Advertisement

122 ಜನರನ್ನು ರಕ್ಷಿಸಿದ ಎನ್‌ಡಿಆರ್‌ಎಫ್‌ ತಂಡ

11:57 AM Aug 09, 2019 | Team Udayavani |

ಗೋಕಾಕ: ಘಟಪ್ರಭಾ ನದಿ ಅಷ್ಟೇ ಅಲ್ಲ, ನಗರದ ಹೊರ ವಲಯದಲ್ಲಿ ಹರಿಯುವ ಮಾರ್ಕಂಡೇಯ ನದಿಗೂ ಪ್ರವಾಹ ಬಂದಿದ್ದು ಪ್ರವಾಹದಿಂದಾಗಿ ತೋಟ (ನಡುಗಡ್ಡೆ)ಯಲ್ಲಿ ಸಿಲುಕಿದ ಯುವಕ ಗುರುವಾರದಂದು ಪ್ರವಾಹವನ್ನು ಈಜಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Advertisement

ಕಳೆದ 4-5 ದಿನಗಳಿಂದ ನಗರದ ಹೊರವಲಯದಲ್ಲಿರುವ ಯೋಗಿಕೊಳ್ಳ ರಸ್ತೆಯ ಘಟ್ಟಿ ಬಸವಣ್ಣ ದೇವಸ್ಥಾನ ಹತ್ತಿರವಿರುವ ಹೆಜ್ಜೆಗಾರ ಅವರ ತೋಟದ (ನಡುಗಡ್ಡೆ)ಯಲ್ಲಿ ಸಿಲುಕಿರುವ ಯುವಕ ಮಾಧವಾನಂದ (ನಂದು) ದೊಡಮನಿ (23) ಎಂಬ ಯುವಕನು ದನಗಳಿಗೆ ಮೇವುನ್ನು ಹಾಕಿ ಹೊರ ಬರುವಷ್ಟರಲ್ಲಿ ಪ್ರವಾಹದ ಸುಳಿಗೆ ಸಿಲುಕಿದ್ದನ್ನು. ಗುರುವಾರದಂದು ಆತನನ್ನು ಹೊರ ತರಲು ತಾಲೂಕಾಡಳಿತ ಹೆಲಿಕಾಪ್ಟರ್‌ಹಾಗೂ ಯಾಂತ್ರಿಕೃತ ಬೋಟ್ ಮೂಲಕ ಕರೆ ತರುವ ಏರ್ಪಾಟು ಮಾಡುವ ಮೊದಲೇ ಯುವಕನು ಪ್ರವಾಹದಲ್ಲಿ ಸುಮಾರು ಒಂದು ಕಿ.ಮೀ. ಈಜಿ ದಡ ಸೇರಿದ್ದಾನೆ. ಎನ್‌ಡಿಆರ್‌ಎಫ್‌ ತಂಡ ಹೆಲಿಕಾಪ್ಟರ್‌ ಹಾಗೂ ಯಾಂತ್ರೀಕೃತ ಬೋಟಗಳನ್ನು ಬಳಿಸಿ ಪ್ರವಾಹದಲ್ಲಿ ಸಿಲುಕಿದ್ದ ಹುಣಶ್ಯಾಳ ಪಿ.ವೈ.ದಲ್ಲಿ 60 ಜನರನ್ನು, ಅಂಕತಂಗೇರಹಾಳದಲ್ಲಿ 30ಜನರನ್ನು, ಸುಣಧೋಳಿಯಲ್ಲಿ ಇಬ್ಬರನ್ನು, ಉದಗಟ್ಟಿಯಲ್ಲಿ 16 ಜನರನ್ನು ರಕ್ಷಿಸಿದ್ದು ಅದರಲ್ಲಿಯ ಉದಗಟ್ಟಿ ಗ್ರಾಮದ 16 ಜನರನ್ನು ಹೆಲಿಕಾಪ್ಟರ್‌ ರಕ್ಷಿಸಲಾಗಿದೆ ಎಂದು ಎಸಿ ಶಿವಾನಂದ ಭಜಂತ್ರಿ ಪತ್ರಿಕೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next