ಇಟಲಿಯಿಂದ ಬಂದ ವಿದ್ಯಾರ್ಥಿಗಳು ಸೇರಿದಂತೆ ಇತರ ವ್ಯಕ್ತಿಗಳನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಲಾಗಿದ್ದು, ಇವರನ್ನು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಪರೀಕ್ಷಿಸಲಾಗುತ್ತದೆ.
Advertisement
ಸುರಕ್ಷಿತವಾಗಿ ಭಾರತಿಯರನ್ನು ಕರೆತರಲು ಕಾರಣಕರ್ತರಾದ ಇರಾನ್ ಅಧಿಕಾರಿಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಧನ್ಯವಾದ ಅರ್ಪಿಸಿದ್ದಾರೆ.ಕೊರೊನಾ ವೈರಸ್ ಮಹಾಮಾರಿಯಿಂದ ಈಗಾಗಲೇ ಇರಾನ್ ನಲ್ಲಿ 611 ಜನರು ಮೃತಪಟ್ಟಿದ್ದು, 12 ಸಾವಿರಕ್ಕೂ ಹೆಚ್ಚು ಜನರಿಗಗೆ ಸೋಂಕು ತಗುಲಿದೆ. ಶನಿವಾರ ಒಂದೇ ದಿನ ಈ ವೈರಸ್ ಗೆ 97 ಜನರು ಬಲಿಯಾಗಿದ್ದರು.