ಮುಂಬೈ: ಮುಂಬೈನ ದಿಢೀರ್ ರಾಜಕೀಯ ಬೆಳವಣಿಗೆಗಳ ನಂತರ ಎನ್ ಸಿಪಿ ನಾಯಕ ಶರದ್ ಪವಾರ್ ಮತ್ತು ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶರದ್ ಪವಾರ್, ಬಿಜೆಪಿ ಸೇರಿರುವ ಅಜಿತ್ ಪವಾರ್ ನಿರ್ಧಾರಕ್ಕೆ ನಮ್ಮ ಬೆಂಬಲವಿಲ್ಲ. ಪಕ್ಷದ ವಿರುದ್ದ ಅಜಿತ್ ಪವಾರ್ ನಿರ್ಧಾರ ಕೈಗೊಂಡಿದ್ಧಾರೆ. ಇದರಿಂದ ಕಾರ್ಯಕರ್ತರಿಗೆ ನೋವಾಗಿದೆ ಎಂದರು.
ಅಜಿತ್ ಪವಾರ್ ಜೊತೆ ಎಷ್ಟು ಶಾಸಕರಿದ್ದಾರೆ ಎಂದು ನಮಗೆ ಮಾಹಿತಿಯಿಲ್ಲ. 10ರಿಂದ 12 ಶಾಸಕರಿರಬಹುದು. ಅಜಿತ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಶಿವಸೇನೆ, ಕಾಂಗ್ರೆಸ್, ಎನ್ ಸಿಪಿ ಮೈತ್ರಿ ಮಾಡಿಕೊಂಡಿದ್ದೆವು. ಸರ್ಕಾರ ರಚನೆಗೆ ಬೇಕಾದ ಬಹುಮತ ನಮ್ಮಲ್ಲಿ ಇತ್ತು. ಆದರೆ ಬಿಜೆಪಿ ಜೊತೆ ಹೋಗಿರುವುದು ಅಜಿತ್ ಪವಾರ್ ಅವರ ವೈಯಕ್ತಿಕ ನಿರ್ಧಾರ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶರದ್ ಪವಾರ್ ಅವರ ಬೆಂಬಲಿತ ಶಾಸಕರು ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡರು.
ಇಂದು ಬೆಳಿಗ್ಗೆ ಅಜಿತ್ ಪವಾರ್ ಅವರ ಜೊತೆ ಕಾಣಿಸಿಕೊಂಡಿದ್ದ ಕೆಲ ಎನ್ ಸಿಪಿ ಶಾಸಕರು ಈಗ ಶರದ್ ಪವಾರ್ ಅವರ ಜೊತೆ ಕಾಣಿಸಿಕೊಂಡಿದ್ಧಾರೆ ಎಂದು ವರದಿಯಾಗಿದೆ.