ಬಸ್‌ ನಿಲ್ದಾಣದಲ್ಲಿನ ಅಂಗಡಿ ಮುಂಗಟ್ಟುಗಳಕಟ್ಟಡದ ಚಾವಣಿ ಮಳೆ ಬಂದಾಗ ಸೊರುತ್ತಿದೆ ಎಂದು ಅಂಗಡಿ ಮಾಲಿಕರಿಂದ ದೂರುಗಳು ಬಂದಿವೆ. ಇನ್ನು ಒಂದು ತಿಂಗಳಲ್ಲಿ ಚಾವಣಿ ದುರಸ್ತಿ ಮಾಡುವುದರ ಜೊತೆಗೆ ಗ್ರಾಹಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸುಸಜ್ಜಿತ ಆಸನಗಳು ಸೇರಿ ಗ್ರಾಹಕರ ಅನುಕೂಲಕ್ಕೆ ಅಗತ್ಯವಾಗಿರುವ ಸೌಲಭ್ಯಗಳನ್ನು ಒದಗಿಸ ಲಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಬಸ್‌: ಗ್ರಾಮೀಣ ಪ್ರದೇಶಕ್ಕೆ ಹೆಚ್ಚುವರಿ ಬಸ್‌ ಓಡಿಸುವುದಕ್ಕೂ ಕೂಡ ಸಂಸ್ಥೆ ಅಲೋಚನೆ ಮಾಡಿದ್ದು, ಇಲ್ಲಿನ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

Advertisement

ವಿವಿಧ ಸ್ಥಳಗಳಿಗೆ ಬಸ್‌ ಸೌಲಭ್ಯ: ವಿಶೇಷವಾಗಿ ಪ್ರವಾಸಿ ತಾಣ ಬೇಲೂರಿನಿಂದಲೇ ನೇರ ಧರ್ಮಸ್ಥಳ, ಹೊರನಾಡು, ಕಳಸ, ಸುಬ್ರಹ್ಮಣ್ಯ, ಹಳೇಬೀಡು ಮುಂತಾದ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಸ್ಥಳಗಳಿಗೆ ದಿನ ಪೂರ್ತಿ ಬಸ್‌ಸಂಚಾರವನ್ನು ಬೇಲೂರು ಘಟಕದಿಂದ ನೀಡಲಾಗುತ್ತದೆ ಎಂದು ಹೇಳಿದರು.

ಗ್ರಾಮೀಣ ಭಾಗಕ್ಕೆ ಬಸ್‌: ಈ ಸಂದರ್ಭದಲ್ಲಿ ಬೇಲೂರು ಬಸ್‌ ಡಿಪೋ ವ್ಯವಸ್ಥಾಪಕ ಬೈರೇ ಗೌಡ ಮಾತನಾಡಿ, ಪಟ್ಟಣದಲ್ಲಿನ ಬಸ್‌ ನಿಲ್ದಾಣ ಚಿಕ್ಕದಾಗಿರುವ ಕಾರಣದಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪ್ರಯಾಣಕ್ಕೆ ದಿನ-ನಿತ್ಯ ತೊಂದರೆಯಾಗುತ್ತಿದೆ. ಅಲ್ಲದೆ, ನಿಲ್ದಾಣದ ಪ್ರವೇಶ ದ್ವಾರ ಪದೇ ಪದೆಕಿತ್ತುಹೋಗಿ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು. ಬಸ್‌ ನಿಲ್ದಾಣಕ್ಕೆ ಸುಣ್ಣ ಬಣ್ಣ ಬಳಿಸಬೇಕಾಗಿದೆ. ಹಾಗೆಯೇ ಗ್ರಾಮೀಣ ಪ್ರದೇ ಶಕ್ಕೆಹೆಚ್ಚುವರಿ ಬಸ್‌ ವ್ಯವಸ್ಥೆಗೆ ಅಧಿಕಾರಿಗಳು ಗಮನ ನೀಡಬೇಕು ಎಂದು ಮನವಿ ಮಾಡಿ ಕೊಂಡರು. ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ನಿಲ್ದಾಣ  ಅಧಿಕಾರಿ ಈಶ್ವರಪ್ಪ, ಮಂಜುಡಿಡಿನಾಥ್‌ ಇನ್ನು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next