Advertisement

ಪಾಕ್‌ ಪರ ಮಾತನಾಡಿದ್ದಕ್ಕೆ ಕ್ರಮ: ಮಲೇಷ್ಯಾದ ಅಡುಗೆ ಎಣ್ಣೆ ಬೇಡ!

09:50 AM Oct 24, 2019 | Team Udayavani |

ಹೊಸದಿಲ್ಲಿ: ಕಾಶ್ಮೀರ ವಿಚಾರದಲ್ಲಿ ಪಾಕಿಸ್ಥಾನ ಪರವಾಗಿ ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮಲೇಷ್ಯಾಕ್ಕೆ ಈಗ ಭಾರತ ಚಾಟಿ ಬೀಸಲು ಮುಂದಾಗಿದೆ.

Advertisement

ಭಾರತದ ಉನ್ನತ ಅಡುಗೆ ತೈಲ ವ್ಯಾಪಾರ ಸಂಸ್ಥೆ ಸೋಮವಾರ ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆ ಖರೀದಿಯನ್ನು ನಿಲ್ಲಿಸುವಂತೆ ತನ್ನ ಸದಸ್ಯರಿಗೆ ಕರೆ ನೀಡಿದೆ.

ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರಸ್‌ ಅಸೋಸಿಯೇಶನ್‌ ಆಫ್ ಇಂಡಿಯಾ (ಎಸ್‌ಇಎಐ) ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಮಾತನಾಡಿದ್ದರಿಂದ ಯಾವ ರೀತಿಯ ಪರಿಣಾಮವಾಗುತ್ತದೆ ಎಂದು ಮಲೇಷ್ಯಾಕ್ಕೆ ತಿಳಿಸಲು ಈ ನಿರ್ಧಾರ ಕೈಗೊಂಡಿದೆ.

ಮಲೇಷ್ಯಾ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರವಾಗಿದ್ದು, ಭಾರತ ಅತಿ ದೊಡ್ಡ ಆಮದುದಾರ ರಾಷ್ಟ್ರವಾಗಿದೆ. ಭಾರತದ ವ್ಯಾಪಾರಿ ಒಕ್ಕೂಟದ ಈ ಕರೆಯಿಂದ ಅದರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಊಹಿಸಲಾಗಿದೆ. ಭಾರತ ಮಲೇಷ್ಯಾದಿಂದ ಕಳೆದ ವರ್ಷ ಒಟ್ಟು 6.84 ಬಿಲಿಯನ್‌ ರಷ್ಟು ಮೌಲ್ಯದ ಅಡುಗೆ ಎಣ್ಣೆ ಮತ್ತು ತಾಳೆ ಆಧಾರಿತ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದು, ಮಲೇಷ್ಯಾದ ಒಟ್ಟು ದೇಶೀಯ ಉತ್ಪನ್ನದ 2.8% ಮತ್ತು ಒಟ್ಟು ರಫ್ತಿಗೆ 4.5% ಕೊಡುಗೆ ನೀಡಿತ್ತು.

ಶೇ.74 ಆಮದು
ವಿಶ್ವ ಇತರೆ ದೇಶಗಳಿಂದ ಭಾರತ ಶೇ.74 ರಷ್ಟು ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

Advertisement

ಶೇ.41.50
ಇಂಡೊನೇಶಿಯಾದಿಂದ ಭಾರತಕ್ಕೆ ರಫ್ತಾಗುತ್ತಿರುವ ಅಡುಗೆ ಎಣ್ಣೆಯ ಪ್ರಮಾಣ.

ಶೇ.20.50
ಭಾರತ ಮಲೇಶಿಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆಯ ದತ್ತಾಂಶ.

ಶೇ.2.90
ಥ್ಯಾಲ್ಲೆಂಡ್‌ ದೇಶದಿಂದ ಭಾರತಕ್ಕೆ ರಫ್ತು ಆಗುತ್ತಿರು ಅಡುಗೆ ಎಣ್ಣೆ ಪ್ರಮಾಣ.

1.63.ಶೇ
ಭಾರತ ಕೊಲಾಂಬಿಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಅಡುಗೆ ಎಣ್ಣೆಯ ಪ್ರಮಾಣ

1.02.ಶೇ
ನೈಜೇರಿಯಾದಿಂದ ಭಾರತಕ್ಕೆ ರಫ್ತು ಆಗುತ್ತಿರುವ ಅಡುಗೆ ಎಣ್ಣೆಯ ದತ್ತಾಂಶ.

ಭಾರತದಲ್ಲಿ ಎಲ್ಲೆಲ್ಲಿ ಉತ್ಪಾದನೆ
14740 ಮೆಟ್ರಿಕ್‌ ಟನ್‌ ಕರ್ನಾಟಕ ರಾಜ್ಯದಲ್ಲಿ ಉತ್ಪನ್ನವಾಗುವ ಅಡುಗೆ ಎಣ್ಣೆಯ ಪ್ರಮಾಣ.

ಆಂಧ್ರ ಪ್ರದೇಶ
ಭಾರತದಲ್ಲಿ ಅತೀ ಹೆಚ್ಚು ಅಡುಗೆ ಎಣ್ಣೆಯನ್ನು ಉತ್ಪಾದಿಸುವ ರಾಜ್ಯವಾಗಿದ್ದು, ಕಳೆದ ವರ್ಷ ಇಲ್ಲಿ 1144092 ಮೆಟ್ರಿಕ್‌ ಟನ್‌ ಅಷ್ಟು ಅಡುಗೆ ಎಣ್ಣೆಯನ್ನು ಉತ್ಪಾದಿಸಲಾಗಿದೆ.

ತೆಲಂಗಾಣ
ಇಲ್ಲಿ ಒಟ್ಟು 63508 ಮೆಟ್ರಿಕ್‌ ಟನ್‌ ರಷ್ಟು ಅಡುಗೆ ಎಣ್ಣೆಯನ್ನು ತಯಾರಿಸಲಾಗಿದೆ.

ಕೇರಳ
ಇಲ್ಲಿ ಒಟ್ಟು 40611 ಮೆಟ್ರಿಕ್‌ ಟನ್‌ ರಷ್ಟು ಅಡುಗೆ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ.

ತಮಿಳು ನಾಡು

7810 ಮೆಟ್ರಿಕ್‌ ಟನ್‌ ರಷ್ಟು ಅಡುಗೆ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

ಗುಜರಾತ್‌
523 ಮೆಟ್ರಿಕ್‌ ಟನ್‌ ರಷ್ಟು ಅಡುಗೆ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

ಗೋವಾ
3217 ಮೆಟ್ರಿಕ್‌ ಟನ್‌ ರಷ್ಟು ಅಡುಗೆ ಎಣ್ಣೆಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next