Advertisement

ಬಾಲಕಿಯ ರಕ್ಷಣೆ ವಿಡಿಯೋ ಜಾಲತಾಣಗಳಲ್ಲಿ ವೈರಲ್‌

10:55 AM Aug 13, 2018 | Harsha Rao |

ಶುಕ್ರವಾರ ಇಡುಕ್ಕಿ ಡ್ಯಾಂನ 5ನೇ ಗೇಟು ತೆರೆಯುತ್ತಿದ್ದಂತೆ, ಇನ್ನೇನು ಚೆರುತ್ತೋನಿ ಸೇತುವೆ ಮುಳುಗಿಹೋಗಲಿದೆ ಎನ್ನುವಾಗ ಬಾಲಕಿಯೊಬ್ಬಳನ್ನು ಎನ್‌ಡಿಆರ್‌ಎಫ್ ಸಿಬ್ಬಂದಿ ರಕ್ಷಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನೀರು ಬಿಡುಗಡೆಯಾದ ಕಾರಣ, ರಭಸವಾಗಿ ಹರಿದುಬಂದ ನೀರಿನಿಂದಾಗಿ ಸೇತುವೆ ಜಲಾವೃತಗೊಂಡಿದೆ. ಸೇತುವೆ ಮುಳುಗಲು ಕೆಲವೇ ಸೆಕೆಂಡುಗಳು ಬಾಕಿ ಇರುವಾಗ ಬಿಹಾರ ಮೂಲದ ಸಿಬ್ಬಂದಿ ಕನ್ಹಯ್ಯ ಕುಮಾರ್‌, ಸೇತುವೆಯ ಇನ್ನೊಂದು ಬದಿಯಲ್ಲಿದ್ದ ಮಗುವನ್ನು ಎತ್ತಿಕೊಂಡು ಓಡಿ ಬಂದಿದ್ದರು. ಅವರ ಈ ಸಾಹಸ ಎಲ್ಲೆಡೆಯಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next