Advertisement
ಎನ್ ಡಿಎ ಮುಖ್ಯಮಂತ್ರಿ ಅಭ್ಯರ್ಥಿ ನಿತೀಶ್ ಕುಮಾರ್ ಅವರು 2005ರಿಂದ ಚುನಾವಣೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿರುವುದನ್ನು ರಿಪೋರ್ಟ್ ಕಾರ್ಡ್ ನಲ್ಲಿ ಉಲ್ಲೇಖಿಸಿದೆ. ನಿತೀಶ್ ಕುಮಾರ್ ಅವರು 2015ರಲ್ಲಿ “ಏಳು ಅಂಶಗಳ ಅಜೆಂಡಾ” ಹೆಸರಿನ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದರು.
Related Articles
Advertisement
1)ನಿತೀಶ್ ಕುಮಾರ್ ಸರ್ಕಾರದ ಮೊದಲ ಆಜೆಂಡಾ ಇಡೀ ಬಿಹಾರದ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳನ್ನು ನಿರ್ಮಿಸುವುದು. ಇದಕ್ಕೆ ಬಜೆಟ್ ನಲ್ಲಿ ಮೀಸಲಾಗಿಟ್ಟ ಹಣ 78,000 ಕೋಟಿ ರೂಪಾಯಿ.
ರಿಪೋರ್ಟ್ ಕಾರ್ಡ್ ನಲ್ಲಿ, ಎನ್ ಡಿಎ ತಿಳಿಸಿರುವಂತೆ ಕಳೆದ ಐದು ವರ್ಷಗಳಲ್ಲಿ ಬಿಹಾರದ ಎಲ್ಲಾ ಹಳ್ಳಿಗಳನ್ನು ಸಂಪರ್ಕಿಸಲು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ.
ಏತನ್ಮಧ್ಯೆ ಇತ್ತೀಚೆಗೆ ನಿತೀಶ್ ಕುಮಾರ್ ಅವರು ಖುದ್ದಾಗಿ ರಾಜ್ಯದ ಎಲ್ಲಾ ಹಳ್ಳಿಗಳನ್ನು ಸಂಪರ್ಕಿಸಲು ಕಾಂಕ್ರೀಟ್ ರಸ್ತೆ ಮಾಡಬೇಕಾಗಿದೆ ಎಂದು ಒಪ್ಪಿಕೊಂಡಿದ್ದರು. ಒಂದು ವೇಳೆ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲಾ ಹಳ್ಳಿಗಳನ್ನು ಸಂಪರ್ಕಿಸಲು ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ:ತಾಯಿಯ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡದ ತಂದೆ: ರಾತ್ರಿಯಿಡಿ ಮನೆಯ ಮುಂದೆ ಶವವಿಟ್ಟು ಕಾದ ಮಗ
2)ಎರಡನೇ ಅಜೆಂಡಾ ಪ್ರತಿಯೊಂದು ಮನೆಗೂ ನಿರಂತರ ವಿದ್ಯುತ್ ಸಂಪರ್ಕ. ಇದಕ್ಕಾಗಿ 55,600 ಕೋಟಿ ರೂಪಾಯಿ ಹಣ ಮೀಸಲಿರಿಸಲಾಗಿತ್ತು.
ಎನ್ ಡಿಎ ರಿಪೋರ್ಟ್ ಕಾರ್ಡ್ ನಲ್ಲಿ, ಬಿಹಾರದ ಪ್ರತಿಯೊಂದು ಮನೆಗೂ ನಿರಂತರ ವಿದ್ಯುತ್ ನೀಡುವ ಯೋಜನೆ ಪೂರ್ಣಗೊಳ್ಳುವ ಸನಿಹದಲ್ಲಿದೆ.
ಬಿಹಾರದಲ್ಲಿ ವಿದ್ಯುತ್ ಕಡಿತ ಸಮಸ್ಯೆ ತೀವ್ರವಾಗಿತ್ತು. ಈಗ 22ರಿಂದ 24ಗಂಟೆಗಳ ಕಾಲ ವಿದ್ಯುತ್ ಸರಬರಾಜಾಗುತ್ತಿದೆ. ಎಲ್ಲಾ 39,073 ಹಳ್ಳಿಗಳು ಪೂರ್ಣಪ್ರಮಾಣದಲ್ಲಿ ವಿದ್ಯುತ್ ಸಂಪರ್ಕ ಪಡೆದಿರುವುದಾಗಿ 2018ರಲ್ಲಿ ಘೋಷಿಸಲಾಗಿತ್ತು.
3) ಮೂರನೇ ಅಜೆಂಡಾ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಒತ್ತು. ಇದಕ್ಕಾಗಿ ಬಜೆಟ್ ನಲ್ಲಿ 47, 700 ಕೋಟಿ ಮೀಸಲಿರಿಸಲಾಗಿತ್ತು.
