Advertisement

Bengaluru ಸನಿಹ ಏರ್‌ಪೋರ್ಟ್‌: ತಮಿಳುನಾಡು ಹೊಸ ಕ್ಯಾತೆ

12:25 AM Jun 28, 2024 | Team Udayavani |

ಚೆನ್ನೈ: ಕಾವೇರಿ, ಮೇಕೆದಾಟು ವಿಚಾರವಾಗಿ ಕರ್ನಾಟಕದೊಂದಿಗೆ ಕಾದಾಟಕ್ಕಿಳಿದಿರುವ ತಮಿಳುನಾಡು ಇದೀಗ ವಿಮಾನ ನಿಲ್ದಾಣ ಸ್ಥಾಪಿಸುವ ಪ್ರಸ್ತಾವವಿಡುವ ಮೂಲಕ ಹೊಸ ಕ್ಯಾತೆಗೆ ಮುಂದಾಗಿದೆ. ಬೆಂಗಳೂರಿನಿಂದ ಕೇವಲ 40 ಕಿ.ಮೀ. ದೂರದಲ್ಲಿರುವ ಹೊಸೂರಿ ನಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸುವುದಾಗಿ ಗುರುವಾರ ಘೋಷಿಸಿದೆ.

Advertisement

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ 150 ಕಿ.ಮೀ. ವ್ಯಾಪ್ತಿಯ ಒಳಗೆ ಮತ್ತೂಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಬಾರದೆಂಬ ನಿಯಮವಿದ್ದರೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಈ ಘೋಷಣೆ ಮಾಡಿದ್ದಾರೆ. ಕೈಗಾರಿಕಾ ಗಡಿ ನಗರವಾಗಿರುವ ಹೊಸೂರಿನಲ್ಲಿ 2,000 ಎಕ್ರೆ ಭೂಮಿಯಲ್ಲಿ ವಾರ್ಷಿಕವಾಗಿ 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸುವುದಾಗಿ ಸ್ಟಾಲಿನ್‌ ಹೇಳಿದ್ದಾರೆ.

ಪ್ರಸ್ತಾವಿತ ವಿಮಾನ ನಿಲ್ದಾಣವು ಹೊಸೂರಿನ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ನೆರವಾಗುವುದು ಮಾತ್ರವಲ್ಲದೆ, ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ ಜಿಲ್ಲೆಗಳ ಕೈಗಾರಿಕ ಅಗತ್ಯಗಳ ಪೂರೈಕೆಗೆ ನೆರವಾಗಲಿದೆ ಎಂದೂ ತಿಳಿಸಿದ್ದಾರೆ.

ಹೊಸೂರಿನಲ್ಲಿ 500 ಬೃಹತ್‌ ಕೈಗಾರಿಕೆಗಳು, 3 ಸಾವಿರ ಎಂಎಸ್‌ಎಂಇಗಳು ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ‌ಂಥ ದೈತ್ಯ ಸಂಸ್ಥೆಗಳಿವೆ. ಇವುಗಳ ಸರಕು ಸಾಗಣೆಯ ಬೃಹತ್‌ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡು ತಮಿಳುನಾಡು ಸರಕಾರ ಈ ನಿರ್ಣಯ ತೆಗೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next