Advertisement

ವಿನೂತನ ಶೈಲಿಯ ಗಾನ ವೈಭವ

05:43 PM Nov 07, 2019 | Team Udayavani |

ಶ್ರೀ ಗುರು ವಿಜಯವಿಠಲ ಯಕ್ಷಕಲಾ ಕೇಂದ್ರವು ಒಂದು ವಸಂತವನ್ನು ಪೂರೈಸಿದ ಸಂಭ್ರಮದಲ್ಲಿ ವಿನೂತನ ಶೈಲಿಯ ಯಕ್ಷಗಾನ-ವೈಭವ ಮತ್ತು ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಯಕ್ಷಕಲಾ ಕೇಂದ್ರದ ಗುರುಗಳಾದ ದಯಾನಂದ ಕೋಡಿಕಲ್‌ ಅವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳ ಭಾಗವತಿಕೆಗೆ ಮದ್ದಳೆಯಲ್ಲಿ ಚೆಂಡೆ-ಮದ್ದಳೆ ಮಾಂತ್ರಿಕರಾದ ಕೃಷ್ಣರಾಜ್‌ ಭಟ್‌ ನಂದಳಿಕೆ ಅವರ ಗರಡಿಯಲ್ಲಿ ಪಳಗಿದ ವಿದ್ಯಾರ್ಥಿಗಳು ಸಾಥ್‌ ನೀಡಿದರು.

Advertisement

ಯಕ್ಷಗಾನ ವೇಷಧಾರಿ ಸಂದೇಶ್‌ ಬಡಗಬೆಳ್ಳೂರು, ಪ್ರಸಾದ್‌, ಹರೀಶ್‌ ಪೂರ್ವರಂಗ ಮತ್ತು ಪ್ರಸಂಗದ ಹಾಡುಗಳನ್ನು ಹಾಡಿ ಭಾಗವತಿಕೆಗೂ ಸೈ ಎನಿಸಿಕೊಂಡರು. ಬಜಪೆಯ ದಿಲೀಪ್‌ ಆಚಾರ್ಯ, ವಿಶ್ವನಾಥ್‌ ಇವರ ಭಾಗವತಿಕೆಗೆ ಕರತಾಡನ ಸಿಳ್ಳೆಗಳು ಕೇಳಿಬಂದವು. ಉಳಿದಂತೆ ಸಂತೋಷ್‌, ಪ್ರಣವ್‌, ಅಮೃತ್‌, ಪ್ರವೀಣ್‌ ಶೆಟ್ಟಿ, ಕೌಶಿಕ್‌ ಕತ್ತಲ್‌ಸಾರ್‌, ಸತೀಶ್‌ ಶೆಟ್ಟಿ, ಶುಭಕರ್‌, ಪವನ್‌ರಾಜ್‌, ಯತಿರಾಜ್‌, ಇಂದಿರಾ ನಾಗೇಶ್‌, ದೀûಾ, ನಿಶ್ಮಿತಾ, ಅಮೃತವರ್ಣ, ಅಮೃತವರ್ಷ ಮತ್ತು ಪವನ್‌ ಕಾವೂರು ಯಕ್ಷಗಾನ ವೈಭವಕ್ಕೆ ಹೊಸ ಕಳೆಯನ್ನು ತುಂಬಿದರು. ಇವರ ಭಾಗವತಿಕೆಗೆ ಮದ್ದಳೆಯಲ್ಲಿ ವಿದ್ಯಾರ್ಥಿಗಳಾದ ವಿನಯ್‌ ಆಚಾರ್ಯ, ವಿಜಯಪ್ರಸಾದ್‌, ಅಮೃತ್‌, ಕೌಶಿಕ್‌ ಕತ್ತಲ್‌ಸಾರ್‌, ಪ್ರಸಾದ್‌ ಸಾಥ್‌ ನೀಡಿದ್ದರು. ತಾಳ, ಶ್ರುತಿ, ರಾಗದಲ್ಲಿ ಲೋಪದೋಷಗಳು ಕಂಡುಬಂದಿದ್ದರೂ ಅವುಗಳನ್ನು ಸರಿಪಡಿಸಿಕೊಂಡು ಹೋಗುವಲ್ಲಿ ವಿದ್ಯಾರ್ಥಿಗಳು ಮಾಡಿದ ಪ್ರಯತ್ನ ಪ್ರಶಂಸನೀಯ. ತಾಳ, ಶ್ರುತಿ, ರಾಗದ ಲೋಪಗಳನ್ನು ಹೊಂದಿಸಿಕೊಂಡು ಭಾಗವತಿಕೆ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಸ್ವತಃ ಮದ್ದಳೆ ಗುರುಗಳೇ ಮದ್ದಳೆಯಲ್ಲಿ ಸಾಥ್‌ ನೀಡಿದ್ದರು. ಚೆಂಡೆಯಲ್ಲಿ ಅರಳು ಪ್ರತಿಭೆ ಅನಿರುದ್ಧ್ ಕೈಚಳಕ ಪ್ರದರ್ಶಿಸಿದ್ದರು.

