ಪುಣೆ: ಪುಣೆ ನಗರದ ಈ ಬಾರ್ಣೇ ಪರಿಸರದಲ್ಲಿ ಇಷ್ಟೊಂದು ಸುಂದರ ವಾದ ಸುಸಜ್ಜಿತವಾದ ಸರ್ವ ಸೌಕರ್ಯ ಗಳನ್ನೊಳಗೊಂಡ ಬಂಟ ಸಮಾಜದ ಭವನವು ನಿರ್ಮಾಣಗೊಂಡಿರುವುದರಿಂದ ಪುಣೆ ನಗರದ ಮೌಲ್ಯವನ್ನು ಹೆಚ್ಚಿಸಿದೆ. ಸಾಂಸ್ಕೃತಿಕ ಕೇಂದ್ರ ಗಳು ನಗರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇಂತಹ ಉತ್ತಮ ಕಾರ್ಯ ಮಾಡಿದ ಬಂಟ ಸಮಾಜದ ಯುವ ನಾಯಕತ್ವವನ್ನು ಅಭಿನಂದಿಸಬೇಕಾಗಿದೆ. ಬಂಟಸಮುದಾಯದೊಂದಿಗೆ ಬಹಳಷ್ಟು ವರ್ಷಗಳಿಂದ ಅನ್ಯೋನ್ಯವಾದ ನಂಟನ್ನು ಹೊಂದಿದ್ದೇನೆ. ಪುಣೆಯ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಗಣನೀಯ ಸಾಧನೆಯನ್ನು ಮಾಡಿದ ಜಗನ್ನಾಥ ಶೆಟ್ಟಿಯವರೂ ನನ್ನ ಮಿತ್ರರಾಗಿ¨ªಾರೆ. ಮುಂಬಯಿ -ಪುಣೆಯಲ್ಲಿ ಇಂತಹ ಹಲವಾರು ಬಂಟ ಸಮುದಾಯದ ಮಿತ್ರರೊಂದಿಗೆ ನನ್ನ ಒಡನಾಟವಿದೆ. ಬಂಟರು ಶ್ರಮಜೀವಿಗಳಾಗಿ¨ªಾರೆ. ಹೊಟೇಲ್ ಉದ್ಯಮ ಕ್ಷೇತ್ರವಿರಲಿ, ಸಾಮಾಜಿಕ ಕ್ಷೇತ್ರವಿರಲಿ ಬಂಟರ ಸಾಧನೆ ಗುರುತರವಾದುದು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕ ಮಾಜಿ ಕೇಂದ್ರೀಯ ಮಂತ್ರಿ ಶರದ್ ಪವಾರ್ ನುಡಿದರು.
ಅವರು ಜು. 7ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನ ಪುಣೆ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಪುಣೆ ಬಂಟರ ಸಂಘದ ಸಮ್ಮಾನವನ್ನು ಸ್ವೀಕರಿಸಿ ಮಾತಾನಾಡಿ, ಪುಣೆಯ ಈ ಬಂಟರ ಸಂಘ ಉತ್ತಮ ಸಮಾಜ ಸೇವೆಯ ಮೂಲಕ ಜನಮನವನ್ನು ತಲುಪಲಿ. ಸಂಘದ ಈ ಭವನ ಉತ್ತಮ ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಲ್ಪಡಲಿ ಎಂದರು.
ಮೊದಲಿಗೆ ಶರದ್ ಪವಾರ್ ಅವರು ಭವನದ ಆವರಣದಲ್ಲಿರುವ ಶಿವಾಜಿ ಮಹಾರಾಜರ ಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಶರದ್ ಪವಾರ್ ಅವರನ್ನು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಪುಣೇರಿ ಪೇಟ ಹಾಗೂ ಸ್ಮರಣಿಕೆ ನೀಡಿ ಸಮ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸದೆ ಸುಪ್ರಿಯಾ ಸುಳೆ, ಸ್ಥಳೀಯ ನಗರಸೇವಕರಾದ ಬಾಬು ರಾವ್ ಚೆಂಡೇರೆ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು, ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಜತೆ ಕೋಶಾಧಿಕಾರಿ ಶ್ರೀನಿವಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಸುಚಿತ್ರಾ ಎಸ್. ಶೆಟ್ಟಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು