Advertisement

ಎನ್‌ಸಿಸಿ ನಾಯಕತ್ವ ಶಿಬಿರ ಆರಂಭ

03:21 PM Jul 14, 2019 | Team Udayavani |

ಹುಬ್ಬಳ್ಳಿ: ಎನ್‌ಸಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಸಂದೇಹಗಳನ್ನು ನಿವಾರಣೆ ಮಾಡಿಕೊಂಡು, ವ್ಯಕ್ತಿತ್ವ ವಿಕಸನ ಕೈಗೊಂಡಲ್ಲಿ ಶಿಬಿರ ಆಯೋಜನೆ ಸಾರ್ಥಕವಾಗುತ್ತದೆ ಎಂದು 28 ಕರ್ನಾಟಕ ಬೆಟಾಲಿಯನ್‌ ಎನ್‌ಸಿಸಿ ಗ್ರೂಪ್‌ ಕಮಾಂಡರ್‌ ಕರ್ನಲ್ ಜೆ.ಜೆ. ಅಬ್ರಹಾಂ ಹೇಳಿದರು.

Advertisement

ಕೆಎಲ್ಇ ತಾಂತ್ರಿಕ ವಿವಿ ಬಯೋಟೆಕ್‌ ಸಭಾಂಗಣದಲ್ಲಿ 10 ದಿನಗಳ ಎನ್‌ಸಿಸಿ ನಾಯಕತ್ವ ತರಬೇತಿ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು. ಕೆಡೆಟ್‌ಗಳು ವ್ಯಕ್ತಿತ್ವ ವಿಕಸನದ ಕುರಿತು ಮನಸಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬೇಕು. ಪ್ರಶ್ನೆ ಕೇಳುವ ಪರಿಪಾಠ ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳುವುದಕ್ಕೆ ಹಿಂಜರಿದರೆ ಅದರಿಂದ ನಮಗೆ ನಷ್ಟವೇ ಹೊರತು ಬೇರೆಯವರಿಗಲ್ಲ ಎಂದರು.

ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಉದ್ಯಮ, ನಾಯಕತ್ವ ಕುರಿತು ವಿವಿಧ ಉಪನ್ಯಾಸಗಳನ್ನು ಸಂಘಟಕರು ವ್ಯವಸ್ಥಿತವಾಗಿ ನಿಯೋಜಿಸಿದ್ದಾರೆ. ಕೆಡೆಟ್‌ಗಳು ಪ್ರತಿಯೊಂದು ಉಪನ್ಯಾಸವನ್ನು ಆಸಕ್ತಿಯಿಂದ ಕೇಳಬೇಕು. ಜೀವನಕ್ಕೆ ಅನುಕೂಲವಾಗುವ, ಭವಿಷ್ಯ ರೂಪಿಸುವ ಅಂಶಗಳನ್ನು ಶಿಬಿರದಿಂದ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಎನ್‌ಸಿಸಿ ಎಂದರೆ ಕೇವಲ ಸೈನ್ಯಕ್ಕೆ ಸೇರುವುದಕ್ಕಷ್ಟೇ ಅಲ್ಲ. ಸೈನ್ಯಕ್ಕೆ ಸೇರಲೇಬೇಕೆಂದು ನಾವು ಒತ್ತಡವನ್ನೂ ಹೇರುವುದಿಲ್ಲ. ಇಲ್ಲಿ ಶಿಸ್ತು ಕಲಿಸಿಕೊಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಂಡ 400 ಕೆಡೆಟ್‌ಗಳು ಶಿಸ್ತುಬದ್ಧ ವರ್ತನೆಯಿಂದ ಆಯೋಜಕರ ಶ್ರಮವನ್ನು ಸಾರ್ಥಕಪಡಿಸಬೇಕು ಎಂದರು. ಮುಖ್ಯ ತರಬೇತಿ ಅಧಿಕಾರಿ ಡೇನಿಯಲ್ ಅಬ್ರಹಾಂ, ಲೆಫ್ಟಿನೆಂಟ್ ಎ.ಡಿ. ಕಾಮತ, ಲೆಫ್ಟಿನೆಂಟ್ ಕರ್ನಲ್ ಎ. ವಿವೇಕಾನಂದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next