ಎನ್ ಡಿಎ ರಿಪೋರ್ಟ್ ಕಾರ್ಡ್ ನಲ್ಲಿ, ಬಿಹಾರದ 1.62 ಕೋಟಿ ಕುಟುಂಬದ ಸದಸ್ಯರು “ಹರ್ ಘರ್, ನಲ್ ಕಾ ಜಲ್” ಯೋಜನೆಯಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪಡೆದಿದ್ದಾರೆ.
ಇಷ್ಟಾದರೂ ಬಿಹಾರದ ಅನೇಕ ಪ್ರದೇಶಗಳಲ್ಲಿ ಈಗಲೂ ಶುದ್ಧ ಕುಡಿಯುವ ನೀರು ಲಭ್ಯವಿಲ್ಲ. ಸಾರ್ವಜನಿಕ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ಬಿಹಾರದ 896 ಪಂಚಾಯತ್ ವ್ಯಾಪ್ತಿಯ 5,635 ವಾರ್ಡ್ ಗಳಲ್ಲಿನ ಅಂತರ್ಜಲ ನಂಜಿನ ಅಂಶ ಮತ್ತು ಫ್ಲೋರೈಡ್ ನಿಂದ ಕೂಡಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದು ತಿಳಿಸಿದೆ.
4) ನಾಲ್ಕನೇ ಅಜೆಂಡಾ ಪ್ರತಿಯೊಂದು ಮನೆಗೂ ಶೌಚಾಲಯ. ಈ ಯೋಜನೆಗಾಗಿ 28, 700 ಕೋಟಿ ರೂಪಾಯಿಯಷ್ಟು ಹಣ ಬಜೆಟ್ ನಲ್ಲಿ ತೆಗೆದಿರಿಸಲಾಗಿತ್ತು.
ಈ ಬಗ್ಗೆ ಎನ್ ಡಿಎ ರಿಪೋರ್ಟ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ನೀಡಿಲ್ಲ.
ನಿತೀಶ್ ಕುಮಾರ್ ಅವರು ತಿಳಿಸಿರುವ ಪ್ರಕಾರ, ಬಿಹಾರದ ಪ್ರತಿಯೊಂದು ಕುಟುಂಬಕ್ಕೂ ಶೌಚಾಲಯ ಕಟ್ಟಿಸಿಕೊಳ್ಳಲು 12,000 ರೂಪಾಯಿ ನೀಡಲಾಗಿತ್ತು. ಕಳೆದ ವರ್ಷದವರೆಗೂ ಒಂದು ಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಗಳು ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ನೀಡಿದ್ದ ಭರವಸೆ ನೀಡಿದ ಮರುಪಾವತಿಗಾಗಿ ಕಾಯುತ್ತಿದ್ದರು. ಇದರಲ್ಲಿ ಜೆಹಾನಾಬಾದ್, ಅರ್ವಾಕ್ ಮತ್ತು ಔರಂಗಬಾದ್ ಜಿಲ್ಲೆಯ ಜನರು ಹೆಚ್ಚಿನ ಪ್ರಮಾಣದಲ್ಲಿದ್ದರು.
ಐದನೇ ಅಜೆಂಡಾದಲ್ಲಿ ರಾಜ್ಯದ ಯುವಕರಿಗೆ ಉದ್ಯೋಗ ಮತ್ತು ಕೌಶಲಾಭಿವೃದ್ಧಿ. ಈ ಯೋಜನೆಗೆ ಬಜೆಟ್ ನಲ್ಲಿ 49,800 ಕೋಟಿ ಮೀಸಲಿರಿಸಲಾಗಿತ್ತು.
2020 ಚುನಾವಣೆಯ ರಿಪೋರ್ಟ್ ಕಾರ್ಡ್ ನಲ್ಲಿ, ಎನ್ ಡಿಎ ಹೇಳಿರುವಂತೆ ಸ್ವಾತಂತ್ರ್ಯ ನಂತರ 58 ವರ್ಷಗಳಲ್ಲಿ ರಾಜ್ಯದಲ್ಲಿ ಇದ್ದದ್ದು ಕೇವಲ ಒಂದು ಇಂಜಿನಿಯರಿಂಗ್ ಕಾಲೇಜು. ಈಗ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಎಲ್ಲಾ 38 ಜಿಲ್ಲೆಗಳಲ್ಲಿಯೂ ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಿವೆ ಎಂದು ತಿಳಿಸಿದೆ.
ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಉದ್ಯೋಗ ಪೋರ್ಟಲ್ ಅನ್ನು ಆರಂಭಿಸಿದ್ದು, ಇದರಲ್ಲಿ 15 ಲಕ್ಷಕ್ಕೂ ಅಧಿಕ ನಿರುದ್ಯೋಗಿ ಯುವಕರು ಹೆಸರು ನೋಂದಾಯಿಸಿಕೊಂಡಿದ್ದು, ಇದು ರಾಜ್ಯ ಚುನಾವಣೆಯ ಪ್ರಮುಖ ಚರ್ಚಾ ವಿಷಯವಾಗಲಿದೆ.