Advertisement

NDA ‘ನರೇಂದ್ರ ಡಿಸ್ಟ್ರಕ್ಟಿವ್‌ ಅಲಯನ್ಸ್‌’ ಅಧಿಕಾರ ಸ್ವೀಕಾರ: ಕಾಂಗ್ರೆಸ್‌ ಟೀಕೆ

02:02 AM Jun 10, 2024 | Team Udayavani |

ಹೊಸದಿಲ್ಲಿ: ನರೇಂದ್ರ ಮೋದಿ ಅವರು “ನರೇಂದ್ರ ಡಿಸ್ಟ್ರಕ್ಟಿವ್‌ ಅಲಯನ್ಸ್‌’ (ಎನ್‌ಡಿಎ)ನ ನಾಯಕ
ರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

Advertisement

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌, 2023ರ ಮೇ 28 ನೆನಪಿದೆಯೇ? ಸೆಂಗೋಲ್‌ನೊಂದಿಗೆ ಹೊಸ ಸಂಸತ್ತಿನ ಕಟ್ಟಡಕ್ಕೆ ಕಾಲಿಟ್ಟ ದಿನ, ಇದಕ್ಕಾಗಿ 1947ರ ಆಗಸ್ಟ್‌ 15ರ ಇತಿಹಾಸವನ್ನು ಬನಾವಟು ಮಾಡಿ, ಮೋದಿಯ ಸಾಮ್ರಾಟನ ಸೋಗುಗಳನ್ನು ಸಮರ್ಥಿಸುವುದು ಮಾತ್ರವಲ್ಲದೇ, ತಮಿಳು ಮತದಾ ರರನ್ನು ಆಕ ರ್ಷಿಸುವ ಯತ್ನ ಮಾಡಲಾಯಿತು. ಅದೇ ದಿನ ನಾನು ಮೋದಿಯ ನಕಲಿತನವನ್ನು ಬಹಿರಂಗ ಮಾಡಿದ್ದೆ ಎಂದು ಹೇಳಿದ್ದಾರೆ. ಸೆಂಗೋಲ್‌ ತಮಿಳು ಇತಿಹಾಸದ ಹೆಮ್ಮೆಯ ಸಂಕೇತವಾಗಿ ಉಳಿಯಲಿದೆ. ಆದರೆ, ತಮಿಳು ಮತದಾರರು ಮಾತ್ರವಲ್ಲದೇ ಭಾರತೀಯ ಮತದಾರರು ಮೋದಿ ಆಡಂಬರವನ್ನು ತಿರಸ್ಕರಿಸಿದ್ದಾರೆಂದು ಜೈರಾಂ ರಮೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next