ಇದಾದ ಬಳಿಕ ನಡೆದದ್ದು ನಾಟ್ಯ ಗುರುಗಳಾದ ರವಿಕುಮಾರ್‌ ಮುಂಡಾಜೆ ಅವರ ನಿರ್ದೇಶನದ ಶ್ರೀ ಸುದರ್ಶನೋಪಖ್ಯಾನ ಯಕ್ಷಗಾನ ಪ್ರದರ್ಶನ. ಇದೇ ಮೊದಲ ಬಾರಿಗೆ ಗೆಜ್ಜೆಕಟ್ಟಿ ರಂಗಸ್ಥಳವೇರುವ ಕಲಾವಿದರಿಂದ ಹಿಡಿದು ಈಗಾಗಲೇ ರಂಗವೇರಿದ ಕಲಾವಿದರು ಈ ನಾಟ್ಯಾಭ್ಯಾಸ ಮಾಡುತ್ತಿದ್ದು, ಅವರಿಂದ ಪ್ರದರ್ಶನಗೊಂಡ ಪ್ರಸಂಗವೇ ಶ್ರೀ ಸುದರ್ಶನೋಪಾಖ್ಯಾನ. ಪುಟಾಣಿಗಳು ಮತ್ತು ಹಿರಿಯ ಕಲಾವಿದರ ಕೂಡುವಿಕೆಯಿಂದ ಈ ಪ್ರದರ್ಶನ ಮೂಡಿಬಂತು.

ದೇವೇಂದ್ರನಾಗಿ ಲತಾ, ದೇವೇಂದ್ರ ಬಲಗಳಾಗಿ ಐಶ್ವರ್ಯಾ, ದೀಕ್ಷಾ ಬಿ., ದೀಪ್ತಿ, ಅರ್ಪಿತಾ, ಚಿತ್ರೇಶ್‌ ಮತ್ತು ಗಾಯತ್ರಿ, ಮೊದಲಾರ್ಧದ ಶತ್ರುಪ್ರಸೂಧನನಾಗಿ ಗೌತಮ್‌, ಉತ್ತರಾರ್ಧದಲ್ಲಿ ದುರ್ಗಾಪ್ರಸಾದ್‌, ಶತ್ರುಪ್ರಸೂಧನ ಬಲಗಳಾಗಿ ದಾಕ್ಷಾಯಿಣಿ, ವಿಜಯಾ, ನಿಶ್ಮಿತ ಮತ್ತು ಮನ್ವಿತ್‌, ಈಶ್ವರನಾಗಿ ಸಂದೇಶ್‌, ದೇವದೂತನಾಗಿ ಮಿಧುನ್‌, ವಿಷ್ಣುವಾಗಿ ಸೃಷ್ಟಿಕೃಷ್ಣ ಲಕ್ಷ್ಮೀಯಾಗಿ ದೀಪಿಕಾ, ಆರಂಭದ ಸುದರ್ಶನನಾಗಿ ಕೌಶಿಕ್‌ ಬಿ. ಮತ್ತು ಅನಂತರ ದೀಕ್ಷಾ ಕೆ., ರೇಣುಕೆಯಾಗಿ ಪ್ರತಿಭಾ ಶೆಟ್ಟಿ, ಜಮದಗ್ನಿಯಾಗಿ ಪ್ರದೀಪ್‌, ವಸುವಾಗಿ ಚರಣ್‌, ಸುಮನಾಗಿ ಕಿರಣ್‌, ಸುಮನನಾಗಿ ಸುದೀಪ್‌, ಬೃಹದಾºಣನಾಗಿ ಮಿಧುನ್‌, ಮೊದಲಾರ್ಧದ ಭಾರ್ಗವನಾಗಿ ಕೌಶಿಕ್‌ ಕೆ., ಉತ್ತರಾರ್ಧದ ಭಾರ್ಗವನಾಗಿ ಅಮೃತ್‌, ಕಾರ್ತವೀರ್ಯನಾಗಿ ಕಿಶೋರ್‌, ವನಪಾಲಕರಾಗಿ ಶುಭಕರ್‌, ಮಿಧುನ್‌, ಸುದೀಪ್‌, ಕಿರಣ್‌ ಮತ್ತು ಚಿತ್ರೇಶ್‌, ಕಾರ್ತವೀರ್ಯ ಬಲಗಳಾಗಿ ಲೋಲಾಕ್ಷಿ, ಅನುಪಮ, ಅನಿಲ್‌ ಮತ್ತು ಸಂದೀಪ್‌ ಮತ್ತು ಧೇನುವಾಗಿ ಮನ್ವಿತ್‌ ಪಾತ್ರಗಳಿಗೆ ಚ್ಯುತಿ ಬಾರದಂತೆ ಪ್ರದರ್ಶನ ನೀಡಿದ ಕಲಾವಿದರು.

ದಯಾನಂದ ಕೋಡಿಕಲ್‌ ಮತ್ತು ಸುಧಾಕರ್‌ ಸಾಲ್ಯಾನ್‌ ಗಾಯನಕ್ಕೆ ಶ್ರವಣ್‌ ಮದ್ದಳೆಯಲ್ಲಿ ಮತ್ತು ಕೃಷ್ಣರಾಜ್‌ ಭಟ್‌ ನಂದಳಿಕೆ ಮತ್ತು ಅನಿರುದ್ಧ್ ಚೆಂಡೆಯಲ್ಲಿ ಸಾಥ್‌ ನೀಡಿದ್ದರು.

Advertisement

ಇಂದಿರಾ ನಾಗೇಶ್‌ ಕೂಳೂರು

Advertisement

Udayavani is now on Telegram. Click here to join our channel and stay updated with the latest news.

Next