Advertisement

ಟರ್ಕಿಯಲ್ಲಿ ಹತ್ತು ದಿನದ ಕಾರ್ಯಾಚರಣೆ ಬಳಿಕ ಭಾರತಕ್ಕೆ ವಾಪಾಸಾದ NDRF ತಂಡ

03:08 PM Feb 17, 2023 | Team Udayavani |

ನವದೆಹಲಿ: ಭೂಕಂಪದಿಂದ ನಲುಗಿಹೋಗಿದ್ದ ಟರ್ಕಿ ದೇಶಕ್ಕೇ ಭಾರತ ʻಆಪರೇಷನ್‌ ದೋಸ್ತ್‌ʼ ಹೆಸರಲ್ಲಿ ಸಹಾಯಹಸ್ತ ಚಾಚಿ, ತನ್ನ ಸೇನಾ ನೆರವನ್ನಲ್ಲದೇ , ಶ್ವಾನದಳವನ್ನೂ, ಆಹಾರ ಸಾಮಗ್ರಿಗಳನ್ನೂ,ವೈದ್ಯಕೀಯ ಸವಲತ್ತುಗಳನ್ನೂ ಟರ್ಕಿಗೆ ನೀಡಿ ಆಪತ್ಭಾಂಧನಂತೆ ಸಹಾಯ ಮಾಡಿದೆ.

Advertisement

ಇದೀಗ ತನ್ನ 10 ದಿನಗಳ ರಕ್ಷಣಾ ಕಾರ್ಯಾಚರಣೆಯ ಬಳಿಕ ಭಾರತದ 47 ಯೋಧರನ್ನೊಳಗೊಂಡ ಎನ್‌ಡಿಆರ್‌ಎಫ್‌ ತಂಡ ತನ್ನೊಂದಿಗೆ ಟರ್ಕಿಗೆ ತೆರಳಿದ್ದ ರ್‍ಯಾಂಬೋ ಮತ್ತು ಹನಿ ಎಂಬ ಎರಡು ಶ್ವಾನಗಳೊಂದಿಗೆ ಭಾರತಕ್ಕೆ ವಾಪಾಸಾಗಿದೆ. ರ್‍ಯಾಂಬೋ, ಹನಿ ಮಾತ್ರವಲ್ಲದೇ ಅದರೊಂದಿಗೆ ಜೂಲಿ ಮತ್ತು ರೋಮಿಯೋ ಎಂಬ ಇನ್ನೆರಡು ಶ್ವಾನಗಳೂ ಕೂಡಾ ಟರ್ಕಿಗೆ ತೆರಳಿತ್ತು.

ರಕ್ಷಣಾ ಕಾರ್ಯಾಚರಣೆಗಳಿಗೆ ವಿಶೇಷ ತರಬೇತಿ ಪಡೆದಿರುವ ಲಾಬ್ರೋಡಾರ್‌ ತಳಿಯ ನಾಲ್ಕು ಶ್ವಾನಗಳು ಎರಡು ಪ್ರತ್ಯೇಕ ಎನ್‌ಡಿಆರ್‌ಎಫ್‌ ತಂಡಗಳ ಜೊತೆಗೆ ಭೂಕಂಪದ ಮಾರನೇ ದಿನವೇ ಟರ್ಕಿಗೆ ತೆರಳಿತ್ತು.

ಭಾರತದ ರೋಮಿಯೋ ಮತ್ತು ಜೂಲಿ ಕಟ್ಟಡದ ಅವಶೇಷಗಳ ನಡುವೆ ಸಿಲುಕಿಕೊಂಡಿದ್ದ 6 ವರ್ಷದ ಬಾಲಕಿಯನ್ನು ರಕ್ಷಿಸಿದ್ದು ವಿಶ್ವದ ಗಮನ ಸೆಳೆದಿತ್ತು. ಯಂತ್ರಗಳಿಂದಲೂ ಬಾಲಕಿಯನ್ನು ಹುಡುಕಲು ಸಾಧ್ಯವಾಗದೇ ಇದ್ದಾಗ ಈ ಎರಡೂ ಶ್ವಾನಗಳು ಆಕೆ ಇರುವ ಜಾಗವನ್ನು ಹುಡುಕಿಕೊಟ್ಟಿತ್ತು.

Advertisement

ವಿಶ್ವಸಂಸ್ಥೆ ಕೂಡಾ ಟರ್ಕಿ ಮತ್ತು ಸಿರಿಯಾ ನೆರವಿಗೆ ಬಂದಿದ್ದು ಸಿರಿಯಾಗೆ 400 ಮಿಲಿಯನ್‌ ಡಾಲರ್‌ ಮತ್ತು ಟರ್ಕಿಗೆ 1 ಬಿಲಿಯನ್‌ ಡಾಲರ್‌ಗಳ ನೆರವನ್ನು ನೀಡಿದೆ.

ಇದನ್ನೂ ಓದಿ: ಬಜೆಟ್ 2023:ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ, ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ತಿರುಗೇಟು

Advertisement

Udayavani is now on Telegram. Click here to join our channel and stay updated with the latest news.

Next