Advertisement

ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‍ಡಿಆರ್ ಎಫ್ ನೀತಿಯಿಂದ ಅನ್ಯಾಯ : ಅಶೋಕ

06:38 PM Aug 26, 2020 | sudhir |

ವಿಜಯಪುರ : ಕಳೆದ ವರ್ಷದ ಪ್ರವಾಹ ನಷ್ಟ ಪರಿಹಾರ ನೀಡುವಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿಲ್ಲ, ಮಲತಾಯಿ ಧೋರಣೆ ಅನುಸರಿಸಿಲ್ಲ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕೇಂದ್ರದಿಂದ ರಾಜ್ಯ ಸರ್ಕಾರ ನಿರೀಕ್ಷಿತ ಪರಿಹಾರ ಪಡೆಯುವಲ್ಲಿ ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರೂಪಿಸಿದ ಎನ್‍ಡಿಆರ್‍ಎಫ್ ನೀತಿಗಳಿಂದ ಅನ್ಯಾಯವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ದೂರಿದರು.

Advertisement

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ರಾಜ್ಯ ಸರ್ಕಾರ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ ಸಂದಭದಲ್ಲಿ ಸಂಭವಿಸಿದ ಬೆಳೆ ಹಾನಿ, ಆಸ್ತಿ ಹಾನಿ ಸೇರಿದಂತೆ ಇತರೆ ನಷ್ಟಕ್ಕೆ ಪರಿಹಾರ ಪಡೆಯುವಲ್ಲಿ ಮನಮೋಹನಿಂಗ್ ಸರ್ಕಾರ ರೂಪಿಸಿದ ನೀತಿಗಳು ತೊಡಕಾಗಿವೆ. ಕಳೆದ ವರ್ಷದ ಪ್ರವಾಹ ನಷ್ಟದ 35 ಸಾವಿರ ಕೋಟಿ ರೂ. ನೆರವಿನೆ ಪ್ರಸ್ತಾವನೆಯಲ್ಲಿ ಕೇವಲ 1 ಸಾವಿರ ರೂ. ಕೋಟಿ ರೂ. ಮಾತ್ರ ಬಂದಿದ್ದು, ಇದಕ್ಕೆ ಹಿಂದಿನ ಸರ್ಕಾರದ ನೀತಿಗಳೇ ಕಾರಣ. ನಮ್ಮ ಪಕ್ಷದ ಮೋದಿ ಸರ್ಕಾರ ಎನ್‍ಡಿಆರ್‍ಎಫ್‍ನ ಇಂಥ ಅವೈಜ್ಞಾನಿಕ ನೀತಿಗಳನ್ನು ಸರಳೀಕರಿಸಲು ಮುಂದಾಗಿದೆ ಎಂದರು.

ರಾಜ್ಯದಲ್ಲಿ ಸಂಭವಿಸಿದ ಪ್ರವಾಹ ಹಾಗೂ ಅತಿವೃಷ್ಠಿ ಹಾನಿಯ ಅಧ್ಯಯನಕ್ಕೆ ಕೇಂದ್ರ ತಂಡವನ್ನು ಕಳಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಅಧ್ಯಯನ ತಂಡ ಆಗಮಿಸಿದ ಸಂದರ್ಭದಲ್ಲಿ ಅಗತ್ಯ ಛಾಯಾಚಿತ್ರಗಳು, ವಿಡಿಯೋಗಳನ್ನು ಸಂಗ್ರಹಿಸಿಕೊಂಡು, ಸೂಕ್ತ ದಾಖಲೆ ನೀಡುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next