Advertisement
ಕಾಸರಗೋಡು ಪ್ರಸ್‌ಕ್ಲಬ್‌ನಲ್ಲಿ ಜರಗಿದ ಅಭ್ಯರ್ಥಿಯೊಂದಿಗೆ ಮುಖಾಮುಖೀ ಕಾರ್ಯಕ್ರಮದಲ್ಲಿ ಮಾತನಾಡಿದ ತಂತ್ರಿ ಯವರು ಕೇರಳದಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಕಾಸರಗೋಡಿನಲ್ಲಿ ಎಡರಂಗ ಮತ್ತು ಎನ್.ಡಿ.ಎ. ಮಧ್ಯೆ ನೇರ ಸ್ಪರ್ಧೆಯಾಗಿದೆ. ಐಕ್ಯರಂಗದ ಕನ್ನಡಿಗ ಅಭ್ಯರ್ಥಿಯೋರ್ವರನ್ನು ಕೊನೆಯ ಹಂತದಲ್ಲಿ ಬದಲಾಯಿಸಿ ಅನ್ಯಾಯವೆಸಗಿದ ಕಾರಣ ಆ ಪಕ್ಷದಲ್ಲಿ ಭಿನ್ನಮತದಿಂದ ಐಕ್ಯರಂಗಕ್ಕೆ ಹಿನ್ನಡೆಯಾಗಲಿದೆ. ಇದು ಎನ್.ಡಿ.ಎ.ಗೆ ಲಾಭವಾಗಲಿದೆ ಎಂದರು.
ಪುಲ್ವಾಮಾದಲ್ಲಿ ಸೇನಾನಿಗಳ ಹತ್ಯೆ ವಿರುದ್ಧ ನಡೆದ ಸರ್ಜಿಕಲ್ ಕಾರ್ಯಾಚರಣೆಯಿಂದ ಮೋದಿ ನೇತೃತ್ವದಲ್ಲಿ ಭಾರತ ಸದೃಢವೆಂಬ ವಿಶ್ವಾಸ ಜನರಲ್ಲಿ ಮೂಡಿದೆ. ವಿಪಕ್ಷಗಳ ಯಾವುದೇ ಅಪಪ್ರಚಾರಕ್ಕೆ ಮತದಾರರು ಮಣಿಯರು. ಕಾಸರಗೋಡು ಹಾಲಿ ಲೋಕಸಭಾ ಸದಸ್ಯರು ಇತ್ತೀಚೆಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತನ್ನ 15 ವರ್ಷಗಳ ಅಧಿಕಾರಾವಧಿಯಲ್ಲಿ ಕಳೆದ 5 ವರ್ಷಗಳಲ್ಲಿ ಅಭಿವೃದ್ದಿಗೆ ಕೇಂದ್ರ ಸರಕಾರ ತನಗೆ ಹೇರಳ ನಿಧಿ ನೀಡಿರುವುದಾಗಿ ಹೇಳಿರುವುದು ಕೇಂದ್ರ ಸರಕಾರ ಅಭಿವೃದ್ಧಿಯಲ್ಲಿ ರಾಜಕೀಯ ತೋರಿಸಿಲ್ಲವೆಂಬುದನ್ನು ಎತ್ತಿ ತೋರಿಸುವುದಾಗಿ ಹೇಳಿದರು. ಬದಲಾವಣೆ ಬಯಸುತ್ತಿರುವ ಜನತೆ
ಮಂಜೇಶ್ವರದಿಂದ ಕಲ್ಯಾಶೆÏàರಿ ತನಕದ ತನ್ನ ಪರ್ಯಟನೆಯಲ್ಲಿ ಮತದಾರ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನ ಬದಲಾವಣೆಗೆ ಬಯಸಿದ್ದಾರೆ. ಸರಕಾರ ಶಬರಿಮಲೆ ಆಚಾರ ಸಂರಕ್ಷಣೆಗೆ ಅಪಚಾರ ವೆಸಗಿದ ಕಾರಣ ನಾಸ್ತಿಕವಾದಿಗಳೂ ಆಸ್ತಿಕರಾಗಿ ಬಿಜೆಪಿಯತ್ತ ವಾಲಿದ್ದಾರೆ. ಮೊನ್ನೆ ತಿರುವಲ್ಲ ರೈಲು ನಿಲ್ದಾಣದಲ್ಲಿ ಪತ್ತನಂತಿಟ್ಟ ಎನ್.ಡಿ.ಎ. ಅಭ್ಯರ್ಥಿ ಕೆ. ಸುರೇಂದ್ರನ್ ಅವರಿಗೆ ಜನತೆ ನೀಡಿದ ಭವ್ಯ ಸ್ವಾಗತವೇ ಇದಕ್ಕೆ ನಿದರ್ಶನ ಎಂದರು ತಂತ್ರಿ.
Related Articles
ಪತ್ರಕರ್ತರೋರ್ವರ ಮೇಲಿನ ಪ್ರಶ್ನೆಗೆ ದೇವರು ದಯಪಾಲಿಸಿದರೆ ಮತ್ತು ಮತದಾರರು ಆಶೀರ್ವದಿಸಿ ಗೆಲ್ಲಿಸಿದರೆ ಪಕ್ಷ ನೀಡುವ ಯಾವುದೇ ಜವಾಬ್ದಾರಿ ಯನ್ನು ಸಮರ್ಥವಾಗಿ ನಿರ್ವಹಿಸುವೆ. ತಾನು ಗೆದ್ದಲ್ಲಿ ಕಾಣಿಯೂರು-ಕಾಞಂ ಗಾಡು ರೈಲು ಹಳಿ ಸಂಪರ್ಕ, ಕಾಸರಗೋಡಿನ ಎಂಡೋ ಸಂತ್ರಸ್ತರ ಸಮಸ್ಯೆಗೆ ಪರಿಹಾರಕ್ಕೆ ಆದ್ಯತೆ ನೀಡುವೆ. ಕಾಸರಗೋಡು ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ, ಕೃಷಿಕರ, ಭಾಷಾ ಅಲ್ಪಸಂಖ್ಯಾಕರ ಮತ್ತು ಇನ್ನಿತರ ಸಮಸ್ಯೆಗೆ ಪರಿಹಾರದೊಂದಿಗೆ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಸಾಧಿಸುವುದಾಗಿ ರವೀಶ ತಂತ್ರಿ ಹೇಳಿದರು.
Advertisement