Advertisement

ಪಠ್ಯಕ್ರಮ ಬದಲಿಸಲಿರುವ ಎನ್‌ಸಿಇಆರ್‌ಟಿ

12:41 AM Oct 17, 2019 | mahesh |

ಹೊಸದಿಲ್ಲಿ: ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ರಾಷ್ಟ್ರೀಯ ಸಮಿತಿ (ಎನ್‌ಸಿಇಆರ್‌ಟಿ) ತನ್ನ 14 ವರ್ಷಗಳಷ್ಟು ಹಳೆಯ ಪಠ್ಯಕ್ರಮ ರೂಪುರೇಷೆಯನ್ನು ಮರುಪರಿಶೀಲನೆ ನಡೆಸಲು ನಿರ್ಧ ರಿಸಿದೆ. ಇದಕ್ಕಾಗಿ ಶೀಘ್ರದಲ್ಲೇ ಸಮಿತಿ ರಚನೆ ಮಾಡಲಾ ಗು ತ್ತದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಂತಿಮ ಗೊಳ್ಳು ತ್ತಿದ್ದಂ ತೆಯೇ, ಅದಕ್ಕೆ ಸೂಕ್ತವಾಗಿ ಎನ್‌ಸಿಇಆರ್‌ಟಿ ಪಠ್ಯಕ್ರಮ ರೂಪ ರೇಖೆಯೂ ಬದಲಾಗಬೇಕಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇ ಶಕ ಹೃಷಿಕೇಶ ಸೇನಾಪತಿ ಹೇಳಿದ್ದಾರೆ. ಈವರೆಗೆ 4 ಬಾರಿ ಪಠ್ಯ ಕ್ರಮ ರೂಪುರೇಷೆ ಬದಲಿಸಲಾಗಿದೆ. ಈ ಹಿಂದೆ 2005ರಲ್ಲಿ ಬದ ಲಾವಣೆ ಮಾಡ ಲಾ ಗಿತ್ತು. ತಿಂಗಳ ಕೊನೆಯ ವೇಳೆಗೆ ಸಮಿತಿ ರಚನೆ ಮಾಡಲಾಗುತ್ತದೆ. ಸಮಿತಿಯ ಶಿಫಾ ರಸಿನ ಆಧಾರ ದಲ್ಲಿ ಅಂತಿಮವಾಗಿ ಪಠ್ಯಕ್ರಮವೂ ಬದಲಾಗು ತ್ತದೆ ಎಂದು ಅವರು ಹೇಳಿದ್ದಾರೆ.

Advertisement

ಇದೇ ವೇಳೆ ಮೈಸೂರು ಸೇರಿದಂತೆ, ಆರು ಬ್ಲಾಕ್‌ಗಳಲ್ಲಿ ಪ್ರಾಥ ಮಿಕ ಶಿಕ್ಷಣ ಗುಣಮಟ್ಟದ ಕುರಿತು ಎನ್‌ಸಿಇಆರ್‌ಟಿ ಸಮೀಕ್ಷೆ ನಡೆ ಸುತ್ತಿದೆ. ಎನ್‌ಸಿಇಆರ್‌ಟಿ ತಂಡವು ಈ ಬ್ಲಾಕ್‌ಗಳಿಗೆ ಭೇಟಿ ನೀಡಿ, ಸಮೀಕ್ಷೆ ನಡೆಸಲಿದೆ. ಇದರ ವರದಿಯನ್ನೂ ಹೊಸ ಪಠ್ಯಕ್ರಮ ರೂಪುರೇಷೆ ಸಿದ್ಧಪಡಿಸುವಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next