Advertisement

ಉಸಿರಾಟದ ತೊಂದರೆ: ಎನ್‌ಸಿಸಿ ಕ್ಯಾಂಪ್‌ ವಿದ್ಯಾರ್ಥಿನಿ ಸಾವು

05:04 PM Jun 26, 2018 | udayavani editorial |

ಕೊಯಮುತ್ತೂರು : ಇಲ್ಲಿನ ಸರಕಾರಿ ಕಲಾ ಪದವಿ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಎನ್‌ಸಿಸಿ ಕ್ಯಾಂಪ್‌ ಮುಗಿಸಿ ತನ್ನ ಕೋಣೆಗೆ ಮರಳಿದ ಬಳಿಕ ತೀವ್ರ  ಉಸಿರಾಟದ ತೊಂದರೆಯನ್ನು ಅನುಭವಿಸಿ ಮೃತಪಟ್ಟ ಘಟನೆ ನಡೆದಿದೆ.

Advertisement

18 ವರ್ಷ ಪ್ರಾಯದ ಹರಿಪ್ರಿಯಾ ಎಂಬ ವಿದ್ಯಾರ್ಥಿನಿ ಇತರ ಕೆಲವು ವಿದ್ಯಾರ್ಥಿನಿಯರ ಜತೆಗೂಡಿ ಶರವಣಂಪಟ್ಟಿ ಎಂಬಲ್ಲಿನ ಖಾಸಗಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಎನ್‌ಸಿಸಿ ಕ್ಯಾಂಪ್‌ ಗೆ ಹೋಗಿದ್ದಳು.

ದಿನದ ಕವಾಯತು ಮುಗಿಸಿ ತನ್ನ ಕೋಣೆಗೆ ಮರಳಿದ ಆಕೆಗೆ ಉಸಿರಾಟ ಕಷ್ಟವೆನಿಸಿತು.ಎನ್‌ಸಿಸಿ ಅಧಿಕಾರಿಗಳು ಆಕೆಯನ್ನು ಕೂಡಲೇ  ಸಮೀಪದ ಆಸ್ಪತ್ರೆಗೆ ಒಯ್ದರು. ಅಲ್ಲಿನ ವೈದ್ಯರು ಅದಾಗಲೇ ಆಕೆ ಮೃತಪಟ್ಟಿರುವುದಾಗಿ ಪ್ರಕಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next