Advertisement

ಸೋಂಕು ಮುಕ್ತ ಪರೀಕ್ಷೆಗೆ ಅಗತ್ಯ ಕ್ರಮ

06:35 AM Jun 25, 2020 | Lakshmi GovindaRaj |

ಕನಕಪುರ: ವಿದ್ಯಾರ್ಥಿಗಳು ಮುಕ್ತವಾಗಿ ಪರೀಕ್ಷೆ ಎದುರಿಸಲು ಸೋಂಕು ನಿಯಂತ್ರಣದ ಎಲ್ಲ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದೆ ಎಂದು ಕೋಡಿಹಳ್ಳಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ.ಕೃಷ್ಣಮೂರ್ತಿ ತಿಳಿಸಿದರು. ತಾಲೂಕಿನ  ಕೋಡಿಹಳ್ಳಿ ಗ್ರಾಪಂನಲ್ಲಿ ಪರೀಕ್ಷಾ ಮೇಲ್ವಿಚಾರಕ ಶಿಕ್ಷಕರಿಗೆ ಥರ್ಮಲ್‌ ಸ್ಕ್ರೀನಿಂಗ್‌ ಸಾಧನ ಮತ್ತು ಸ್ಯಾನಿಟೈಸರ್‌ ಹಸ್ತಾಂತರಿಸಿ ಮಾತನಾಡಿದರು.

Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೋಠಡಿಗಳಲ್ಲಿ ಕೋವಿಡ್‌ 19 ನಿಯಂತ್ರಣದ ಮುಂಜಾಗ್ರತೆ  ಕ್ರಮಕೈಗೊಳ್ಳಲು ಗ್ರಾಪಂಗೆ ಶಿಕ್ಷಣ ಇಲಾಖೆಯಿಂದ ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಪರೀಕ್ಷೆ ಕೋಠಡಿಗಳಿಗೆ ಎಲ್ಲ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದ್ದು, ಹೈಪೋಕ್ಲೋರೈಡ್‌ ಸೋಂಕು ನಿವಾರಕ ದ್ರಾವಣ  ಸಿಂಪಡಿಸಲಾಗಿದೆ. ಕೊಠಡಿಗಳ ಸುತ್ತಲು ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಕೋಡಿ ಹಳ್ಳಿ ಹೋಬಳಿಯಲ್ಲಿ ಸುಮಾರು 323 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದು, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಪರೀಕ್ಷೆ ಕೋಠಡಿಗೆ ಬರುವ  ಮುನ್ನ ಜ್ವರ ಪರೀಕ್ಷಿಸಿ, ಸ್ಯಾನಿಟೈಸರ್‌ ವಿತರಿಸಬೇಕು.

ಹೀಗಾಗಿ ಪಂಚಾಯಿತಿಯಿಂದ ಥರ್ಮಲ್‌ ಸ್ಕ್ಯಾನರ್‌ ಮತ್ತು ಸ್ಯಾನಿಟೈಸರ್‌ ಹಸ್ತಾಂತರಿಸಲಾಗಿದೆ. ಪರೀಕ್ಷೆ ಕೇಂದ್ರದ ಮೇಲ್ವಿಚಾರಕರು, ವಿದ್ಯಾರ್ಥಿಗಳು ಸಾಮಾಜಿಕ ಅಂತರ  ಕಾಯ್ದುಕೊಳ್ಳವಂತೆ ಎಚ್ಚರಿಕೆ ವಹಿಸಿ, ಮುಕ್ತವಾಗಿ ಪರೀಕ್ಷೆ ಎದುರಿಸಲು ಸಲಹೆ ಸೂಚನೆ ನೀಡಿಬೇಕು ಎಂದರು. ಕೋಳಗೊಂಡನಹಳ್ಳಿ ಶಾಲೆ ಮುಖ್ಯ ಶಿಕ್ಷಕ ಯೊಗೀಶ್‌, ಶಾರದಾ ಶಾಲೆ ಪ್ರಭಾಕರ್‌, ಸಹ ಶಿಕ್ಷಕ ಪ್ರಸನ್ನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next